ಶಿಷ್ಟಾಚಾರ ಮರೆತು ಆತ್ಮೀಯ ಸ್ನೇಹಿತ ಇಸ್ರೇಲ್ ಪ್ರಧಾನಿ ನೇತಾನ್ಯುಹ್ ರನ್ನ ಸ್ವಾಗತಿಸಿದ ಮೋದಿ
Posted On January 14, 2018
0
ದೆಹಲಿ: ಭಾರತಕ್ಕೆ ಬಂದಿಳಿದ ಇಸ್ರೇಲ್ ಪ್ರಧಾನ ಮಂತ್ರಿ ನೇತಾನ್ಯುಹ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ನಿಯಮಗಳನ್ನು ಮೀರಿ, ಶಿಷ್ಟಚಾರಗಳನ್ನು ಪಾಲಿಸಿದೆ ದೇಶಕ್ಕೆ ಬಂದ ಆತ್ಮೀಯ ಸ್ನೇಹಿತನನ್ನು ಸ್ವಾಗತಿಸುವ ಮೂಲಕ ಗಮನ ಸೆಳೆದಿದ್ದಾರೆ.
15 ವರ್ಷಗಳ ಬಳಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಇಸ್ರೇಲ್ ಪ್ರಧಾನಿಯನ್ನು ದೆಹಲಿ ವಿಮಾನ ನಿಲ್ದಾಣದ ಬಳಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ವಿಶೇಷ ವಿಮಾನದಲ್ಲಿ ಬಂದ ನೆತಾನ್ಯುಹ್ ಮತ್ತು ಪತ್ನಿ ಸಾರಾ ಅವರನ್ನು ಮೋದಿ ಸ್ವಾಗತಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಅಧಿಕೃತ ಸ್ವಾಗತ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಭೋಜನ ಕೂಟ ನಡೆಯಲಿದೆ.
ಸ್ನೇಹಿತ ನೆತಾನ್ಯುಹ ಅವರನ್ನು ಸ್ವಾಗತಿಸುತ್ತೇನೆ. ಇದೊಂದು ಐತಿಹಾಸಿಕ ಭೇಟಿ. ಭಾರತ ಇಸ್ರೇಲ್ ರಾಷ್ಟ್ರಗಳ ಸಂಬಂಧ ಗಟ್ಟಿಗೊಳ್ಳಲು ಈ ಭೇಟಿ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Trending Now
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
January 28, 2026
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
January 23, 2026









