ಪ್ರಸಕ್ತ ವರ್ಷ ದೇಶದ ಆರ್ಥಿಕತೆ ಚೀನಾವನ್ನೂ ಮೀರಿಸಬಹುದು ಎಂದು ಅಂದಾಜಿಸಿದ್ದು ಹೇಗೆ ಗೊತ್ತಾ?
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಹಾಗೂ ಜಿಎಸ್ಟಿಯಂಥ ದಿಟ್ಟ ನಿರ್ಧಾರ ಕೈಗೊಂಡಾಗ ದೇಶಾದ್ಯಂತ ಎಡಬಿಡಂಗಿಗಳು, ಬುದ್ಧಿಜೀವಿಗಳು, ಮೋದಿ ವಿರೋಧಿಗಳು, ಪ್ರತಿಪಕ್ಷಗಳು “ದೇಶದ ಆರ್ಥಿಕತೆಯ ಅಧಃಪತನ ಆರಂಭವಾಯಿತು” ಎಂದೇ ಎಲ್ಲರೂ ಬೊಬ್ಬೆ ಹಾಕಿದರು.
ಆದರೆ ಏನಾಯಿತು? ಪ್ರಸಕ್ತ ವರ್ಷದಲ್ಲಿ ಜಿಎಸ್ಟಿ ದರ ಏರಿಕೆಯಾಗುತ್ತಿದೆ. ದೇಶಾದ್ಯಂತ ಆರ್ಥಿಕತೆ ಉತ್ತಮ ಸ್ಥಿತಿ ತಲುಪಿದೆ. ಇದಕ್ಕೆ ಪೂರಕವಾಗಿ ಮತ್ತೊಂದು ವರದಿ ಬಹಿರಂಗವಾಗಿದ್ದು, ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕತೆ ಚೀನಾವನ್ನೂ ಮೀರಿಸಬಹುದು ಎಂದು ಅಂದಾಜಿಸಲಾಗಿದೆ.
ಸ್ಯಾಂಕ್ರಮ್ ವೆಲ್ತ್ ಮ್ಯಾನೇಜ್ ಮೆಂಟ್ ಎಂಬ ಸಂಸ್ಥೆ ವರದಿ ಬಹಿರಂಗಗೊಳಿಸಿದ್ದು, ಭಾರತದ ಆರ್ಥಿಕತೆ ಉತ್ತಮವಾಗಿದೆ. ಇದು ಹೀಗೆಯೇ ಮುಂದುವರಿದರೆ ಭಾರತದ ಷೇರು ಮಾರುಕಟ್ಟೆ ವಿಶ್ವದ ಐದನೇ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷಾ ಸಂಸ್ಥೆ ತಿಳಿಸಿದೆ.
ಸ್ತುತ ಚೀನಾದ ಜಿಡಿಪಿ ದರ ಕುಸಿಯುತ್ತಿದೆ. ಇತ್ತ ಭಾರತದ ಜಿಡಿಪಿ ದರ 7.5ಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ಚೀನಾವನ್ನು ಮೀರಲಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಿನಲ್ಲಿ ನೋಟು ಬ್ಯಾನ್ ಹಾಗೂ ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತದೆ ಎಂದು ಬೊಬ್ಬೆ ಹಾಕುತ್ತಿರುವವರಿಗೆ ದೇಶದ ಆರ್ಥಿಕ ಸ್ಥಿತಿ ಉತ್ತಮ ಬೆಳವಣಿಗೆ ಸರಿಯಾದ ಉತ್ತರವಾಗಿದೆ.
Leave A Reply