25 ಲಕ್ಷ ರೂಪಾಯಿ ಕ್ಯಾನ್ಸರ್ ಆಸ್ಪತ್ರೆಗೆ ದಾನ ನೀಡಿ ಪಿವಿ ಸಿಂಧು
ಹೈದರಾಬಾದ್: ದೇಶದ ಕೋಟ್ಯಂತರ ಮಹಿಳೆಯರಿಗೆ ಸ್ಫೂರ್ತಿ ನೀಡುವ ವ್ಯಕ್ತಿ. ಒಲಿಂಪಿಕ್ ನಲ್ಲಿ ಬ್ಯಾಂಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಮಹಿಳೆಯರ ಸಾಧನೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ದ ವ್ಯಕ್ತಿ. ಪದ್ಮಶ್ರೀ ಪುರಸ್ಕೃತೆ ಪಿವಿ ಸಿಂಧು ಇದೀಗ ಮಾನವೀಯತೆ ಪ್ರದರ್ಶಿಸುವ ಮೂಲಕ ಸುದ್ದಿಯಾಗಿದ್ದಾರೆ.
ಖ್ಯಾತ ಬ್ಯಾಡ್ಮಿಂಟನ್ ತಾರೆ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ, ಪದ್ಮಶ್ರೀ ಪುರಸ್ಕೃತೆ ಪಿವಿ ಸಿಂಧು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಗೆಲುವು ಸಾಧಿಸಿದ ಹಣವನ್ನು ಕ್ಯಾನ್ಸರ್ ಆಸ್ಪತ್ರೆಯೊಂದಕ್ಕೆ ದಾನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ, 25 ಲಕ್ಷ ರೂಪಾಯಿ ಗೆದಿದ್ದರು. ಗೆದ್ದ ಅಷ್ಟೂ ಹಣವನ್ನು ಬಸವತಾರಕಂ ಇಂಡೋ-ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆಗೆ ಸಿಂಧು ದಾನ ನೀಡಿದ್ದಾರೆ ಎನ್ನಲಾಗಿದೆ.
ಟಾಲಿವುಡ್ ನಟ, ಆಸ್ಪತ್ರೆಯ ಮುಖ್ಯಸ್ಥ ಬಾಲಯ್ಯ ಅವರಿಗೆ 25 ಲಕ್ಷ ರೂಪಾಯಿಯ ಚೆಕ್ ನೀಡಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ನೆರವಾಗಲು ಸಿಂಧು ಸಹಾಯ ಹಸ್ತ ಚಾಚಿದ್ದಾರೆ. ಸಿಂಧು ಅವರ ಈ ಕಾರ್ಯ ಮಾದರಿಯಾಗಿದ್ದು, ಜನರ ಮೆಚ್ಚುಗೆಗೆ ಕಾರಣವಾಗಿದೆ.
Leave A Reply