ಮುಂದುವರಿದ ಮಮತಾ ಬ್ಯಾನರ್ಜಿಯವರ ಹಿಂದೂ ದ್ವೇಷ, ಸರಸ್ವತಿ ಪೂಜೆಗಿಲ್ಲ ರಜೆ
ಕೋಲ್ಕತ್ತಾ: ಹಿಂದೂಗಳು ಹಾಗೂ ಹಿಂದೂಗಳ ಆಚರಣೆಗಳು ಎಂದರೆ ಮಮತಾ ಬ್ಯಾನರ್ಜಿಯವರಿಗೇಕೆ ಇಷ್ಟು ಕೋಪ, ದ್ವೇಷ, ಅಸಹಿಷ್ಣುತೆಯೋ ಗೊತ್ತಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಹಿಂದೂಗಳ ಆಚರಣೆಗಳಿಗೆ ಮಮತಾ ಅಡ್ಡಿಯಾಗುತ್ತಲೇ ಬಂದಿದ್ದಾರೆ. ಅದು ಸರಸ್ವತಿ ಪೂಜೆ ಇರಬಹುದು ಅಥವಾ ದುರ್ಗಾ ಪೂಜೆ ಇರಬಹುದು, ಆಗೆಲ್ಲ ಮಮತಾ ಬ್ಯಾನರ್ಜಿಯವರು ಅಡ್ಡಗಾಲು ಹಾಕುತ್ತಲೇ ಇದ್ದಾರೆ.
ಇದರ ಮುಂದುವರಿದ ಭಾಗವಾಗಿ ಮಮತಾ ಬ್ಯಾನರ್ಜಿಯವರು ಮತ್ತೆ ಅಸಹಿಷ್ಣುತೆ ತೋರಿದ್ದು, ಪಶ್ಚಿಮ ಬಂಗಾಳದಲ್ಲಿ ಶಾಲೆಗಳಿಗೆ ಸರಸ್ವತಿ ಪೂಜೆಗೆ ನೀಡುತ್ತಿದ್ದ ರಜೆಯನ್ನು ರಜೆಗಳ ವೇಳಾಪಟ್ಟಿಯಿಂದ ತೆಗೆದುಹಾಕಲಾಗಿದೆ.
ಪಶ್ಚಿಮ ಬಂಗಾಳ ಉತ್ತರ ದಿನಾಜ್ ಪುರ ಜಿಲ್ಲೆಯ ಪ್ರಾಥಮಿಕ ಶಿಕ್ಷಣ ಮಂಡಳಿ ಈ ನಿರ್ಧಾರ ಕೈಗೊಂಡಿದ್ದು, ಜನವರಿ 22ರಂದು ಸರಸ್ವತಿ ಪೂಜೆ ಹಿನ್ನೆಲೆಯಲ್ಲಿ ನೀಡಬೇಕಾಗಿದ್ದ ರಜೆಯನ್ನು ವೇಳಾಪಟ್ಟಿಯಿಂದ ಕಿತ್ತೆಸೆಯಲಾಗಿದೆ.
ದಿನಾಜ್ ಪುರ ಜಿಲ್ಲೆಯಲ್ಲಿ ಶೇ.49.92ರಷ್ಟು ಹಿಂದೂಗಳು ಹಾಗೂ ಶೇ..49.32ರಷ್ಟು ಮುಸ್ಲಿಮರು ವಾಸವಿರುವ ಕಾರಣ ಮೊದಲು ಶಿಕ್ಷಣ ಮಂಡಳಿ ಸರಸ್ವತಿ ಪೂಜೆಯನ್ನೇ ನಿಷೇಧಿಸಿತ್ತು. ಈಗ ಮಂಡಳಿಗೆ ಮೊಹಮ್ಮದ್ ಜಾಹೀರ್ ಆಲಂ ಅರ್ಜು ಅಧ್ಯಕ್ಷರಾಗಿದ್ದು, ಸರಸ್ವತಿ ಪೂಜೆಯ ರಜೆ ರದ್ದುಗೊಳಿಸಿದ್ದಾರೆ.
ಅಲ್ಲದೆ ಕಳೆದ ವರ್ಷ ಹೌರಾ ಜಿಲ್ಲೆಯ ಹೈಸ್ಕೂಲುಗಳಲ್ಲಿ ಸರಸ್ವತಿ ಪೂಜೆಯ ಬದಲಿಗೆ ವಿಶ್ವ ನಾಬಿ ದಿನ (ಮೊಹಮ್ಮದ್ ಪೈಗಂಬರರ ದಿನ)ವನ್ನಾಗಿ ಆಚರಿಸಲಾಗಿತ್ತು. ಇಷ್ಟಾದರೂ ಇಂಥ ಪ್ರಕರಣಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಮಮತಾ ಬ್ಯಾನರ್ಜಿಯವರು ಒಂದೇ ಒಂದು ಆಕ್ಷೇಪ ವ್ಯಕ್ತಪಡಿಸಿಲ್ಲ.
Leave A Reply