ರಾಜಕಾರಣ, ಮಿಲಿಟರಿ ಕೈ ಜೋಡಿಸಿದರೆ ಕಾಶ್ಮೀರದಲ್ಲಿ ಶಾಂತಿ ಸಾಧ್ಯ
ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಹಾಗೂ ಉಗ್ರರನ್ನು ಸದೆಬಡಿಯಲು ರಾಜ್ಯದಲ್ಲಿ ರಾಜಕಾರಣ ಹಾಗೂ ಮಿಲಿಟರಿ ಕೈ ಜೋಡಿಸಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಜಮ್ಮು-ಕಾಶ್ಮೀರದಲ್ಲಿ ಹಿಂದಿನಿಂದಲೂ ಪಾಕಿಸ್ತಾನ ಉಪಟಳ ಮಾಡುತ್ತಲೇ ಇದೆ. ಹಾಗಾಗಿ ಭಾರತದ ರಾಜಕಾರಣಿಗಳು ಮಿಲಿಟರಿಗೆ ಸಹಕಾರ ನೀಡಿದರೆ ಖಂಡಿತವಾಗಿಯೂ ಪಾಕಿಸ್ತಾನವನ್ನು ಬಗ್ಗುಬಡಿದು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬಹುದು ಎಂದಿದ್ದಾರೆ.
ಈ ದಿಸೆಯಲ್ಲಿ ಭಾರತ ಸರ್ಕಾರ ಯೋಚಿಸಬೇಕು. ಪೊಲಿಟಿಕೊ-ಮಿಲಿಟರಿಯ ಜಂಟಿಯಾದಾಗ ಮಾತ್ರ ಶತ್ರುಗಳ ಉಪಟಳ ತಡೆಯಬಹುದು. ಇದಕ್ಕೆ ಸಾರ್ವಜನಿಕರು ಸಹ ಕೈ ಜೋಡಿಸಬೇಕು ಎಂದು ತಿಳಿಸಿದ್ದಾರೆ.
ಇದುವರೆಗೂ ಜಮ್ಮು-ಕಾಶ್ಮೀರದಲ್ಲಿ ಸೀಮಿತ ಉಗ್ರಚಟುವಟಿಕೆಗಳನ್ನಷ್ಟೇ ತಡೆಯಲಾಗಿದೆ. ಅದರಲ್ಲೂ ನಾವು ಒಳನುಸುಳುಕೋರರಿಗೆ ತಕ್ಕ ಪಾಠ ಕಲಿಸಿದ್ದೇವೆ. ಇದು ಸಂಪೂರ್ಣವಾಗಿ ನಿಯಂತ್ರಣವಾದಾಗ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುತ್ತದೆ.
ಅಲ್ಲದೆ ಉಗ್ರರ ವಿರುದ್ಧ ಕೈಗೊಂಡ “ಆಪರೇಷನ್ ಆಲ್ ಔಟ್” ಅಭೂತಪೂರ್ವವಾಗಿ ಯಶಸ್ಸು ಕಂಡಿದೆ. ಮುಂದಿನ ದಿನಮಾನಗಳಲ್ಲಿ ಸರ್ಕಾರದ ಸಹಕಾರ ದೊರೆತರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
Leave A Reply