ಐಸಿಸ್ ಸೇರಿದ್ದ ಫಿಎಫ್ ಐ ಕಾರ್ಯಕರ್ತನ ಹತ್ಯೆ
ಕಣ್ಣೂರು: ಮೂಲಭೂತವಾದಕ್ಕೆ ಮಾರು ಹೋಗಿ ಐಸಿಸ್ ಸೇರಿದ್ದ, ಪಿಎಫ್ ಐ ಕಾರ್ಯಕರ್ತನಾಗಿದ್ದ ಕೇರಳದ ಯುವಕನ್ನನ್ನು ಸಿರಿಯಾದಲ್ಲಿ ಹತ್ಯೆ ಮಾಡಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
30 ವರ್ಷದ ಯುವಕ ಅಬ್ದುಲ್ ಮುನಾಫ್ ಉಗ್ರರ ಕ್ರೂರತನಕ್ಕೆ ಬಲಿಯಾದ ಯುವಕ. ಜನವರಿ 17ರಂದು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಕಣ್ಣೂರಿನಲ್ಲಿರುವ ಆತನ ಕುಟುಂಬ ಸದಸ್ಯರಿಗೆ ಆ್ಯಪ್ ಮೂಲಕ ಸಂದೇಶ ತಲುಪಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕೇರಳದ ವಲಿಪಟ್ಟಿನಮ್ ಮೂಲದ ಯುವಕನ ಕುಟುಂಬಕ್ಕೆ ಟೆಲಿಗ್ರಾಮ್ ಮೂಲಕ ಜ.17ರಂದು ಸಾವಿಗಿಡಾಗಿದ್ದಾನೆ ಎಂಬ ಸಂದೇಶ ಬಂದಿದೆ. 2017ರ ನವೆಂಬರ್ ನಲ್ಲಿ ಐಸಿಸ್ ಸೇರಿದ್ದ ಯುವಕ ಮುನಾಫ್ ಸಾವಿನ ಬಗ್ಗೆ ಆತನ ಗೆಳೆಯ, ಸಿರಿಯಾದಲ್ಲಿ ಐಸಿಸ್ ಸೇರಿರುವ ಖಯಾಮ್ ಮಾಹಿತಿ ನೀಡಿದ್ದಾನೆ ಎಂದು ಡೆಪ್ಯುಟಿ ಸುಪರಿಂಟೆಡ್ ಆಫ್ ಪೊಲೀಸ್ ಪಿಪಿ ಸದಾನಂದನ್ ತಿಳಿಸಿದ್ದಾರೆ.
ಮನಾಫ್ ಕೇರಳದ ಮೂಲದ ಫಿಎಫ್ಐ ಸದಸ್ಯನಾಗಿದ್ದ. ಐಸಿಸ್ ಸೇರುವ ಮುಂಚಿನ ಕೆಲವು ದಿನಗಳಲ್ಲಿ ದೆಹಲಿಯಲ್ಲಿ ಪಿಎಫ್ಐ ಕಚೇರಿಯ ಕಾರ್ಯದರ್ಶಿಯಾಗಿ ನಿರ್ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
2009ರಲ್ಲಿ ಸಿಪಿಐ(ಎಂ) ಕಾರ್ಯಕರ್ತನ ಕೊಲೆಯಲ್ಲೂ ಮನಾಫ್ ಭಾಗಿಯಾಗಿದ್ದ ಎನ್ನಲಾಗಿದೆ. ಸುಳ್ಳು ದಾಖಲೆಗಳನ್ನು ನೀಡಿ, ಪಾಸಪೋರ್ಟ್ ಸಿದ್ಧಪಡಿಸಿ ಸಿರಿಯಾಕೆ ಹೋಗಿದ್ದ. ಈತ ಹೋಗಿದ್ದ ಸಮಯದಲ್ಲೇ ಕೇರಳದಿಂದ ಸುಮಾರು 15 ಜನರು ಐಸಿಸ್ ಸೇರಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಸುಮಾರು 100 ಯುವಕರು ಧರ್ಮಕ್ಕಾಗಿ ಹೋರಾಡುತ್ತೇನೆ ಎಂದು ಸಿರಿಯಾ, ಇರಾಕ್ ಗೆ ಹೋಗಿದ್ದಾರೆ. ಇವರು ಮನೆ ಬಿಟ್ಟಿರುವ ಕುರಿತು ಅವರ ಕುಟುಂಬದವರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Leave A Reply