ಭಾರತ ಮಾತಾ ಕಿ ಜೈ ಎಂದ ಮಕ್ಕಳನ್ನು ಹೊರ ಹಾಕಿ, ದರ್ಪ ಮೆರೆದ ಕ್ರಿಶ್ಚಿಯನ್ ಶಾಲೆ
ಭೋಪಾಲ್: ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದಕ್ಕೆ 20 ಮಕ್ಕಳನ್ನು ಶಾಲೆಯಿಂದ ಹೊರ ಹಾಕಿ ದರ್ಪ ಮೆರೆದಿರುವ ವಿಷಾಧಕರ ಘಟನೆ ಮಧ್ಯಪ್ರದೇಶದ ರತ್ನಾಂ ಜಿಲ್ಲೆಯ ನಾಮ್ಲಿಯಲ್ಲಿ ನಡೆದಿದೆ. ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆ ಈ ದೇಶವಿರೋಧಿ ಕೃತ್ಯ ಎಸಗಿದೆ.
ಶಾಲೆಯ ದೇಶವಿರೋಧಿ ನೀತಿ ಖಂಡಿಸಿ ರಾಷ್ಟ್ರವಾದಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಶಾಲೆ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಆರೋಪವನ್ನು ಶಾಲೆ ಆಡಳಿತ ಮಂಡಳಿ ನಿರಾಕರಿಸಿದೆ.
ವಂದೆ ಮಾತರಂ ಎಂದಿದಕ್ಕೆ ಕ್ರಮ ಎಂದ ಶಾಲಾ ಆಡಳಿತ ಮಂಡಳಿ
ಮಧ್ಯಪ್ರದೇಶ ಕ್ಯಾಥೋಲಿಕ್ ಚರ್ಚ್ ವಕ್ತಾರ ಫಾದರ್ ಮರಿಯ ಸ್ಟಿಫನ್ ಆರೋಪವನ್ನು ನಿರಕಾರಿಸಿದ್ದು, ಶಾಲೆಯಲ್ಲಿ ನಿತ್ಯ ಬೆಳಗ್ಗೆ ಪ್ರಾರ್ಥನೆ ಮಾಡಲಾಗುತ್ತದೆ. ಆದರೆ ಒಂಬತ್ತನೇ ತರಗತಿ ವಿದ್ಯಾರ್ಥಿಗಳು ವಂದೆ ಮಾತರಂ ಹೇಳುತ್ತಾ ನರ್ತಿಸಿದಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವಂದೆ ಮಾತರಂ, ಭಾರತ ಮಾತಾಕಿ ಜೈ ಎಂದಿರುವುದನ್ನೇ ನೆಪವಾಗಿಟ್ಟುಕೊಂಡು ಶಾಲೆ ವಿದ್ಯಾರ್ಥಿಗಳನ್ನು ಹೊರ ಹಾಕಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಷ್ಟ್ರೀಯವಾದಿ ಸಂಘಟನೆಗಳು ಶಾಲೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.
Leave A Reply