ಕಾಶ್ಮೀರದಲ್ಲಿ ಒಂಟಿ ತೋಳ ಮಾದರಿ ದಾಳಿಗೆ ಮುಸ್ಲಿಂ ಉಗ್ರ ಸಂಘಟನೆಗಳ ಸಂಚು
ದೆಹಲಿ: ಕಾಶ್ಮೀರ ಕಣಿವೆಯಲ್ಲಿ ಉಗ್ರ ಸಂಘಟನೆಗಳು ಮತ್ತು ಪ್ರತ್ಯೇಕವಾದಿಗಳ ಹೆಡೆ ಮುರಿ ಕಟ್ಟಿರುವ ಕೇಂದ್ರ ಸರ್ಕಾರ ಮತ್ತು ಸೈನ್ಯದ ಗಟ್ಟಿ ನಿಲುವು ಮುಸ್ಲಿಂ ಉಗ್ರ ಸಂಘಟನೆಗಳ ಅಸ್ತಿತ್ವವನ್ನೇ ಅಲುಗಾಡಿಸಿವೆ. ಆದರೂ ತಮ್ಮ ಕುತಂತ್ರ ಮುಂದುವರಿಸಿರುವ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಕಾಶ್ಮೀರ ಕಣಿವೆಯ ಯುವಕರಿಗೆ ತೀವ್ರಗಾಮಿ ಚಿಂತನೆಗಳನ್ನು ಬಿತ್ತಿ, ಒಂಟಿ ತೋಳದ ಮಾದರಿಯಲ್ಲಿ ದಾಳಿ ನಡೆಸುವ ಹುನ್ನಾರ ನಡೆಸಿವೆ ಎಂಬ ಮಾಹಿತಿ ಕೇಂದ್ರ ಗೃಹ ಇಲಾಖೆಯಿಂದಲೇ ಹೊರಬಿದ್ದಿದೆ.
ಐಎಸ್ ಐಎಸ್ ದುಷ್ಕೃತ್ಯ ತಡೆಗಟ್ಟಲು ಕೇಂದ್ರ ಗೃಹ ಇಲಾಖೆಯ ಸೈಬರ್ ವಿಭಾಗವು ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಟೆಲಿಗ್ರಾಮ್ ನಲ್ಲಿ ಯುವಕರನ್ನು ಧರ್ಮದ ಹೆಸರಲ್ಲಿ ಪ್ರಚೋಧಿಸುವ ಲೇಖನ, ಚಿತ್ರಗಳ ಪ್ರಸಾರವನ್ನು ತಡೆಹಿಡಿದಿದೆ. ಈ ಮಾರ್ಗದ ಮೂಲಕ ಯುವಕರಲ್ಲಿ ಮೂಲಭೂತವಾದಿ ಚಿಂತನೆಗಳನ್ನು ಬಿತ್ತಿ, ದುಷ್ಕೃತ್ಯಕ್ಕೆ ಸೆಳೆಯುವ ಸಂಚು ಐಎಸ್ ಐಎಸ್ ಹೂಡಿದೆ.
ಇತ್ತೀಚೆಗೆ ಸೈಬರ್ ವಿಂಗ್ ಐಸಿಸ್ ಪರವಾದ, ಯುವಕರನ್ನು ದುಷ್ಕೃತ್ಯಗಳಿಗೆ ಪ್ರಚೋಧಿಸುವ ಲೇಖನ, ಚಿತ್ರಗಳನ್ನು ಪ್ರಕಟಿಸುತ್ತಿದ್ದ ಟೆಲಿಗ್ರಾಮ್ ಚಾನಲ್ ವೊಂದನ್ನು ಪತ್ತೆ ಹಚ್ಚಿತ್ತು. ಅದರಲ್ಲಿ ಷರಿಯಾ ಕಾನೂನು ಜಾರಿ ಮಾಡುವ ಕುರಿತು ಯುವಕರಿಗೆ ಬೋಧಿಸಲಾಗುತ್ತಿತ್ತು. 23 ಸೆಪ್ಟೆಂಬರ್ 2017ರಂದು ಟೆಲಿಗ್ರಾಮ್ ಪ್ರಕಟಿಸಲಾಗಿದ್ದು, ಅದೇ ವರ್ಷ ಅಕ್ಟೋಬರ್ 3 ರಂದು ಹೊಸದಾಗಿ ಹೆಸರು ಬದಲಾಯಿಸಲಾಗಿದೆ.
ಕೇಂದ್ರ ಗೃಹ ಇಲಾಖೆ ವರದಿ ಪ್ರಕಾರ ‘ಟೆಲಿಗ್ರಾಮ್ ಚಾನೆಲ್ ನಲ್ಲಿ ಒಂಟಿ ತೋಳ ಮಾದರಿಯಲ್ಲಿ ಹೇಗೆ ದಾಳಿ ನಡೆಸಬೇಕು, ದಾಳಿಯಲ್ಲಿರಬೇಕಾದ ವರ್ತನೆಗಳು, ಬಾಂಬ್ ದಾಳಿಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಲ್ಲದೇ ಕಾಶ್ಮೀರದಲ್ಲಿ ಮುಸ್ಲಿಂ ರಾಷ್ಟ್ರಕ್ಕೆ ಬೆಂಬಲಿಸಿ ಎಂಬ ಹ್ಯಾಷ್ ಟ್ಯಾಗ್ ಕೂಡ ರಚಿಸಲಾಗಿದೆ. ಇದೇ ಮಾದರಿಯ ಹ್ಯಾಷ್ ಟ್ಯಾಗ್ ನ್ನು 2014ರಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿ ಬಳಸಲಾಗಿತ್ತು. ಅದು ಭಾರಿ ಪರಿಣಾಮ ಬೀರಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದನೆ ಹರಡುವ ಪೇಜ್ ಗಳ ಅಡ್ಮಿನ್ ಗಳ ಬಗ್ಗೆ ನಿಗಾಯಿರಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Leave A Reply