ಗಡಿಯಲ್ಲಿ ಪಾಕ್ ಯುದ್ಧೋತ್ಸಾಹ 4 ಯೋಧರು ಹುತಾತ್ಮ, 6 ಸಾರ್ವಜನಿಕರ ಸಾವು

ಜಮ್ಮು ಕಾಶ್ಮೀರ: ಗಡಿ ಭಾಗದಲ್ಲಿ ಪಾಕಿಸ್ತಾನ ತನ್ನ ಪುಂಡಾಟ ಮುಂದುವರಿಸಿದೆ. ಪಾಕ್ ಪಾತಕತನ ನಾಲ್ಕನೇ ದಿನ ತಲುಪಿದ್ದು, ನಾಲ್ವರು ಯೋಧರು, 6 ಸಾರ್ವಜನಿಕರು ಸೇರಿ 10 ಜನರು ಮೃತಪಟ್ಟಿದ್ದಾರೆ. ಪಾಕಿಸ್ತಾನದ ಸೈನ್ಯ ಕಾಶ್ಮೀರದ ಸಂಬಾ, ಕತುವಾ, ರಜೌರಿ ಹಾಗೂ ಜಮ್ಮು ಗಡಿಯಲ್ಲಿ ಶೆಲ್ ದಾಳಿ ನಡೆಸಿದ್ದರಿಂದ ಇಬ್ಬರು ಭಾರತೀಯ ಯೋಧರು ಇಬ್ಬರು ಸ್ಥಳೀಯರು ಮೃತಪಟ್ಟಿದ್ದರು. 35 ಜನರು ಗಾಯಗೊಂಡಿದ್ದರು. ಬುಧವಾರ ನಡೆದ ದಾಳಿಯಲ್ಲಿ ಬಿಎಸ್ ಎಫ್ ಯೋಧ ಹಾಗೂ ಒಬ್ಬ ಬಾಲಕಿ ಬಲಿಯಾಗಿ, 8 ಜನರಿಗೆ ಗಾಯಗಳಾಗಿದ್ದವು.
ಪಾಕಿಸ್ತಾನದವರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಪಂಜಾಬ್ ನ ಸಂಗ್ರುರ್ ಜಿಲ್ಲೆಯ ಅಲಂಪೂರದ 23 ವರ್ಷದ ಯಧ ಮನದೀಪ್ ಸಿಂಗ್ ಹುತಾತ್ಮರಾಗಿದ್ದಾರೆ. ಶನಿವಾರವೂ ಪಾಕಿಸ್ತಾನ ತನ್ನ ನೀಚತನ ಮುಂದುವರಿಸಿದೆ.ಜಮ್ಮು ಕಾನಚಕ್ ವಲಯದ ಗಜನ್ಸೂ ಪ್ರದೇಶದಲ್ಲಿ ಶೆಲ್ ದಾಳಿಗೆ ಮೂವರು ಮೃತಪಟ್ಟಿದ್ದರು.
ಗಡಿಯಲ್ಲಿ ಯುದ್ಧದ ವಾತಾವರಣ, ರೆಡ್ ಅಲರ್ಟ್ ಘೋಷಣೆ
ಪಾಕಿಸ್ತಾನದ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಪಾಕಿಸ್ತಾನದ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತ ತಾಣಗಳಿಗೆ ತೆರಳುವಂತೆ ಸಾರ್ವಜನಿಕರಿಗೆ ಭಾರತೀಯ ಅಧಿಕಾರಿಗಳು ಸೂಚಿಸಿದ್ದಾರೆ. ಪಾಕಿಸ್ತಾನದ ಪುಂಡಾಟಕ್ಕೆ ಭಯಭೀತರಾಗಿರುವ 10 ಸಾವಿರ ಜನರು ಗಡಿ ಪ್ರದೇಶದಿಂದ ವಲಸೆ ಹೋಗಿದ್ದಾರೆ ಎನ್ನಲಾಗಿದೆ. ಗಡಿಯಲ್ಲಿ ಯುದ್ಧದ ವಾತಾವರ ನಿರ್ಮಾಣವಾಗಿದ್ದರಿಂದ ಗಡಿಯಲ್ಲಿರುವ 300 ಶಾಲೆಗಳನ್ನು ಮುಚ್ಚಲು ಸೂಚಿಸಲಾಗಿದೆ.
ಆರೋಗ್ಯ ಇಲಾಖೆಯಿಂದ ಭಾರಿ ಸಿದ್ಧತೆ
ಗಡಿಯಲ್ಲಿ ನಿರಂತರವಾಗಿ ಪಾಕ್ ಅಪ್ರಚೋಧಿತ ದಾಳಿ ನಡೆಸುತ್ತಿರುವುದರಿಂದ ಆರೋಗ್ಯ ಇಲಾಖೆ ಭಾರಿ ಸಿದ್ಧತೆ ಕೈಗೊಂಡಿದ್ದೆ. ತುರ್ತು ಚಿಕಿತ್ಸೆಗೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ. ಹೆಚ್ಚುವರಿಯಾಗಿ 197 ಆ್ಯಂಬುಲೆನ್ಸ್ ಗಳನ್ನು ನೀಡಲಾಗಿದೆ.