ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರ, ಅತ್ಯಾಚಾರಿ ಬೆಂಬಲಕ್ಕೆ ನಿಂತ ಮುಸ್ಲಿಂ ಮುಖಂಡರು, ಸ್ಥಳೀಯರಿಂದ ಬಿತ್ತು ಗೂಸಾ
ನಾಂದೇಡ: ಮಹಾರಾಷ್ಟ್ರದ ನಾಂದೇಡನಲ್ಲಿ ಮದರಸಾದಲ್ಲಿ ಅಧ್ಯಯನಕ್ಕೆ ಬಂದ 12 ವರ್ಷದ ಬಾಲಕಿ ಮೇಲೆ ಮುಸ್ಲಿಂ ಮೌಲ್ವಿಯೊಬ್ಬ ಅತ್ಯಾಚಾರ ಎಸಗಿದಲ್ಲದೇ, 8 ವರ್ಷದ ಬಾಲಕಿಗೆ ಕಿರುಕುಳ ನೀಡಿದ್ದಾನೆ.
ನಾಂದೇಡ ಜಿಲ್ಲೆಯ ಮಜಲ್ ಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಮೌಲ್ವಿ ವಿರುದ್ಧ ದೂರು ನೀಡಬೇಡಿ ಎಂದು ಸ್ಥಳೀಯ ರಾಜಕೀಯ ಮುಖಂಡರು ಬಾಲಕಿಯ ತಾಯಿಯ ಮೇಲೆ ಒತ್ತಡ ಹೇರಿದ್ದಾರೆ. ಮೌಲ್ವಿ ಸಬರ್ ಫಾರೂಕಿ ಅತ್ಯಾಚಾರ ಮತ್ತು ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತನಾಗಿರುವವನು.
ಮೌಲ್ವಿ ಫರೂಖ್ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ತನ್ನ ಮೊಬೈಲ್ ನಲ್ಲಿರುವ ಲೈಂಗಿಕ ಚಿತ್ರಗಳನ್ನು ತೋರಿಸಿ ವಿಕೃತಿ ಮೆರೆದಿದ್ದಾನೆ. ಅಲ್ಲದೇ ಎಂಟು ವರ್ಷದ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಎಸ್ ಐಟಿ ತನಿಡೆಯುತ್ತಿದೆ.
ಮೌಲ್ವಿ ಕುರಿತು ಸೂಕ್ತ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಮೌಲ್ವಿ ಬಾಲಕಿಯ ತಾಯಿಯೊಂದಿಗೆ ಈ ಕುರಿತು ಸಂಧಾನ ಮಾಡಿಕೊಳ್ಳಿ ಎಂದು ಮಾತನಾಡಲು ಹೋದಾಗ ಸ್ಥಳೀಯ ಯುವಕರಿಂದ ಏಟು ತಿಂದಿದ್ದಾನೆ ಎಂದು ಎಸ್ಐಟಿ ಮುಖ್ಯಸ್ಥೆ ಬಾರ್ಗಾಂವ್ ಕರ್ ತಿಳಿಸಿದ್ದಾರೆ.
ಬಾಲಕಿ ತಾಯಿ ನಾಂದೇಡ್ ನ ಇತ್ವಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮೌಲ್ವಿ ಸೇರಿ ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದ್ದ ಖಲೀಲ್ ಪಟೇಲ್, ನವಾಬ್ ಪಟೇಲ್, ಇಬ್ರಿಷ್ ಬಾಗವಾನ್ ರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಖಲೀಲ್ ಪಟೇಲ್ ಎನ್ ಸಿಪಿ ನಾಂದೇಡ್ ನಗರ ಘಟಕದ ಅಧ್ಯಕ್ಷನಾಗಿದ್ದಾನೆ, ಇಬ್ರಿಷ್ ಬಾಗವಾನ್ ಎಐಎಂಐಎಂ ಮಾಲೆಗಾಂವ್ ತಾಲೂಕು ಅಧ್ಯಕ್ಷನಾಗಿದ್ದಾನೆ, ಖಲೀಲ್ ಪಟೇಲ್ ಮಾಜಿ ಮೇಯರ್ ಆಗಿದ್ದ ಎಂದು ತಿಳಿದು ಬಂದಿದೆ. ಮುಸ್ಲಿಂ ಮುಖಂಡರೇ ಅತ್ಯಾಚಾರಿಯ ಬೆಂಬಲಕ್ಕೆ ನಿಂತು ದೂರು ನೀಡ ಬೇಡಿ ಎಂದು ಸಂತ್ರಸ್ಥ ಯುವತಿಯ ತಾಯಿಗೆ ಬೆದರಿಕೆ ಒಡ್ಡಿದ್ದು, ಒತ್ತಡ ಹೇರಿದ್ದು ತೀವ್ರ ಖಂಡನೆಗೆ ವ್ಯಕ್ತವಾಗಿದೆ.
Leave A Reply