ಪ್ರಕಾಶ್ ರೈ ಅವರೇ, ಮಾಂಸ ತಿಂದು ದೇವಾಲಯಕ್ಕೆ ಹೋಗುವ ಸಿದ್ದರಾಮಯ್ಯನವರು ನಿಜವಾದ ಹಿಂದೂವೇ?
ಈ ಪ್ರಕಾಶ್ ರೈ ಬುದ್ಧಿಗೆ ಏನಾಗಿದೆ. ಇವರ್ಯಾಕೆ ಹಿಂಗಾಡ್ತಿದಾರೆ? ಬುದ್ಧಿಜೀವಿ, ಪ್ರಗತಿಪರ, ಜೀವಪರ ಎಂಬ ಟ್ಯಾಗ್ ಪಡೆದುಕೊಳ್ಳಲು ಹೀಗಾಡುತ್ತಿದ್ದಾರಾ? ಅಥವಾ ಬುದ್ಧಿಗೆ ಏನಾದರೂ ಆಗಿದೆಯಾ?
“ನಾನು ಬಿಜೆಪಿ, ನರೇಂದ್ರ ಮೋದಿ ವಿರೋಧಿ. ನರೇಂದ್ರ ಮೋದಿ ಹಾಗೂ ಅನಂತಕುಮಾರ್ ಹೆಗಡೆ ಹಿಂದೂಗಳಲ್ಲ”
ಹೇಳಿ, ಪ್ರಕಾಶ್ ರೈ ಹೇಳಿರುವ ಈ ಹೇಳಿಕೆಯಲ್ಲಿ ಯಾವ ಅರ್ಥವಿದೆ? ಸುಮ್ಮನೆ ಮಾಧ್ಯಮಗಳಲ್ಲಿ ತಮ್ಮ ಕುರಿತು ಪ್ರಸಾರವಾಗುತ್ತದೆ, ಪತ್ರಿಕೆಗಳಲ್ಲಿ ಜಾಗ ಸಿಗುತ್ತದೆ ಎಂದು ಬಾಯಿಗೆ ಬಂದಹಾಗೆ, ಅರ್ಥವಿಲ್ಲದೆ ಮಾತನಾಡುವುದೇ? ಬಾಯಿ ಅಷ್ಟಕ್ಕೂ ಪ್ರಕಾಶ್ ರೈ ಬಾಯಿಬಿಟ್ಟರೆ ಸಾಕು ಇಷ್ಟೆಲ್ಲ ಯಾಕೆ ಚರ್ಚೆಯಾಗುತ್ತದೆ?
ಪ್ರಕಾಶ್ ರೈ ಅವರು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದು, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ವಿರೋಧಿಸಲಿ. ಯಾರದ್ದೂ ತಕರಾರಿಲ್ಲ. ಆದರೆ ಅವರೆಲ್ಲ ಹಿಂದೂಗಳಲ್ಲ ಎಂದು ಹೇಳಿದರೆ ಏನರ್ಥ?
ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಕೊಂದರೆ ನೀನೊಬ್ಬ ಮನುಷ್ಯನಾ ಎಂದು ಕೇಳುತ್ತೇವೆ. ಅಮಾನವೀಯವಾಗಿ ನಡೆದುಕೊಂಡರೆ, ನಿನಗೆ ಮನುಷ್ಯತ್ವ ಇದೆಯಾ ಎನ್ನುತ್ತೇವೆ. ಮೋಸ ಮಾಡಿದವನಿಗೆ ದ್ರೋಹಿ ಎನ್ನುತ್ತೇವೆ. ಆದರೆ ನರೇಂದ್ರ ಮೋದಿ ಹಾಗೂ ಹೆಗಡೆ ಅವರನ್ನು ಹಿಂದೂಗಳಲ್ಲ ಎನ್ನಲು ಕಾರಣವೇನು?
ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಆರೆಸ್ಸೆಸ್ಸಿನ ಹಿನ್ನೆಲೆಯಿಂದ ಬಂದವರಾದ ಕಾರಣ ಅವರು ಹಿಂದುತ್ವವಾದಿಯಂತೆ ಕಾಣುತ್ತಾರೆ. ಅವರೊಬ್ಬ ಪ್ರಖರ ಹಿಂದೂ ಎಂದು ಇಡೀ ದೇಶವೇ ಒಪ್ಪಿಕೊಂಡಿದೆ. ಹಾಗಂತ ಅವರೇನು ಬೇರೆ ಧರ್ಮೀಯರನ್ನು ದ್ವೇಷಿಸುವುದಿಲ್ಲವಲ್ಲ?
ಹಾಗೊಂದು ವೇಳೆ ನರೇಂದ್ರ ಮೋದಿ ಅವರು ಬೇರೆ ಧರ್ಮೀಯರನ್ನು ದ್ವೇಷಿಸುತ್ತಿದ್ದರೆ, ಸ್ವತಂತ್ರವಾಗಿ ಮುಸ್ಲಿಂ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳುವ ಅವಕಾಶ, ಹಜ್ ಯಾತ್ರೆ ಸಬ್ಸಿಡಿ ಹಣವನ್ನು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೆ ಮೀಸಲು, ತ್ರಿವಳಿ ತಲಾಖ್ ವಿರುದ್ಧ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರಲಿಲ್ಲ. ಈ ಕನಿಷ್ಠ ಜ್ಞಾನವೂ ಪ್ರಕಾಶ್ ರೈಗೆ ಇಲ್ಲವೆಂದರೆ, ಅವರ್ಯಾವ ಸೀಮೆ ಪ್ರಗತಿಪರರು?
ಇನ್ನು ನರೇಂದ್ರ ಮೋದಿ ಹಿಂದೂ ಅಲ್ಲ ಎನ್ನಲು ಅವರು ಯಾವ ಹಿಂದೂಗಳಿಗೂ ಮೋಸ ಮಾಡಿಲ್ಲ. ಯಾವ ಹಿಂದೂಗಳನ್ನೂ ಕೀಳಾಗಿ ಕಂಡಿಲ್ಲ. ಅನಂತಕುಮಾರ್ ಹೆಗಡೆಯವರೂ ಹಿಂದೂಗಳಿಗೆ ದ್ರೋಹ ಬಗೆದಿಲ್ಲ. ಹಾಗಾದರೆ ಇವರೆಲ್ಲ ಹಿಂದೂಗಳಲ್ಲ ಎನ್ನಲು ಪ್ರಕಾಶ್ ರೈ ಅವರ ಬಳಿ ಯಾವ ಪುರಾವೆಯಿದೆ? ಯಾವ ತಾರ್ಕಿಕ ವಿಚಾರವಿದೆ?
ಹಾಗೆ ನೋಡಿದರೆ, ರಾಷ್ಟ್ರದ ಇತಿಹಾಸದುದ್ದಕ್ಕೂ ಮುಸ್ಲಿಮರನ್ನು ಓಲೈಕೆ ಮಾಡಿ ಮತ ಬ್ಯಾಂಕನ್ನಾಗಿ ಬಳಸಿಕೊಂಡಿದ್ದು ಕಾಂಗ್ರೆಸ್. ರಾಜೀವ್ ಗಾಂಧಿ ಹತ್ಯೆಯಾದ ಬಳಿಕ ದೇಶಾದ್ಯಂತ ಮೂರು ಸಾವಿರ ಸಿಖ್ಖರನ್ನು ಹತ್ಯೆಯಾಗಿದ್ದು ಕಾಂಗ್ರೆಸ್ ಅವಧಿಯಲ್ಲೇ. ಅಷ್ಟೇ ಏಕೆ ಕರ್ನಾಟಕದಲ್ಲೇ ಸಿದ್ದರಾಮಯ್ಯನವರ ಅವಧಿಯಲ್ಲಿ 21 ಹಿಂದೂಗಳ ಹತ್ಯೆಯಾಗಿದೆ. ಹೀಗಿದ್ದರೂ ಪ್ರಕಾಶ್ ರೈ ಕಾಂಗ್ರೆಸ್ಸಿಗರನ್ನು ಪ್ರಶ್ನಿಸುವುದಿಲ್ಲ ಎಂದರೆ ಇದು ಇಬ್ಬಂದಿತನವಲ್ಲವೇ?
ಕರ್ನಾಟಕದಲ್ಲಿ 21 ಹಿಂದೂಗಳ ಹತ್ಯೆಯಾದರೂ ತನಿಖೆ ಮಾಡಿಸದ ಸಿದ್ದರಾಮಯ್ಯ, ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಸಾಲು ಸಾಲು ಹತ್ಯೆಯಾದರೂ ಸುಮ್ಮನವಿರುವ ಪಿಣರಾಯಿ ವಿಜಯನ್ ಅವರಿಗೆ ನೀವ್ಯಾವ ಸೀಮೆ ಎಂದು ಕೇಳುವ ತಾಕತ್ತು, ದಾರ್ಷ್ಟ್ಯ ಪ್ರಕಾಶ್ ರೈ ಅವರಿಗಿದೆಯಾ? ದನದ ಮಾಂಸ ತಿಂದು ಗೋಪೂಜೆ ಮಾಡುವ, ಮಾಂಸ ತಿಂದು ದೇವಸ್ಥಾನಕ್ಕೇ ಹೋಗಿ ಬಂದು ಸಮರ್ಥನೆ ಮಾಡಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಜವಾದ ಹಿಂದೂಗಳೇ ಪ್ರಕಾಶ್ ರೈ? ಉತ್ತರಿಸುವ ತಾಕತ್ತಿದೆಯಾ?
Leave A Reply