ವಿಶ್ವಸಂಸ್ಥೆ ಭಾರತೀಯ ಪ್ರತಿನಿಧಿ ಟ್ವಿಟ್ ಅಕೌಂಟ್ ಹ್ಯಾಕ್ ಮಾಡಿದ ಪಾಕಿ ಹ್ಯಾಕರ್ ಗಳು
ದೆಹಲಿ: ಸದಾ ಭಾರತದ ಸರ್ಕಾರ, ಅಧಿಕಾರಿಗಳು, ಜನರು, ಪ್ರತಿನಿಧಿಗಳನ್ನು ಗುರಿಯಾಗಿಟ್ಟುಕೊಂಡು ದುಷ್ಟತನ ಮೆರೆಯುವ ಪಾಕಿಸ್ತಾನದ ಹ್ಯಾಕರ್ ಗಳು ಇದೀಗ ಭಾರತದ ವಿಶ್ವ ಸಂಸ್ಥೆ ಪ್ರತಿನಿಧಿಯ ಟ್ವಿಟ್ ಅಕೌಂಟ್ ಹ್ಯಾಕ್ ಮಾಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಅವರ ಟ್ವೀಟರ್ ಅಕೌಂಟ್ ನನ್ನು ಪಾಕಿಸ್ತಾನ ಹ್ಯಾಕ್ ರಗಳು ಹ್ಯಾಕ್ ಮಾಡಿ ಪಾಕಿಸ್ತಾನ ಧ್ವಜ ಅಳವಡಿಸುವ ಮೂಲಕ ದುರುಳತನ ಮೆರೆದಿದ್ದಾರೆ.
ಕೆಲ ಕ್ಷಣಗಳ ನಂತರ ಟ್ವಿಟರ್ ಅಕೌಂಟ್ ನ್ನು ರಿ ಸ್ಟೋರ್ ಮಾಡಿಕೊಳ್ಳಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸೈಯದ್ ‘ನನ್ನ ಟ್ವಿಟ್ ಅಕೌಂಟ್ ಇದೀಗ ಮರುಕಳಿಸಿದೆ. ಟ್ವೀಟ್ ಹ್ಯಾಕಿಂಗ್ ತಡೆಗಟ್ಟಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಹ್ಯಾಕಿಂಗ್ ನಿಂದ ಹೊರ ತೆಗೆಯಲು ಸಹಾಯ ಮಾಡಿದ ಟ್ವಿಟರ್ ಇಂಡಿಯಾ ಮತ್ತು ವಿಶ್ವಸಂಸ್ಥೆಯ ಪ್ರತಿನಿ.ಧಿಗಳಿಗೆ ಧನ್ಯವಾದ ಹೇಳಿದ್ದಾರ
ಇತ್ತೀಚೆಗೆ ಹ್ಯಾಕ್ ಮಾಡಿ, ಪಾಕಿಸ್ತಾನದ ಧ್ವಜ ಮತ್ತು ಅಧ್ಯಕ್ಷ ಮನ್ಮೂನ್ ಹುಸೇನ್ ಭಾವಚಿತ್ರವನ್ನು ಪ್ರೊಫೈಲ್ ಚಿತ್ರವನ್ನು ಅಳವಡಿಸಲಾಗಿದೆ. ಕೆಲ ಗಂಟೆ ಆ ಧ್ವಜಗಳ ಪ್ರೊಪೈಲ್ ಚಿತ್ರಗಳಾಗಿಯೇ ಉಳಿದಿದ್ದವು, ನಂತರ ತಂತ್ರಜ್ಞರ ಸಹಕಾರದಿಂದ ಅಕೌಂಟ್ ನ್ನು ಹ್ಯಾಕರ್ ಗಳ ಹಿಡಿತದಿಂದ ಕಸಿದುಕೊಳ್ಳಲಾಗಿದೆ.
Leave A Reply