ಗೆಳೆಯ, ಗೆಳೆಯ ಎಂದು ಪಾಕಿಸ್ತಾನದ ವಿರುದ್ಧ ಸಮರ ಸಾರಿದೆಯೇ ಚೀನಾ?
ಬೀಜಿಂಗ್: ಈ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳೇ ಹೀಗೇನಾ ಎಂಬ ಅನುಮಾನ ಕಾಡುತ್ತದೆ. ಕೆಲವೊಮ್ಮೆ ಎರಡೂ ರಾಷ್ಟ್ರಗಳು ಕುಚುಕು ಗೆಳೆಯರಂತೆ ವರ್ತಿಸುತ್ತವೆ. ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಜಗತ್ತೇ ಆಕ್ರೋಶ ವ್ಯಕ್ತಪಡಿಸಿದರೂ ಚೀನಾ ಅದರ ಪರ ನಿಲ್ಲುತ್ತದೆ. ಚೀನಾ ಯಾವುದೇ ಯೋಜನೆ ಜಾರಿಗೊಳಿಸಿದರೂ ಅದಕ್ಕೆ ಪಾಕಿಸ್ತಾನ ಒಪ್ಪಿಗೆ ನೀಡುತ್ತದೆ. ಹಾಗಂತ ಇಬ್ಬರೂ ವಿಶ್ವಾಸಿ ಸ್ನೇಹಿತರಲ್ಲ. ಈಗ ಇದು ಸಾಬೀತಾಗಿದೆ.
ಹೌದು, ಪಾಕಿಸ್ತಾನ ತನ್ನ ಗಡಿಯಲ್ಲಿ ಡ್ಯಾಮ್ ನಿರ್ಮಿಸಲು ಚೀನಾದ ಒಂದು ಪ್ರದೇಶ, ಒಂದ ರಸ್ತೆ ಯೋಜನೆಯ ಹಣವನ್ನು ತಿರಸ್ಕರಿಸಿ ಸ್ವಂತ ಹಣದಲ್ಲೇ ಯೋಜನೆ ರೂಪಿಸುವುದಾಗಿ ಅಹಂಕಾರದ ಮಾತುಗಳನ್ನಾಡಿದ್ದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಮುನ್ನುಡಿಯಾಗಿ ಒಂದು ಹೆಜ್ಜೆ ಮುಂದಿಟ್ಟಿರುವ ಚೀನಾ, ಪಾಕಿಸ್ತಾನದ ಗ್ವಾದರ್ ಬಂದರು ಪ್ರದೇಶದಲ್ಲಿ ಚೀನಾ ಅಣ್ವಸ್ತ್ರ ಯುದ್ಧ ನೌಕೆಗಳನ್ನು ನಿಯೋಜಿಸಿದ್ದು, ಪಾಕಿಸ್ತಾನದ ನಿದ್ದೆಗೆಡಿಸಿದೆ.
ಪಾಕಿಸ್ತಾನದ ಈ ಬಂದರಿಗೆ ಚೀನಾವೇ ಹಣ ನೀಡಿದೆ ಹಾಗೂ ನಿರ್ಮಿಸಿದೆ ಸಹ. ಆದರೆ ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಹಳಸಿರುವುದರಿಂದ, ಬರೀ ವ್ಯಾಪಾರ ದೃಷ್ಟಿಯಿಂದ ಮಾತ್ರವೇ ಚೀನಾ ಯುದ್ಧನೌಕೆ ನಿಯೋಜಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಅಲ್ಲದೆ ವಿಶ್ವಸಂಸ್ಥೆಯ ಪೂರ್ವಾನುಮತಿ ಇಲ್ಲದೆಯೇ ಅಣ್ವಸ್ತ್ರ ಯುದ್ಧ ನೌಕೆಗಳನ್ನು ನಿಯೋಜನೆ ಮಾಡುವಂತಿಲ್ಲ. ಇದು ಚೀನಾಗೂ ಗೊತ್ತಿಲ್ಲ ಅಂತ ಅಲ್ಲ. ಇಷ್ಟೆಲ್ಲ ಗೊತ್ತಿದ್ದರೂ ಯುದ್ಧ ನೌಕೆ ನಿಯೋಜಿಸಿದ್ದು, ಪಾಕಿಸ್ತಾನವನ್ನು ಕಂಗಾಲಾಗುವಂತೆ ಮಾಡಿದೆ.
Leave A Reply