ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲಿಸಿದ ಮುಸ್ಲಿಂ ಮಹಿಳೆ ಮನೆಯ ಗತಿ ಏನಾಯ್ತು ಗೊತ್ತೆ..?
ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬ ಕೋಟ್ಯಂತರ ಹಿಂದೂಗಳ ಬಹು ದಿನಗಳ ಕನಸು ಈಡೇರುವ ಕಾಲ ಸನ್ನಿಹಿತವಾಗಿದೆ. ಇತ್ತೀಚೆಗೆ ಮುಸ್ಲಿಂ ಬೋರ್ಡ್ ಕೂಡ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ಅದರಂತೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿದ್ದಾರೆ ಎಂದು ಮುಸ್ಲಿಂ ದುರುಳರ ಗುಂಪೊಂದು ಮನೆಯ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದ್ದಾರೆ.
ಮುಸ್ಲಿಂ ಕಿರುಕುಳ ತಡೆಗಟ್ಟುವ ಸಂಸ್ಥೆಯ ಜಿಲ್ಲಾ ಮುಖ್ಯಸ್ಥೆ ಇಕ್ರಾ ಚೌದರಿ ದುರಳರ ದಾಳಿಗೆ ಒಳಗಾದವರು. ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ಹಲವಾರು ಜನರು ಬೆದರಿಕೆ ಒಡ್ಡಿದಲ್ಲದೇ, ಅವರ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೇ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ.
ಡಿಸೆಂಬರ್ 6ರಂದು ಜಿಲ್ಲಾಧಿಕಾರಿಗಳಿಗೆ ರಾಮಮಂದಿರ ನಿರ್ಮಾಣಕ್ಕೆ ಬೆಂಬಲಿಸಿ ನಾವು ಮನವಿ ಪತ್ರ ಸಲ್ಲಿಸಿದ್ದೆ. ಆಗಿನಿಂದ ಹಾಪುರ್ ನಲ್ಲಿ ಬದುಕಬೇಕಾದರೆ ರಾಮಮಂದಿರ ವಿಷಯದಿಂದ ದೂರವಿರು ಎಂದು ಜೀವ ಬೆದರಿಕೆ ಒಡ್ಡಿದ್ದಾರೆ. ನನಗೆ ಹೆದರಿಕೆಯಾಗುತ್ತಿದೆ. ಅವರು ನನ್ನನ್ನು ಕೊಲ್ಲಬಹುದು ಎಂದು ಇಕ್ರಾ ಚೌದರಿ ಆತಂಕಕ್ಕೆ ಒಳಗಾಗಿದ್ದಾರೆ.
ಇಕ್ರಾ ಅವರ ಮನೆಯ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿರುವ ಮೂಲಭೂತವಾದಿಗಳು ‘ಈಗ ಹೇಳು ನಿನ್ನ ರಾಮನ ಹೆಸರನ್ನು’ ಎಂಬ ಸಂದೇಶವುಳ್ಳ ಚೀಟಿಯನ್ನು ಬಿಟ್ಟುಹೋಗಿದ್ದಾರೆ. ಇದರಿಂದ ಆತಂಕಗೊಂಡ ಇಕ್ರಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Leave A Reply