ನಿಮಗ್ ಗೊತ್ತಾ? ಪ್ರಧಾನಿ ಮೋದಿ ತೊಡೋ ಬಟ್ಟೆಗೆ ಸರ್ಕಾರದ ಹಣ ಪಡೆಯಲ್ಲ!
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೇ ಹಾಗೆ. ಅವರು ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದರೂ ಕುಟುಂಬದವರನ್ನು ರಾಜಕೀಯದ ಪಡಸಾಲೆಗೆ ತರಲಿಲ್ಲ. ತಮಗಾಗಿ ದೊಡ್ಡದೊಂದು ಬಂಗಲೆ ಕಟ್ಟಿಸಿಕೊಳ್ಳಲಿಲ್ಲ. ಅಷ್ಟೇ ಏಕೆ ಪ್ರಧಾನಿಯಾದಾಗಿನಿಂದ ಇಂದಿನವರೆಗೂ ಒಂದೇ ಒಂದು ರಜೆಯನ್ನೂ ತೆಗೆದುಕೊಳ್ಳದೆ ಇಡೀ ಜೀವನವನ್ನು ದೇಶಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ.
ಆದರೆ ಇದನ್ನು ಸಹಿಸದ ವಿರೋಧ ಪಕ್ಷಗಳು ಮೋದಿ ಅವರು ದುಬಾರಿ ಸೂಟು ತೊಡುತ್ತಾರೆ, ಸೂಟು-ಬೂಟಿನ ಮೋದಿ ಎಂದು ಟೀಕಿಸುತ್ತಾರೆ.
ಆದರೆ ಪ್ರಧಾನಿ ಮೋದಿ ಅವರು ತಾವು ತೊಡೋ ಬಟ್ಟೆಯ ವೆಚ್ಚವನ್ನು ಸರ್ಕಾರದಿಂದ ಪಡೆಯಲ್ಲ ಹಾಗೂ ಸರ್ಕಾರವೂ ಇವರ ಬಟ್ಟೆಗೆ ಹಣ ನೀಡುವುದಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
ಆರ್ ಟಿಇ ಕಾರ್ಯಕರ್ತ ರೋಹಿತ್ ಸಬರ್ ವಾಲ್ ಎಂಬುವವರು ಈ ಕುರಿತು ಸರ್ಕಾರಕ್ಕೆ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದು, ಪ್ರಧಾನಿಗಳ ಬಟ್ಟೆಗೆ ಪ್ರಧಾನಮಂತ್ರಿ ಕಾರ್ಯಾಲಯ ಯಾವುದೇ ಹಣ ನೀಡುವುದಿಲ್ಲ ಎಂದು ಪಿಎಂಒ ಮಾಹಿತಿ ನೀಡಿದೆ.
ಯಾವುದೇ ಕಾರಣ ಸಿಗದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಬಟ್ಟೆಗೆ ಹೆಚ್ಚಿನ ಹಣ ವ್ಯಯಿಸುತ್ತಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಅಲ್ಲದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಂತೂ ಕಳೆದ ವರ್ಷ ಪ್ರಧಾನಿ ಮೋದಿ ಅವರು ಪ್ರತಿದಿನ ಬಟ್ಟೆಗಾಗಿ 10 ಲಕ್ಷ ರೂಪಾಯಿ ವ್ಯಯಿಸಿದ್ದರು ಎಂದು ಹುರುಳಿಲ್ಲದೆ ಆರೋಪಿಸಿದ್ದರು.
Leave A Reply