ಸೌದಿ ಐತಿಹಾಸಿಕ ನಿರ್ಧಾರ, ಪ್ರಥಮ ಬಾರಿಗೆ ಮಹಿಳೆಯರಿಗೆ ಸ್ಟೇಡಿಯಂನಲ್ಲಿ ಕ್ರೀಡೆ ನೋಡಲು ಅವಕಾಶ
ಸೌದಿ ಅರೇಬಿಯಾ: ಜಗತ್ತು ಬೆಳಕಿನ ವೇಗದಲ್ಲಿ ಸಾಗುತ್ತಿದ್ದರೇ, ಇನ್ನು ಕಠೋರ ನಿಯಮಗಳ ಮೂಲಕ ಮಹಿಳೆಯರನ್ನು ಶೋಷಿಸುತ್ತಿದ್ದ ಸೌದಿ ಅರೇಬಿಯಾ ಇದೀಗ ಬದಲಾವಣೆಯುತ್ತ ಸಾಗುತ್ತಿದೆ. ನಾಲ್ಕು ಗೋಡೆಯ ಕೋಣೆಗೆ ಸೀಮಿತವಾಗಿದ್ದ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲು ಸೌದಿ ಸರ್ಕಾರ ನಿರ್ಧಸಿದೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯರಿಗೆ ಫುಟಬಾಲ್ ಕ್ರೀಡೆಯನ್ನು ನೇರವಾಗಿ ನೋಡಲು ಸೌದಿ ಸರ್ಕಾರ ಅವಕಾಶ ನೀಡಿದ್ದು, ಮಹಿಳೆಯರು ಸ್ಟೇಡಿಯಂನಲ್ಲಿ ಫುಟಬಾಲ್ ಪಂದ್ಯಾವಳಿ ವೀಕ್ಷಿಸಿ ನೋಡಿ ಖುಷಿ ಪಟ್ಟರು.
ವಿಶ್ವವಿದ್ಯಾಲಯವೊಂದರ 300 ಯುವತಿಯರಿಗೆ ಜೆಡ್ಡಾ ರೆಡ್ ಸಿಟಿಯಲ್ಲಿರುವ ಪರ್ಲ್ ಕ್ರೀಡಾಂಗಣದಲ್ಲಿ ಫುಟಬಾಲ್ ಸೋಸರ್ ನೋಡಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಶತಮಾನಗಳಿಂದ ನಡೆದುಕೊಂಡು ಬಂದಿದ್ದ ಅನಿಷ್ಠ ಪದ್ಧತಿಯನ್ನು ಸೌದಿ ಸರ್ಕಾರ ಹೊಡೆದೊಡಿದೆ. ಈ ಮುಂಚೆ ಮಹಿಳೆಯರು ಸ್ಟೇಡಿಯಂನಲ್ಲಿ ಕ್ರೀಡೆಯನ್ನು ವೀಕ್ಷಿಸುವಂತಿರಲಿಲ್ಲ.
ಜೆಡ್ಡಾದ ಪರ್ಲ್ ಕ್ರೀಡಾಂಗಣದಲ್ಲಿ ಅಲ್ ಅಹ್ಲಿ ಮತ್ತು ಅಲ್ ಬತಿನ್ ತಂಡಗಳ ಮಧ್ಯೆ ಮೊದಲ ಬಾರಿಗೆ ನೇರವಾಗಿ ಕ್ರೀಡೆ ವೀಕ್ಷಿಸಿ ಮಹಿಳೆಯರು ಪತಿ, ಮಕ್ಕಳು ಜತೆಯಾಗಿ ಸಂಭ್ರಮಿಸಿದರು. ಜೆಡ್ಡಾ ದಮಾಮ್, ರಿಯಾದ್ ಗಳಲ್ಲಿ ಪಂದ್ಯಗಳನ್ನು ಕುಟುಂಬ ಸಮೇತ ವೀಕ್ಷಿಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಸೌದಿ ಕ್ರೀಡಾ ಕ್ರೀಡಾ ಪ್ರಾಧಿಕಾರ ತಿಳಿಸಿದೆ.
ಇಂತಹ ಮಹತ್ವದ ಬೆಳವಣಿಗೆ ಎಂದೋ ನಡೆಯಬೇಕಿತ್ತು. ಜಗತ್ತು ಬದಲಾಗುತ್ತಿದೆ. ನಾವು ಬದಲಾಗಬೇಕು. ಅದಕ್ಕೆ ಇದು ಮುನ್ನುಡಿ, ಈ ನಿಯಮ ಜಾರಿಗೆ ತಂದಿರುವ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ . ಪಂದ್ಯ ವೀಕ್ಷಿಸಿದ ಮುನೀರಾ ಅಲ್ ಗಮ್ದಿ.
ಕ್ರಾಂತಿಕಾರಿ ಬದಲಾವಣೆಗಳು
ಸೌದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಿವೆ. ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಕ್ರೀಡೆಯಲ್ಲಿ ಯೋಗಕ್ಕೆ ಅವಕಾಶ ನೀಡಲಾಗಿತ್ತು, ಕಠೋರ ಇಸ್ಲಾಂ ನಿಯಮ ಪಾಲಕರಾದರೂ ಮಹಿಳೆಯರಿಗೆ ಕಾರು ಚಾಲನೆ ಪರವಾನಗಿ ನೀಡಲಾಗಿತ್ತು ಮತ್ತು ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ಪ್ರದರ್ಶನ ಆಯೋಜಿಸಲಾಗಿತ್ತು. ಇದೀಗ ಮಹಿಳೆಯರಿಗೆ ಸ್ಟೇಡಿಯಂ ನಲ್ಲಿ ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಅವಕಾಶ ನೀಡುವ ಮೂಲಕ ಮಹಿಳೆಯರ ಸ್ವಾತಂತ್ರ್ಯಕ್ಕೆ ಬೆಲೆ ನೀಡುತ್ತಿದೆ.
Leave A Reply