ಎಸ್ ಡಿಪಿಐ ಕಾರ್ಯಕರ್ತರ ನಿಜಬಣ್ಣ ಬಯಲು, ಎಬಿವಿಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ನಾಲ್ವರ ಬಂಧನ!
ತಿರುವನಂತಪುರ: ಕೇರಳದಲ್ಲಿ ಹಿಂದೂಗಳು, ಬಿಜೆಪಿ, ಆರೆಸ್ಸೆಸ್ ಹಾಗೂ ಎಬಿವಿಪಿ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಕಾರ್ಯಕರ್ತರ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಈ ಸಂಘಟನೆಯ ನಿಜಬಣ್ಣ ಬಯಲಾಗಿದೆ.
ಎಬಿವಿಪಿ ಕಾರ್ಯಕರ್ತ ಶ್ಯಾಮ್ ಪ್ರಸಾದ್ ಕೊಲೆ ಪ್ರಕರಣದಲ್ಲಿ ಈ ಊಹೆ ನಿಜವಾಗುವ ಲಕ್ಷಣ ಗೋಚರಿಸಿದ್ದು, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ)ದ ರಾಜಕೀಯ ವಿಭಾಗದ ಪಿಎಫ್ಐನ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ತಲಾಪುಜ್ಜಾ ಎಂಬಲ್ಲಿ ಎಸ್ ಡಿಪಿಐನ ಸಲೀಂ ಹಮ್ಜಾ, ಅಮೀರ್ ಅಬ್ದುಲ್ ರೆಹಮಾನ್, ಮೊಹಮ್ಮದ್ ಬಷೀರ್ ಹಾಗೂ ಶಹೀಮ್ ಶಂಷುದ್ದೀನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಇವರು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಶುಕ್ರವಾರ ಬೈಕ್ ಮೇಲೆ ತೆರಳುತ್ತಿದ್ದ ಎಬಿವಿಪಿ ಕಾರ್ಯಕರ್ತ ಹಾಗೂ ಐಟಿಐ ಕಾಲೇಜಿನ ವಿದ್ಯಾರ್ಥಿ ಶ್ಯಾಮ್ ಪ್ರಸಾದ್ ಮೇಲೆ ಇವರು ದಾಳಿ ಮಾಡಿದ್ದರು. ಪ್ರಸಾದ್ ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ ಬೆನ್ನತ್ತಿ ಹತ್ಯೆ ಮಾಡಿದ್ದರು.
ಮೊದಲಿಗೆ ಎಬಿವಿಪಿ ಸಂಘಟನೆ ಮುಖ್ಯಸ್ಥರು ಇದು ಪಿಎಫ್ಐ ಕಾರ್ಯಕರ್ತರದ್ದೇ ಕೃತ್ಯ ಎಂದು ಆರೋಪಿಸಿದ್ದರು. ಈಗ ನೋಡಿದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಕಾರ್ಯಕರ್ತರನ್ನೇ ಪೊಲೀಸರು ಬಂಧಿಸಿದ್ದಾರೆ.
Leave A Reply