ಜಿಎಸ್ಟಿ ತೆಗಳಿದವರಿಗೆ ಕಹಿ ಸುದ್ದಿ, ಕಾರ್ಖಾನೆ ಉತ್ಪಾದನೆ 8.4ಕ್ಕೆ ಏರಿಕೆ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏನೇ ನಿರ್ಧಾರ ಕೈಗೊಂಡರು, ಯಾವುದೇ ಯೋಜನೆ ಜಾರಿಗೊಳಿಸಿದರೂ ದೂರುವವರು, ತೆಗಳುವವರು ಎಂದಿಗೂ ಇದ್ದಾರೆ. ದೇಶದ ತೆರಿಗೆ ಸುಧಾರಣೆಗಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಿದಾಗಲೂ ಇದೇ ರೀತಿ ವಿರೋಧ ವ್ಯಕ್ತವಾಗಿತ್ತು.
ಅಲ್ಲದೆ, ದೇಶದ ವಿತ್ತೀಯ ವ್ಯವಸ್ಥೆ ಹಾಳಾಯಿತು, ಬಡವರಿಗೆ, ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಬಿತ್ತು, ಉದ್ಯಮಿಗಳಿಗೆ ನಷ್ಟವಾಗುತ್ತದೆ ಎಂದೆಲ್ಲ ಟೀಕಿಸಿದ್ದರು. ಆದರೂ ಜಿಎಸ್ಟಿ ಮಾತ್ರ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತಂದಿಲ್ಲ ಎಂಬುದು ಸಾಬೀತಾಗಿದೆ.
ಹೌದು, ಕೈಗಾರಿಕೆ ಉತ್ಪಾದನೆ ಸೂಚ್ಯಂಕ (ಐಐಪಿ) ನೀಡಿದ ವರದಿ ಪ್ರಕಾರ 2017ರ ನವೆಂಬರ್ ನಲ್ಲಿ ಭಾರತದಲ್ಲಿರುವ ಕೈಗಾರಿಕೆಗಳ ಉತ್ಪಾದನೆ ಪ್ರಮಾಣ ಶೇ.8.4ಕ್ಕೆ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಕಳೆದ ಎರಡು ವರ್ಷಗಳಲ್ಲೇ ಅಧಿಕ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಪಾರ ಮೊತ್ತದ ಬಂಡವಾಳ ಸರಕು, ಮಧ್ಯಮ ಪ್ರಮಾಣದ ಸರಕು, ನಿರ್ಮಾಣ, ಗ್ರಾಹಕ ಸರಕುಗಳ ಉತ್ಪಾದನಾ ಪ್ರಮಾಣ ಹಿಂದಿನ ಸಾಲಿನಲ್ಲಿ ಕಡಿಮೆ ಇತ್ತು. ಆದರೆ ಈಗ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದೆ. ಪ್ರಸ್ತುತ ಬಂಡವಾಳ ಸರಕುಗಳ ಉತ್ಪಾದನೆ ಪ್ರಮಾಣದಲ್ಲಿ ಶೇ.9.4, ಹಾಗೂ ನಿರ್ಮಾಣ ಸರಕುಗಳ ಉತ್ಪಾದನೆಯಲ್ಲಿ ಶೇ.13.5ರಷ್ಟು ಏರಿಕೆಯ ಸಹಕಾರದೊಂದಿ ಒಟ್ಟು ಉತ್ಪಾದನೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
Leave A Reply