ಭಾರತ ನೂರನೇ ಉಪಗ್ರಹ ಉಡಾವಣೆ ಮಾಡಿದ್ದಕ್ಕೆ ಪಾಕಿಸ್ತಾನ ಹೊಟ್ಟೆ ಉರಿಸಿಕೊಳ್ಳಲು ಕಾರಣವೇನು ಗೊತ್ತಾ?
ದೆಹಲಿ: ಇತ್ತೀಚೆಗೆ ಭಾರತದ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸುತ್ತಿದ್ದು, ಜಾಗತಿಕವಾಗಿ ಗುರುತಿಸಲ್ಪಡುತ್ತಿದೆ. ಇದರ ಭಾಗವಾಗಿ ಶುಕ್ರವಾರ ಭಾರತ ಭೂಪರಿವೀಕ್ಷಣಾ ಉಪಗ್ರಹ ಕಾರ್ಟೋಸ್ಯಾಟ್ ಸೇರಿ 31 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿ ಐತಿಹಾಸಿಕ ಸಾಧನೆ ಮಾಡಿದೆ.
ಆದರೆ ಇದೇ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ…
ಹೌದು, ಭಾರತದ ಈ ಸಾಧನೆಗೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಇದೇ ಕಾರಣಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಆಕ್ರೋಶದ ಮಾತುಗಳನ್ನಾಡಿದ್ದು, “ಭಾರತ ಮಿಲಿಟರಿ ಉದ್ದೇಶಗಳಿಗಾಗಿ ಉಪಗ್ರಹ ಉಡಾವಣೆ ಮಾಡುವುದರಿಂದ ದೂರವಿರಬೇಕು” ಎಂದು ಪ್ರಕಟಣೆ ಹೊರಡಿಸಿದೆ.
ಭಾರತದ ಎಲ್ಲ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಶುಕ್ರವಾರ ಉಡಾವಣೆಗೊಳಿಸಿದ ಉಪಗ್ರಹಗಳು ನಾಗರಿಕ ಹಾಗೂ ಮಿಲಿಟರಿ ಉದ್ದೇಶಕ್ಕೆ ಉಡಾವಣೆಗೊಳಿಸಲಾಗಿದೆ. ಇದು ಪ್ರಾದೇಶಿಕ ಭದ್ರತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರಿಂದ ಭಾರತ ಇಂಥ ಉಪಗ್ರಹ ಉಡಾವಣೆಗೊಳಿಸಬಾರದು ಎಂದು ಪಾಕಿಸ್ತಾನ ಹೊಟ್ಟೆಕಿಚ್ಚು ವ್ಯಕ್ತಪಡಿಸಿದೆ.
ಹಾಗೆ ನೋಡಿದರೆ ಪಾಕಿಸ್ತಾನ 1961ರಲ್ಲೇ ಸ್ಪೇಸ್ ಆ್ಯಂಡ್ ಅಪ್ಪರ್ ಆಟ್ಮೋಸ್ಫೀಯರ್ ರಿಸರ್ಚ್ ಕಮಿಷನ್ (ಸುಪಾರ್ಕೋ) ಸ್ಥಾಪಿಸಿದ್ದು, ಭಾರತ ಅದಾದ ಎಂಟು ವರ್ಷಗಳ ಬಳಿಕ ಇಸ್ರೋ ಸ್ಥಾಪಿಸಿದೆ. ಆದರೂ ಬಾಹ್ಯಾಕಾಶ ಕ್ಷೇತ್ರದಲ್ಲಿ ನಿರೀಕ್ಷಿತ ಸಾಧನೆ ಮಾಡದ ಪಾಕಿಸ್ತಾನ ಈಗ ಮಿಲಿಟರಿ ಹೆಸರಿನಲ್ಲಿ ಭಾರತದ ವಿರುದ್ಧ ಮಾತನಾಡುತ್ತಿದೆ.
Leave A Reply