ಜುನೈದ್ ಖಾನ್ ಹತ್ಯೆ ಖಂಡಿಸಿದವರು, ಮುಸ್ಲಿಮರು ಮಾಡಿದ್ದಾರೆ ಎನ್ನಲಾದ ಈ ಹಲ್ಲೆ ಖಂಡಿಸುವವರು ಯಾರಿದ್ದಾರೆ?
ಪಟನಾ: ಹತ್ಯೆ ಯಾವುದೇ ವ್ಯಕ್ತಿಯ ಮೇಲಾಗಲಿ, ಅದು ತಪ್ಪು ಹಾಗೂ ಖಂಡನೀಯ. ನಾವೂ ಯಾವುದೇ ಜೀವ ಹೋಗಲಿ, ಹತ್ಯೆಯಾಗಲಿ ಎಂದು ಬಯಸುವುದಿಲ್ಲ ಹಾಗೂ ಯಾರೂ ಹಾಗೆ ಮಾಡಬಾರದು ಎಂಬ ಆಶಾಭಾವನೆ ಹೊಂದಿದ್ದೇವೆ.
ಆದರೆ ಹತ್ಯೆ ವಿಚಾರದಲ್ಲಿ ಕೆಲವರು ತೋರಿಸುವ ಇಬ್ಬಂದಿತನ ಮಾತ್ರ ಖಂಡಿಸುತ್ತೇವೆ. ಹರಿಯಾಣದಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಜುನೈದ್ ಖಾನ್ ನನ್ನು ಹತ್ಯೆ ಮಾಡಿದಾಗ, ಅಬ್ಬರಿಸಿ ಬೊಬ್ಬಿರಿದರಲ್ಲ ರಾಜಕಾರಣಿಗಳು ಅಂಥ ಇಬ್ಬಂದಿತನ ಬಯಲು ಮಾಡುವುದು ಉದ್ದೇಶ.
ಏಕೆಂದರೆ, ಬಿಹಾರದ ಗಯಾ ಬಳಿ ಸೀಲ್ದಾಹ್ ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರ ಮೇಲೆ ಇಬ್ಬರು ಮುಸ್ಲಿಮರು ಹಲ್ಲೆ ಮಾಡಿದ್ದು, ಸುಶಾಂತ್ ಬೆಹೆರಾ ಈಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆದರೂ ಯಾವುದೇ ಒಬ್ಬ ರಾಜಕಾರಣಿ ಹಿಂದೂ ವ್ಯಕ್ತಿಯ ಮೇಲಿನ ಈ ಹಲ್ಲೆಯನ್ನು ಖಂಡಿಸಿಲ್ಲ.
ರೈಲಿನ ಬಿ.13ನೇ ಕೋಚ್ ನಲ್ಲಿ ಸುಶಾಂತ್ ಚಲಿಸುತ್ತಿದ್ದು, ಆಗ ಇಬ್ಬರು ವ್ಯಕ್ತಿಗಳು ವಿನಾಕಾರಣ ಜಗಳ ತೆಗೆದಿದ್ದಾರೆ. ಅಲ್ಲದೆ ತಮ್ಮ ಸಂಬಂಧಿಕರನ್ನು ಸಹ ಕರೆಸಿ ಹಲ್ಲೆ ಮಾಡಿದ್ದಾರೆ. ಹಾಗಾಗಿ ಸುಶಾಂತ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಶಾಂತ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈಗ ಕೋಲ್ಕತ್ತಾ ಮೂಲದ ಪೊಲೀಸರು ಹಲ್ಲೆ ಮಾಡಿದ ಆರೋಪದಲ್ಲಿ ಎಂ.ಡಿ.ಜೈದ್ ಹಾಗೂ ಇರ್ಕದ್ ಜೈದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಯಾವುದೇ ವ್ಯಕ್ತಿಯ ಮೇಲೆ ಹಲ್ಲೆಯಾದರೂ, ಆತನ ಜಾತಿ, ಧರ್ಮ ನೋಡಿ ಹೋರಾಟಕ್ಕಿಳಿಯುವ ರಾಜಕಾರಣಿಗಳು, ಬುದ್ಧಿಜೀವಿಗಳು, ಪ್ರಗತಿಪರರ, ಪ್ರಕಾಶ್ ರೈ ಅವರಂಥ ಜೀವಪರರು ಹಿಂದೂವಿನ ಮೇಲೆ ನಡೆದ ಈ ಹಲ್ಲೆಯನ್ನು ಖಂಡಿಸುವುದಿಲ್ಲ. ಇದು ಇಬ್ಬಂದಿತನವಲ್ಲವೇ?
Leave A Reply