ಹಿಂದೂ ಉಗ್ರರೆಂದ ಕಾಂಗ್ರೆಸ್ ಗೆ ಭೀತಿ… ಸಿದ್ದರಾಮಯ್ಯಗೆ ರಾಹುಲ್ ತಪರಾಕಿ..?
ಬೆಂಗಳೂರು: ಕಾಂಗ್ರೆಸ್ ಮುಕ್ತ ಭಾರತವಾಗುವತ್ತ ದೇಶ ಸಾಗುತ್ತಿದೆ, ಅತ್ತ ಬಿಜೆಪಿ ಸರಣಿ ಗೆಲುವುಗಳನ್ನು ಸಾಧಿಸುತ್ತಿದೆ. ಇದೆಲ್ಲದರ ಮಧ್ಯೆ ದೇಶದಲ್ಲಿ ಕಾಂಗ್ರೆಸ್ ನೆಲೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಅದಕ್ಕಾಗಿಯೇ ದೇಶದಲ್ಲಿ ಜಾತಿ ಒಡೆಯುವುದು, ಹಿಂದೂ ಧರ್ಮದಲ್ಲಿ ಬಿಕ್ಕಟ್ಟು ಮೂಡಿಸುವುದು, ವಿದೇಶದಲ್ಲಿ ದೇಶದ ಮಾನ ಹರಾಜಾಕುವುದು ಸೇರಿ ನಾನಾ ಷಡ್ಯಂತ್ರ ನಡೆಸುತ್ತಿದೆ. ಆದರೆ ಇದರ ಮಧ್ಯೆ ಹಿಂದೂಗಳು ಉಗ್ರಗಾಮಿಗಳು ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ವಿರುದ್ಧ ಹಿಂದೂಗಳು ತಿರುಗಿ ಬೀಳಲು ಕಾರಣವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಈ ಹೇಳಿಕೆ ಇರಿಸು ಮುರಿಸು ಉಂಟು ಮಾಡಿದೆ.
ಆರ್ ಎಸ್ ಎಸ್, ಬಿಜೆಪಿ ಮತ್ತು ಹಿಂದೂಗಳು ಉಗ್ರಗಾಮಿಗಳು ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಬಲಕ್ಕೆ ನಿಂತ ಕರ್ನಾಟಕ ಕಾಂಗ್ರೆಸ್ ಮುಖಂಡರು ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಹಿಂದೂ ವಿರೋಧಿ, ರಾಷ್ಟ್ರವಾದದ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕಾಂಗ್ರೆಸ್ ಗುಜರಾತ್ ಚುನಾವಣೆಯಲ್ಲಿ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಅಲೆಯುವ ಮೂಲಕ ನಾನು ಹಿಂದೂ ಎಂಬುದನ್ನು ಪ್ರದರ್ಶನಕ್ಕಿಟ್ಟಿದ್ದರು. ಅಲ್ಲದೇ ನಾನು ಜನಿವಾರ ದಾರಿ ಹಿಂದೂ ಎಂದು ಘೋಷಿಸಿದ್ದರು. ಇದೆಲ್ಲವೂ ಚುನಾವಣೆ ನಾಟಕ ಎಂಬುದು ತಿಳಿದು ಜನರು ಗುಜರಾತ್ ನಲ್ಲಿ ಬಿಜೆಪಿಗೆ ಮತ ನೀಡಿದ್ದರು.
ಫಲ ನೀಡದ ರಾಹುಲ್ ಸಾಫ್ಟ್ ಹಿಂದೂತ್ವ
ಹಿಂದೂತ್ವದ ಕಡು ವಿರೋಧಿ ಸಿದ್ದರಾಮಯ್ಯ ರಾಜ್ಯದಲ್ಲಿ ನಿರಂತರವಾಗಿ ಹಿಂದೂ ವಿರೋಧಿ ಧೋರಣೆಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತಲೇ ಬಂದಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದು, ಹಿಂದೂ ಸಂಪ್ರದಾಯ, ಆಚರಣೆಗಳ ವಿರುದ್ಧ ಮಾತನಾಡುವುದು, ಹಿಂದೂ ವಿರೋಧಿ ನೀತಿಗಳನ್ನು ಜಾರಿಗೆ ತರುವುದು, ಅಲ್ಪಸಂಖ್ಯಾತ ತುಷ್ಟೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಹಿಂದೂ ವಿರೋಧಿಯಂತೆ ಸಿದ್ದರಾಮಯ್ಯ ವರ್ತಿಸಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದಲ್ಲಿ ನಾನು ಹಿಂದೂ ಎಂದು ಹೇಳುತ್ತಾ ತಿರುಗಾಡುತ್ತಿದ್ದಾರೆ. ಅಲ್ಲದೇ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಸೂಚನೆ ಮೆರೆಗೆ ಸಿಎಂ ಸಿದ್ದರಾಮಯ್ಯ ತಮ್ಮ ಹಿಂದೂ ವಿರೋಧಿ ನೀತಿಯ ಧನಿಯನ್ನು ಕ್ಷೀಣಿಸಿದ್ದು ದೇವಸ್ಥಾನಗಳಿಗೆ ಅಲೆಯುವುದು, ನನ್ನ ಹೆಸರಲ್ಲೂ ರಾಮನಿದ್ದಾನೆ ಎನ್ನುವುದು ಸೇರಿ ಹಲವು ನೌಟಂಕಿಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
Leave A Reply