ಭಾರತ್ ಮಾತಾ ಕೀ ಎಂದಿದ್ದಕ್ಕೇ ವಿದ್ಯಾರ್ಥಿಗಳ ಅಮಾನತು ಮಾಡಿತೇ ಆ ಕ್ರಿಶ್ಚಿಯನ್ ಶಾಲೆ?
ಭೋಪಾಲ್: ಪ್ರಾಯಶಃ ಭಾರತದಲ್ಲಿ ಮಾತ್ರ ಹೀಗೆ ಆಗಬಹುದೇನೋ? ಮಧ್ಯಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಮೊಳಗಿಸಿದ ಕಾರಣಕ್ಕಾಗಿಯೇ ಶಾಲೆಯ ಆಡಳಿತ ಮಂಡಳಿ 20 ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ ಎಂಬ ಆರೋಪ ಕೇಳಿಬಂದಿವೆ.
ಮಧ್ಯಪ್ರದೇಶದ ರಟ್ಲಾಮ್ ಪ್ರದೇಶದಲ್ಲಿರುವ ಸೇಂಟ್ ಜೋಸೆಫ್ ಶಾಲೆಯ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.
ಜನವರಿ 1ರಂದು ಎಂದಿನಂತೆ ಪ್ರಾರ್ಥನೆ ಮುಗಿದಿದ್ದು, ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಆದರೆ ಇದರಿಂದ ಕುಪಿತಗೊಂಡ ಶಾಲೆಯ ಮಂಡಳಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ ಎಂಬ ಆರೋಪ ಕೇಳಿಬಂದಿವೆ.
ಈ ಕುರಿತು ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು ಹಲವು ಹಿಂದೂ ಸಂಘಟನೆಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಲ್ಲದೆ ಸೋಮವಾರ ಘಟನೆಗೆ ಸಂಬಂಧಿಸಿದಂತೆ ರ್ಯಾಲಿ ನಡೆಸಿದ್ದು, ರಾಜ್ಯವ್ಯಾಪಿ ಬಂದ್ ಕರೆ ನೀಡಿದ್ದಾರೆ.
“ ಶಾಲೆಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಕ್ಕೇ ಸುಮಾರು 20 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಇದು ಖಂಡನೀಯ” ಎಂದು ಬಜರಂಗದಳ ಮುಖಂಡ ರಾಜೇಶ್ ಪರಿಹಾರ್ ಆರೋಪಿಸಿದ್ದಾರೆ. ಆದಾಗ್ಯೂ ಶಾಲೆಯ ಆಡಳಿತ ಮಂಡಳಿ ಆರೋಪವನ್ನು ತಿರಸ್ಕರಿಸಿದೆ.
ಆದರೆ ಇತ್ತೀಚೆಗೆ ಕಾಲೇಜೊಂದರಲ್ಲಿ ಭಾರತ್ ಮಾತಾ ಆರತಿ ಕಾರ್ಯಕ್ರಮಕ್ಕೆ ಪೊಲೀಸರು ನಿಷೇಧ ಹೇರಿದ್ದರು. ಈಗ ಶಾಲೆಯಲ್ಲಿ ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ ಎಂದಿದ್ದಕ್ಕೇ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಹಾಗಾದರೆ ಭಾರತ್ ಮಾತಾ ಕೀ ಜೈ ಎನ್ನುವುದೇ ತಪ್ಪೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
Leave A Reply