ಜಿಗ್ನೇಶ್ ಮೇವಾನಿ ಸುದ್ದಿಗೋಷ್ಠಿ ಬಹಿಷ್ಕರಿಸಿ, ಛೀ ಮಾರಿ ಹಾಕಿದ ಪತ್ರಕರ್ತರು
ಚೆನ್ನೈ: ಗುಜರಾತ್ ದಲಿತ ಮುಖಂಡ ಮತ್ತು ಶಾಸಕ ಜಿಗ್ನೇಶ್ ಮೇವಾನಿಗೆ ಪತ್ರಕರ್ತರು ತಕ್ಕ ಪಾಠ ಕಲಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಿಪಬ್ಲಿಕ್ ಚಾನಲ್ ನ ಲೋಗೋ ತೆಗೆಯಿರಿ, ಅವರು ಇದ್ದರೆ ನಾನು ಮಾತನಾಡುವುದಿಲ್ಲ ಎಂದು ದರ್ಪ ಪ್ರದರ್ಶಿಸಿದ್ದಾನೆ. ಇದರಿಂದ ಸಿಟ್ಟಾದ ಪತ್ರರ್ತರು ಸುದ್ದಿಗೋಷ್ಠಿಯನ್ನೇ ಬಹಿಷ್ಕರಿಸಿ, ಮೇವಾನಿಗೆ ತಕ್ಕ ಪಾಠ ಕಲಿಸಿದ್ದಾರೆ.
ಸುದ್ದಿಗೋಷ್ಠಿಗೆ ಸಿದ್ಧತೆಯಲ್ಲಿರುವಾಗಲೇ ರಿಪಬ್ಲಿಕ್ ಲೋಗೋ ಮತ್ತು ಮೈಕ್ರೋಫೋನ್ ತೆಗೆಯಿರಿ ಎಂದು ವಾರ್ನಿಂಗ್ ಮಾಡಿದ್ದಾನೆ. ಇದು ಪತ್ರಕರ್ತರಲ್ಲಿ ಆಕ್ರೋಶ ಮೂಡಿಸಿದೆ. ಅದಕ್ಕೆ ಎಲ್ಲ ಪತ್ರಕರ್ತರು ಸುದ್ದಿಗೋಷ್ಠಿ ನಿರ್ಧಾರಕ್ಕೆ ಬರುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ವೈಯಕ್ತಿಕವಾಗಿ ಚಾನೆಲ್ ನೊಂದಿಗೆ ಮಾತನಾಡದಿರುವುದು ಮೇವಾನಿ ನಿಯಮವಾಗಿರಬಹುದು. ಆದರೆ ನಾವು ಸಾಮಾನ್ಯವಾಗಿ ಮಾತನಾಡುವಾಗ ಲೋಗೋ ಮತ್ತು ಮೈಕ್ರೋಫೋನ್ ಹಚ್ಚುತ್ತಿದ್ದೇವು. ಆದರೂ ಮೇವಾನಿ ಸಣ್ಣತನ ಪ್ರದರ್ಶಿಸಿದ್ದಾರೆ. ನಾವು ತಮಿಳುನಾಡಿನ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ಕೇಳುವವರಿದ್ದೇವು ಎಂದು ರಿಪಬ್ಲಿಕ್ ವರದಿಗಾರ ತಿಳಿಸಿದ್ದಾರೆ.
ನಾನು ರಿಪಬ್ಲಿಕ್ ಚಾನೆಲ್ ನೊಂದಿಗೆ ಮಾತನಾಡುವುದಿಲ್ಲ. ರಿಪಬ್ಲಿಕ್ ಚಾನೆಲ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಆ ಚಾನೆಲ್ ನವರಿಂದ ಪ್ರಶ್ನೆಗಳು ಬಂದರೆ ನಾನು ಯಾರೊಂದಿಗೂ ಮಾತನಾಡುವುದಿಲ್ಲ ಮೇವಾನಿ ಹೇಳಿದ್ದಾರೆ. ಆಗ ಪತ್ರಕರ್ತರೊಬ್ಬರು ಮಾತನಾಡಿ ‘ನೀವು ಹಾಗೆ ಆಜ್ಞೆ ಮಾಡುವಂತಿಲ್ಲ. ನೀವು ಮಾತನಾಡಲು ಬಯಸದಿದ್ದರೇ ನಿಮಗೆ ಬಿಟ್ಟದ್ದು, ಧನ್ಯವಾದ ಎಂದು ಎಲ್ಲ ಪತ್ರಕರ್ತರು ಬಹಿಷ್ಕರಿಸಿ ಹೊರನಡೆದಿದ್ದಾರೆ.
ಚೆನ್ನೈ ಪತ್ರಕರ್ತರ ಈ ನಡೆಗೆ ತೀವ್ರ ಶ್ಲಾಘನೆ ವ್ಯಕ್ತವಾಗಿದ್ದು, ಮೇವಾನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಛೀ ಮಾರಿ ಹಾಕಲಾಗಿದೆ. ಅಲ್ಲದೇ ಪ್ರಶ್ನೆಗಳಗೆ ಉತ್ತರಸದೇ ಪಲಾಯನ ಮಾಡುವ ನಿವೇಂಥ ನಾಯಕ ಎಂದು ಜನ ಕಾಲೆಳೆದಿದ್ದಾರೆ.
Leave A Reply