ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಕರಾವಳಿಯ ಕುವರಿಗೆ ಸ್ಥಾನ
ಮಂಗಳೂರು: ವಿಜಯಪುರದ ಗಾಯಕವಾಡ್ ಸೇರಿ ಹಲವು ಕನ್ನಡದ ಕುವರಿಯರು ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಿಂಚಿದ್ದಾರೆ.. ಮಿಂಚುತ್ತಿದ್ದಾರೆ. ಇದೀಗ ಅವರ ಸಾಲಿಗೆ ಮತ್ತೊಬ್ಬ ಕನ್ನಡದ ಕುವರಿ, ಕರಾವಳಿಯ ಕುಡಿ ಮುಂಬಯಿ ಆಟಗಾರ್ತಿ ಜೆಮಿಯಾ ರಾಡ್ರಿಗಸ್ ಸೇರಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿದ್ದು ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದ್ದಾರೆ.
ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯ ತಂಡದಲ್ಲಿ 17 ವರ್ಷದ ಜೆಮಿಯಾ ಸ್ಥಾನ ಪಡೆದಿದ್ದಾರೆ. 17 ವರ್ಷದ ಯುವ ಬ್ಯಾಟ್ಸ್‌ವುಮನ್ ಜೆಮಿಮಾ ಅವರು ಮೂಲತಃ ಮಂಗಳೂರಿನವರು.
ಜೆಮಿಮಾ ಅವರ ತಂದೆ-ತಾಯಿ ಮಂಗಳೂರಿನವರಾಗಿದ್ದು, ಜೆಮಿಯಾ ಹುಟ್ಟಿದ್ದು, ಬೆಳೆದಿದ್ದು ಮುಂಬಯಿನಲ್ಲಿ. ಆದರೂ ಅವರು ನಾನು ಮಂಗಳೂರಿನವಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಮುಂಬಯಿನ ಬಾಂದ್ರಾದಲ್ಲಿ ವಾಸಿಸುತ್ತಿರುವ ಜೆಮಿಮಾ, ರಿಜ್ವಿ ಕಾಲೇಜಿನಲ್ಲಿ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ತಂದೆ ಇವಾನ್ ರಾಡ್ರಿಗಸ್ ಮತ್ತು ತಾಯಿ ಲವಿಟಾ ಬಾಂದ್ರಾದಲ್ಲಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದಾರೆ. ತಂದೆಯೇ ಜೆಮಿಯಾ ಅವರಿಗೆ ಚಿಕ್ಕವರಿದ್ದಾಗ ತರಬೇತಿ ನೀಡುತ್ತಿದ್ದರು.
ಜೆಮಿಯಾ ಬಲಗೈ ಆರಂಭಿಕ ಆಟಗಾರ್ತಿಯಾಗಿದ್ದಾರೆ. ಕಿರಿಯರ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ್ದಾರೆ. ಭಾರತ ತಂಡದ ಪರ ಅವಕಾಶ ಸಿಕ್ಕರೆ ದ್ವಿಶತಕ ಭಾರಿಸುವ ಮನದಿಂಗಿತ ಹೊಂದಿದ್ದಾರೆ. ಇನ್ನು 19 ವರ್ಷದೊಳಗಿನವರ ದೇಶೀಯ ಕ್ರಿಕೆಟ್‌ನಲ್ಲಿ ಜೆಮಿಮಾ 19 ರ ವಯೋಮಿತಿಯಲ್ಲಿ ಸಾವಿರ ರನ್ ಗಳಿಸಿದ ಸಾಧನೆ ಹೊಂದಿದ್ದಾರೆ. 50 ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ ಬಳಿಕ ದ್ವಿಶತಕ ಸಿಡಿಸಿದ ಭಾರತದ ಮೊದಲ ಆಟಗಾರ್ತಿ ಜೆಮಿಯಾ.
Leave A Reply