ಈಶಾನ್ಯ ರಾಜ್ಯಗಳತ್ತ ಆರ್ ಎಸ್ ಎಸ್, ಇಂದು ನಡೆಯಲಿದೆ ಬೃಹತ್ ರ್ಯಾಲಿ
ಗುವಾಹಟಿ: ದೇಶಾದ್ಯಂತ ರಾಷ್ಟ್ರವಾದದ ಚಿಂತನೆಗಳನ್ನು ಬಿತ್ತುತ್ತಾ, ಸಮಾಜ ಸೇವೆಗೆ ಭಾರತೀಯ ಯುವ ಸಮುದಾಯವನ್ನು ನೀಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದೀಗ ಈಶಾನ್ಯ ರಾಜ್ಯಗಳ ಜನರಲ್ಲಿ ರಾಷ್ಟ್ರವಾದದ ಚಿಂತನೆಗಳನ್ನು ಬಿತ್ತಲು ಸಿದ್ಧತೆ ಆರಂಭಿಸಿದ್ದು, ಇಂದು ಗುಹಾಹಟಿಯಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು, ವೇದಿಕೆ ಸಿದ್ಧಗೊಂಡಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸೇರಿ ಈಶಾನ್ಯ ರಾಜ್ಯದ ಆರ್ ಎಸ್ ಎಸ್ ಪ್ರಮುಖರು ಸೇರಿ ಸಂಘದ ಪ್ರಮುಖ ಮುಖಂಡರು ಕಾರ್ಯಕ್ರಮದಲ್ಲಿ ಭಾವಹಿಸಲಿದ್ದಾರೆ. ಸುಮಾರು 75 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾವಹಿಸುವ ನಿರೀಕ್ಷೆ ಇದೆ.
ಐದು ದಶಕಗಳ ಬಳಿಕ ಈಶಾನ್ಯ ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ಬೃಹತ್ ರ್ಯಾಲಿಯನ್ನು ಏರ್ಪಡಿಸಿದೆ. ಇತ್ತೀಚೆಗೆ ಆರ್ ಎಸ್ ಎಸ್ ಸಮಾವೇಶದಲ್ಲಿ ಐದು ಸಾವಿರ ಜನರು ಸೇರಿಸುವುದು ಕಷ್ಟವಾಗಿತ್ತು. ಲೂಥ್ ಪೊರಿಯಾ ಹಿಂದೂ ಸಮಾವೇಶ ಹೆಸರಿಲ್ಲಿ ರ್ಯಾಲಿ ಹಮ್ಮಿಕೊಂಡಿದ್ದು ಸುಮಾರು 35 ಸಾವಿರ ಸ್ವಯಂ ಸೇವಕರಿಂದ ಸೂರ್ಯ ನಮಸ್ಕಾರ ನಡೆಯಲಿದೆ. ಸಮಾವೇಶದಲ್ಲಿ ಭಾಗವಹಿಸುವವರಿಗಾಗಿ 25 ಸಾವಿರ ಕುಟುಂಬಗಳು ಐದು ಆಹಾರದ ಪ್ಯಾಕೆಟ್ ಗಳನ್ನು ನೀಡಲು ಮುಂದಾಗಿದ್ದಾರೆ.
ಕ್ರಿಶ್ಚಿಯನ್ ಮತಾಂತರಕ್ಕೆ ಹೊಡೆತ ನೀಡಲಿದೆ ಸಮಾವೇಶ
ಈಶಾನ್ಯ ರಾಜ್ಯಗಳಲ್ಲಿ ಮುಗ್ದ ಹಿಂದೂ ಆದಿವಾಸಿಗಳನ್ನು ಮರಳು ಮಾಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಕ್ರಿಶ್ಚಿಯನ್ನರಿಗೆ ಈ ಸಮಾವೇಶ ಬಲವಾದ ಪೆಟ್ಟು ನೀಡಲಾಗಿದೆ. ಹಿಂದೂಗಳಲ್ಲಿ ಜಾಗೃತಿ ಮೂಡಿಸಿ, ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳ ಬಲ ಸಂಘಟಿಸುವ ಉದ್ದೇಶ ಹೊಂದಲಾಗಿದೆ. ಇತ್ತೀಚೆಗೆ ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜನಪ್ರೀಯತೆ ಪಡೆಯುತ್ತಿದ್ದು, ಅದಕ್ಕೆ ಸಾಕ್ಷಿಯಾಗಿ ಈ ಸಮಾವೇಶ ನಿಲ್ಲಲಿದೆ.
Leave A Reply