ದೀಪಕ್ ರಾವ್ ಕುಟುಂಬಕ್ಕೆ ಅನಂತಕುಮಾರ್ ನೆರವು, ಕೆಲಸ ಕೊಡಿಸಿದ ಕೌಶಲಾಭಿವೃದ್ಧಿ ಸಚಿವ
ಮಂಗಳೂರು: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕುಟುಂಬಕ್ಕೆ ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್ ಭೇಟಿ ನೀಡಿದ್ದು, ಅವರ ನೆರವಿಗೆ ಧಾವಿಸದಿದ್ದಾರೆ.
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಹೆಗಡೆ, ದೀಪಕ್ ರಾವ್ ಅವರ ತಮ್ಮನಿಗೆ ಮಂಗಳೂರಿನಲ್ಲಿರುವ ಕೇಂದ್ರ ಸರ್ಕಾರದ ಅಧೀನದ ಕೆಐಒಸಿಎಲ್ (ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್) ಎಂಬ ಸಂಸ್ಥೆಯಲ್ಲಿ ಕೆಲಸ ಕೊಡಿಸಿದ್ದಾರೆ.
ಹಾಗಂತ ಬರೀ ಆಶ್ವಾಸನೆ ನೀಡಿ ಹೊರಬರದ ಅನಂತಕುಮಾರ್ ಅವರು ಮಂಗಳೂರಿನ ಕಾಟಿಪಳ್ಳದಲ್ಲಿರುವ ದೀಪಕ್ ರಾವ್ ಮನೆಗೆ ತೆರಳಿ, ಅವರ ತಾಯಿಗೆ ಸಾಂತ್ವನ ಹೇಳಿ, ತಮ್ಮನಿಗೆ ಉದ್ಯೋಗ ನೇಮಕ ಪ್ರತಿ ನೀಡಿ ಬಂದಿದ್ದಾರೆ. ಹಾಗೆ ನೋಡಿದರೆ ದೀಪಕ್ ರಾವ್ ಹತ್ಯೆಯಾದ ಬಳಿಕ ಅನಂತಕುಮಾರ್ ಯಾವುದೇ ಭರವಸೆ ನೀಡದಿದ್ದರೂ, ಹಿಂದೂ ಕುಟುಂಬಕ್ಕೆ ನೆರವು ಒದಗಿಸಿದ್ದಾರೆ.
ಹಿಂದೂ ಸಂಘಟನೆಯಲ್ಲಿ ತೊಡಗಿದ್ದ ದೀಪಕ್ ರಾವ್ ಅವರನ್ನು ಜಿಹಾದಿಗಳು ಹತ್ಯೆ ಮಾಡಿದ್ದಾರೆ ಎಂಬ ಆರೋಪವಿದ್ದು, ದೀಪಕ್ ಹತ್ಯೆಯಿಂದ ಕುಟುಂಬ ಸಂಕಷ್ಟಕ್ಕೀಡಾಗಿತ್ತು. ರಾಜ್ಯ ಸರ್ಕಾರ ದೀಪಕ್ ಕುಟುಂಬಕ್ಕೆ 10 ಲಕ್ಷ ರುಪಾಯಿ ನೀಡಿದರೆ, ಹಿಂದೂಗಳೆಲ್ಲ ಒಟ್ಟಾಗಿ ಸುಮಾರು 50 ಲಕ್ಷ ರುಪಾಯಿ ಕುಟುಂಬಕ್ಕೆ ನೀಡಿದ್ದಾರೆ.
ದೀಪಕ್ ತಂದೆ ತೀರಿಕೊಂಡಿದ್ದು, ತಾಯಿ ಇದ್ದಾರೆ. ತಮ್ಮ ಕಿವುಡ ಮತ್ತು ಮೂಗನಾಗಿದ್ದು, ದೀಪಕ್ ಸಾವಿನಿಂದ ಕುಟುಂಬ ಕಂಗಾಲಾಗಿತ್ತು. ಈಗ ಕೇಂದ್ರ ಸಚಿವರು ಕುಟುಂಬಕ್ಕೆ ನೆರವಾಗಿದ್ದು ಹಾಗೂ ಹಿಂದೂಗಳೆಲ್ಲ ಸೇರಿ ಧನಸಹಾಯ ಮಾಡಿದ್ದು ದೀಪಕ್ ಫ್ಯಾಮಿಲಿ ನಿಟ್ಟುಸಿರುವ ಬಿಡುವಂತಾಗಿದೆ.
Leave A Reply