ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ 6 ರೋಹಿಂಗ್ಯಾ ಮುಸ್ಲಿಮರ ಬಂಧನ
ಧರ್ಮಾನಗರ: ಮ್ಯಾನ್ಮಾರ್ ಮತ್ತು ಬಾಂಗ್ಲಾ ಗಡಿಯ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ದೇಶದ ಮೇಲೆ ದುಷ್ಪರಿಣಾಮ ಬೀರುತ್ತಿರುವ ರೋಹಿಂಗ್ಯಾ ಮುಸ್ಲಿಮರನ್ನು ಆಟಾಟೋಪಕ್ಕೆ ನಿಯಂತ್ರಣ ಹಾಕುವ ಪ್ರಕ್ರಿಯೆ ಮುಂದುವರಿದಿದ್ದು, ತ್ರಿಪುರಾದ ಧರ್ಮಾನಗರದ ರೈಲು ನಿಲ್ದಾಣದಲ್ಲಿ ತಲೆಮರೆಸಿಕೊಂಡು ಓಡಿ ಹೋಗಲು ಯತ್ನಿಸುತ್ತಿದ್ದ ಆರು ರೋಹಿಂಗ್ಯಾ ಮುಸ್ಲಿಮರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಮಹಮ್ಮದ್ ಜಾಹಾಂಗೀರ್ (17), ಇಬ್ರಾಹಿಂ ಅಲಮ್ (17), ಮಹಮ್ಮದ್ ಆಶಾನ್ (15), ನೂರ್ ಫತಾಮನ್ (16), ಜ್ಹಾನ್ ತಾರಾ(14), ದಿಲ್ವಾರ್ ಬೇಗಂ (27) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರು ಹೈದರಾಬಾದ್ ಗೆ ಪ್ರಯಾಣ ಬೆಳೆಸಲು ಉದ್ದೇಶಿಸಿದ್ದರು ಎನ್ನಲಾಗಿದೆ.
ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಚಲಿಸುತ್ತಿದ್ದ ರೋಹಿಂಗ್ಯಾಗಳನ್ನು ರೈಲ್ವೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಅಕ್ರಮವಾಗಿ ನುಸುಳಿರುವ ಮಾಹಿತಿ, ಪ್ರಯಾಣಿಸುವ ಮಾಹಿತಿ ಹೊರಬಿದ್ದಿದೆ. ಮ್ಯಾನ್ಮಾರ್ ನವರಾಗಿದ್ದು, ಬಾಂಗ್ಲಾದೇಶದ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಎಲ್ಲರೂ ಸುರಕ್ಷಿತವಾಗಿ ಜೈಲಿನಲ್ಲಿದ್ದಾರೆ ಎಂದು ಧರ್ಮಾನಗರ ರೈಲ್ವೆ ಪೊಲೀಸ್ ಇನ್ ಸ್ಪೆಕ್ಟರ್ ಸ್ವಪನ್ ಕುಮಾರ ಸಿಂಗ್ ತಿಳಿಸಿದ್ದಾರೆ. ಎರಡು ತಿಂಗಳಲ್ಲಿ ಇದು ಎರಡನೇ ಬಾರಿ ರೋಹಿಂಗ್ಯಾಗಳನ್ನು ಬಂಧಿಸಲಾಗುತ್ತಿದೆ. ಇತ್ತೀಚೆಗೆ ಅಗರ್ತಲಾ ಬಳಿ ಎಂಟು ರೋಹಿಂಗ್ಯಾಗಳನ್ನು ಬಂಧಿಸಲಾಗಿತ್ತು.
Leave A Reply