• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯೋಗೀಶ್ ಭಟ್ಟರ ಕನಸಿನ ಕೂಸಿಗೆ ಈಗ ಭರ್ತಿ ಐದು ವರ್ಷ ಲೋಬೋ ಅವರೇ!

Hanumantha Kamath Posted On January 18, 2018


  • Share On Facebook
  • Tweet It

ಮಂಗಳೂರು ಪುರಭವನದ ಎಲ್ಲಾ ಕಿಟಕಿ ಬಾಗಿಲುಗಳನ್ನು ಮುಚ್ಚಿ ಎಸಿ ಆನ್ ಮಾಡಿ ಬಡವರಿಗೆ ಆಶ್ರಯ ಮನೆ ಕೊಡಲು ಲಾಟರಿ ಎತ್ತುವ ಕೆಲಸ ಮಾಡಿ ಅದಕ್ಕೆ ಪುರಭವನದ ಸುತ್ತಲೂ ಆಳೆತ್ತರದ ಫ್ಲೆಕ್ಸ್ ಗಳನ್ನು ನಿಲ್ಲಿಸಿ ಸ್ಲಾಗ್ ಓವರ್ ಗಳಲ್ಲಿ ಸಿಕ್ಕಿದ ಕಡೆ ಬ್ಯಾಟ್ ಬೀಸುವ ದಾಂಡಿಗರಂತೆ ಕಾಂಗ್ರೆಸ್ ಮುಖಂಡರು ವರ್ತಿಸಿಬಿಟ್ಟರು. ಇನ್ನೇನೂ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ ಎಷ್ಟು ಮೈಲೇಜ್ ತೆಗೆದುಕೊಳ್ಳಬೇಕೋ ಅಷ್ಟು ಮೈಲೇಜ್ ಗಿಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಮೂರು ಒವರ್ ಇರುವಾಗ ಐವತ್ತು ರನ್ ಬೇಕಾದರೆ ಬ್ಯಾಟ್ಸ್ ಮೆನ್ ಹೇಗೆ ಆಡುತ್ತಾನೋ ಹಾಗೆ ಕಾಣುತ್ತಿದ್ದಾರೆ ಶಾಸಕ ಜೆಆರ್ ಲೋಬೋ. ಇಲ್ಲದಿದ್ದರೆ ಯೋಗೀಶ್ ಭಟ್ ಅವರು ತಾವು ಅಧಿಕಾರದಿಂದ ಇಳಿಯುವ ಕೆಲವೇ ತಿಂಗಳ ಮೊದಲು ಎಲ್ಲಾ ರೂಪುರೇಶೆ ಸಿದ್ಧಪಡಿಸಿ ಇನ್ನೇನೂ ಮುಂದಿನ ಬಾರಿ ಗೆದ್ದ ನಂತರ ತಮ್ಮ ಕನಸಿನ ಕೂಸಿಗೆ ಜನ್ಮಕೊಡಬೇಕು ಎಂದು ಬಸಿರಾಗಿದ್ದಾಗ ಈಗ ಆ ಯೋಜನೆಯ ಹೆರಿಗೆಯನ್ನು ಮಾಡಲು ಮುಂದಾಗಿದ್ದಾರೆ ಲೋಬೋ ಸಾಹೇಬ್ರು.

ಯೋಗೀಶ್ ಭಟ್ ನೆನಪಾದರೋ, ಇಲ್ವೋ!

ವೇದಿಕೆಯಲ್ಲಿದ್ದ ಹದಿನೈದು ಜನರಲ್ಲಿ ಯಾರಾದರೂ ಯೋಗೀಶ್ ಭಟ್ ಅವರನ್ನು ನೆನಪಿಸಿಕೊಂಡರೋ, ಇಲ್ವೋ, ಗೊತ್ತಿಲ್ಲ. ಆದರೆ ಭರ್ತಿ ಐದು ವರ್ಷಗಳ ಮೊದಲು ಯೋಗೀಶ್ ಭಟ್ ಅವರ ಮನಸ್ಸಿನಲ್ಲಿದ್ದ ಜಿ ಪ್ಲಸ್ ಥ್ರೀ ಫ್ಲಾಟ್ ಕಲ್ಪನೆಗೆ ಆವತ್ತಿನ ಅಧಿಕಾರಿಗಳು ಇವತ್ತು ಯಾವ ರೀತಿಯಲ್ಲಿ ಲೋಬೋ ಅವರಿಗಾಗಿ ಹೋರಾಡಿ ಕೆಲಸ ಮಾಡುತ್ತಿದ್ದಾರೋ ಆವತ್ತು ಹಾಗೆ ಮಾಡಿದ್ದರೆ ಆ ಯೋಜನೆಗೆ ಆವತ್ತೇ ಭೂಮಿ ಪೂಜೆ ಆಗಿ ಹೋಗುತ್ತಿತ್ತು. ಆದರೆ ಬಡವರ ನಸೀಬಿನಲ್ಲಿಯೇ ಸದ್ಯದಲ್ಲಿ ಆಶ್ರಯ ಯೋಜನೆಗಳು ಸಿಗುವುದಿಲ್ಲ ಎಂದು ಇತ್ತೋ ಅಥವಾ ಯೋಗೀಶ್ ಭಟ್ ಅವರ ಅದೃಷ್ಟ ಮುಗಿಯುತ್ತಾ ಬಂದಿತ್ತೋ ಭಟ್ರು ಸೋತು ಲೋಬೋ ಅಧಿಕಾರ ವಹಿಸಿಕೊಂಡರು. ಲೋಬೋ ಅವರಿಗೆ ನಿಜಕ್ಕೂ ಇಚ್ಚಾಶಕ್ತಿ ಇದ್ದಿದ್ರೆ ಅಥವಾ ಯೋಜನೆಯೊಂದು ಶೀಘ್ರದಲ್ಲಿ ಬಡವರಿಗೆ ತಲುಪಬೇಕು ಎನ್ನುವ ಮನಸ್ಸಿದ್ದರೆ ಅವರು ಅಧಿಕಾರ ವಹಿಸಿಕೊಂಡ ಆರು ತಿಂಗಳಿಗೆ ಅದರ ಲಾಟರಿ ಎತ್ತುತ್ತಿದ್ದರು. ಆದರೆ ಶಾಸಕರು ಆವತ್ತಿನಿಂದ ಸುಮ್ಮನಿದ್ದು ಇನ್ನೇನೂ ಮ್ಯಾಚ್ ಮುಗಿಯಲು ಬಂದಾಗ ಈ ಪರಿ ವೋಟ್ ಗಿಟ್ಟಿಸಲು ಒದ್ದಾಡುತ್ತಿರುವುದು ನೋಡಿದರೆ ಅವರು 930 ಮನೆಗಳ ಕನಿಷ್ಟ ನಾಲ್ಕು ವೋಟ್ ಗಳೊಂದಿಗೆ ಮತ್ತು ಅವರ ಸಂಬಂಧಿಕರ, ಆಪ್ತರ ಮತ್ತು ಬಡವರ ಬಂಧು ಎನ್ನುವ ಟೈಟಲ್ ಫ್ರೀಯಾಗಿ ಸಿಗುವ ವೋಟ್ ಗಳು ಸೇರಿ ಎಲ್ಲವನ್ನು ಲೆಕ್ಕ ಹಾಕಿಯೇ ಫೀಲ್ಡಿಗೆ ಇಳಿದಿರುವುದು ಪಕ್ಕಾ.

ಹಿಂದೆ ಜಾಗ ಹಂಚುತ್ತಿದ್ದರು, ಈಗ ಫ್ಲಾಟ್!

ಹಿಂದೆ ಮಂಗಳೂರು ಮಹಾನಗರ ಪಾಲಿಕೆ ಬಡವರಿಗೆ ಆಶ್ರಯ ಮನೆ ಕೊಡುವ ವಿಷಯ ಬಂದಾಗ ಏನು ಮಾಡುತ್ತಿತ್ತು ಎಂದರೆ ಅರ್ಹ ಪ್ರತಿಯೊಬ್ಬರಿಗೆ ತಲಾ ಒಂದು ಅಥವಾ ಒಂದೂವರೆ ಸೆಂಟ್ ಜಾಗವನ್ನು ಕೊಡುತ್ತಿತ್ತು. ಅದಕ್ಕಿಂತ ಮೊದಲು ಒಬ್ಬೊಬ್ಬ ಫಲಾನುಭವಿಗಳು ತಲಾ ಮೂರು ಸೆಂಟ್ಸ್ ಕೊಟ್ಟದ್ದು ಕೂಡ ಇದೆ. ಅದರ ನಂತರ ವರ್ಷದಿಂದ ವರ್ಷಕ್ಕೆ ಅರ್ಜಿಗಳು ಜಾಸ್ತಿ ಬರುತ್ತಿದ್ದಂತೆ ಮೂರು ಸೆಂಟ್ಸ್ ಇದ್ದದ್ದು ಒಂದೂವರೆ ನಂತರ ಒಂದಕ್ಕೆ ಬಂತು. ಯಾವಾಗ ಬಡವರ ಅರ್ಜಿಗಳು ಬರುವುದು ಕಡಿಮೆಯಾಗಲಿಲ್ಲವೋ ಆಗ ಯೋಗೀಶ್ ಭಟ್ ಅವರ ಮನಸ್ಸಿನಲ್ಲಿ ಒಂದು ಕಲ್ಪನೆ ಮೂಡಿತ್ತು. ಹೇಗೂ ಅರ್ಜಿಗಳು ಪ್ರತಿ ವರ್ಷ ಜಾಸ್ತಿ ಬರುತ್ತಿವೆ. ಹಾಗಂತ ಪ್ರತಿ ವರ್ಷ ಭೂಮಿ ಏನೂ ದೊಡ್ಡದಾಗುತ್ತಾ ಹೋಗುವುದಿಲ್ಲ. ಆದ್ದರಿಂದ ಇರುವ ಸರಕಾರಿ ಜಾಗದಲ್ಲಿಯೇ ಫ್ಲಾಟ್ ಮಾದರಿಯಲ್ಲಿ ವಸತಿ ಸಮುಚ್ಚಯ ಕಟ್ಟಿದರೆ ಆಗ ಒಂದೇ ಕಡೆ ಹೆಚ್ಚೆಚ್ಚು ಜನರಿಗೆ ಮನೆಯ ಸೌಲಭ್ಯ ಕೊಡಬಹುದು ಎಂದು ನಿರ್ಧರಿಸಿ ಅದನ್ನು ಕಾರ್ಯರೂಪಕ್ಕೆ ತರಲು ಹೊರಟರು. ಆ ವೇಳೆಗೆ ಮಂಗಳೂರು ನಗರ ಉತ್ತರದ ಶಾಸಕರಾಗಿದ್ದ ಕೃಷ್ಣ ಜೆ ಪಾಲೇಮಾರ್ ಅವರು ಕೃಷ್ಣಾಪುರ-ಜನತಾ ಕಾಲೋನಿಯಲ್ಲಿ ತಲಾ ಒಂದೂವರೆ ಸೆಂಟ್ಸ್ ನಂತೆ ಸುಮಾರು 83 ಜನರಿಗೆ ಆಶ್ರಯ ಮನೆಗೆ ಜಾಗ ಹಂಚಿದ್ದರು. ಆದರೆ ಯೋಗೀಶ್ ಭಟ್ ಮನಸ್ಸಿನಲ್ಲಿ ಈ ಕನಸು ಹುಟ್ಟಿತ್ತಲ್ಲ. ಅವರು ಶಕ್ತಿನಗರದಲ್ಲಿ ಇದಕ್ಕಾಗಿ ಸರಕಾರಿ ಜಾಗ ತೆಗೆದಿಡುವ ಕ್ರಮಕ್ಕೂ ಮುಂದಾಗಿದ್ದರು.

500ಮೀಟರ್ ಒಳಚರಂಡಿಗೆ ಎರಡು ವರ್ಷ ತೆಗೆದುಕೊಂಡ ಸರಕಾರ!

ಈಗ ಅಂಕದ ಪರದೆಯನ್ನು ಎಳೆಯುವ ಕೊನೆಯ ಘಳಿಗೆಯಲ್ಲಿ ನಾಟಕದ ಒಂದು ದೃಶ್ಯ ಬಾಕಿ ಇದೆ ಎನ್ನುವಂತೆ ಆಶ್ರಯ ಮನೆಯ ಲಾಟರಿ ಎತ್ತಲು ಪಾಲಿಕೆಯ ಸದಸ್ಯರು, ಮೇಯರ್, ಶಾಸಕರು ಎಲ್ಲಾ ತಯಾರಾಗಿ ಬಂದದ್ದೇ ಬಂದದ್ದು. ನಾಲ್ಕು ವರ್ಷ ಒಂಭತ್ತು ತಿಂಗಳು ಅಲ್ಲಿಯೇ ಧೂಳು ಹಿಡಿಯಲು ಬಿಟ್ಟಿದ್ದ ಆಶ್ರಯ ಯೋಜನೆಯ ಫೈಲನ್ನು ಈಗ ಎತ್ತಿ ನಮ್ಮ ದೂರದೃಷ್ಟಿತ್ವ ಎನ್ನುವ ಫೋಸ್ ಕೊಡಲು ಪಾಲಿಕೆ ತಯಾರಾಗಿ ನಿಂತಿದೆ. ಬರುವ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಲೋಬೋ ಅವರ ಪ್ರಚಾರ ಕರಪತ್ರದ ಮೇಲೆ ಈ ಆಶ್ರಯ ಯೋಜನೆಯ ಹೆಸರು ಇದ್ದರೂ ಆಶ್ಚರ್ಯ ಇಲ್ಲ. ಇಷ್ಟು ವರ್ಷ ಆಮೆಗತಿಯಲ್ಲಿ ಇದ್ದ ಆಶ್ರಯ ಯೋಜನೆ ಒಮ್ಮಿದೊಮ್ಮೆಲೆ ಎದ್ದು ನಿಂತ ಪರಿ ನೋಡಿದಾಗ ಜನರಿಗೆ ಏನೂ ಅರ್ಧವಾಗಲ್ಲ ಎಂದು ಶಾಸಕರು ಅಂದುಕೊಂಡಿದ್ದಾರೆ ಎಂದು ಅನಿಸುತ್ತದೆ. ಕೊನೆಯದಾಗಿ ಒಂದೂವರೆ ವರ್ಷದ ಒಳಗೆ ಮನೆಕಟ್ಟಿ ಕೀಲಿಕೈ ನಿಮ್ಮ ಕೈಗೆ ಕೊಡುತ್ತೇವೆ ಎಂದು ನಂಬಿಸಿ ವೇದಿಕೆಯಿಂದ ಇಳಿದಿರುವ ಶಾಸಕರಿಗೆ ಒಂದು ವಿಷಯ ನೆನೆಪಿಸೋಣ, ಗಣಪತಿ ಹೈಸ್ಕೂಲ್ ರಸ್ತೆಯ ಕೇವಲ 500 ಮೀಟರ್ ಉದ್ದದ ಒಳಚರಂಡಿ ಮಾಡಲು ನಿಮಗೆ ಎರಡು ವರ್ಷ ಹಿಡಿಯುತ್ತೆ, ಹೀಗಿರುವಾಗ 930 ಮನೆಕಟ್ಟಲು ಒಂದೂವರೆ ವರ್ಷ ಅನ್ನುತ್ತೀರಲ್ಲ, ಜನರ ಕಿವಿ ಮೇಲೆ ಹೂ ಇಡುವುದಕ್ಕೂ ಕೆಎಎಸ್ ಕಲಿಯಬೇಕಾ!

  • Share On Facebook
  • Tweet It


- Advertisement -
Lobo Ashraya yojane


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Hanumantha Kamath July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Hanumantha Kamath July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search