ಕಾಪು ಯುವಕನ ಕಾಪು ಟು ಲಡಾಕ್ ಟು ಕನ್ಯಾಕುಮಾರಿ ಯಾತ್ರೆ!
ಆ ಯುವಕನ ಹೆಸರು ಸಚಿನ್ ಎಸ್ ಶೆಟ್ಟಿ. ಊರು ಕಾಪು. ಐದು ವರ್ಷ ಇದ್ದಾಗಲೇ ತಂದೆಯೊಂದಿಗೆ ಬೈಕಿನಲ್ಲಿ ಕುಳಿತು ಬೈಕ್ ಚಲಾಯಿಸುವ ಮಜಾ ಉಡಾಯಿಸುತ್ತಿದ್ದ ಮಗು ಇವತ್ತು ಇಡೀ ರಾಷ್ಟ್ರವನ್ನು ಏಕಾಂಗಿಯಾಗಿ ಬೈಕಿನಲ್ಲಿ ಹೋಗಿ ಬಂದು ಅಪೂರ್ವ ಸಾಧನೆಯನ್ನು ಮಾಡಿ ಬಂದಿದ್ದಾರೆ. ಒಟ್ಟು 16 ರಾಜ್ಯಗಳನ್ನು 37 ದಿನಗಳ ಪ್ರಯಾಣದಲ್ಲಿ 11200 ಕಿಲೋ ಮೀಟರ್ ಸಂಚರಿಸಿ ಬರುವುದೆಂದರೆ ಅದು ಸುಲಭದ ಮಾತಲ್ಲ. ಏಕೆಂದರೆ ಕನಿಷ್ಟ ಗೆಳೆಯರೊಂದಿಗೆ ಹೋದರೂ ಅದರ ಮಜಾ ಬೇರೆ. ಆದರೆ ಒಬ್ಬನೇ ಬೈಕಿನಲ್ಲಿ ಕುಳಿತು ರೈಡ್ ಮಾಡುತ್ತಾ ಹೋಗುವುದೆಂದರೆ ಅದು ಒಂದು ರೀತಿಯಲ್ಲಿ ಮಾನಸಿಕ ಒತ್ತಡ ಕೂಡ ಹೌದು. ಅದರೊಂದಿಗೆ ವಿಭಿನ್ನಹವಾಮಾನ ಕೂಡ ಸವಾಲೆಸೆಯುತ್ತಾ ಇರುತ್ತದೆ. ಇನ್ನೂ ರಾಜ್ಯದ ಗಡಿ ಬದಲಾಗುತ್ತಿದ್ದಂತೆ ಅಲ್ಲಿನ ಜನರ ನಡವಳಿಕೆ ಕೂಡ ಬದಲಾಗುತ್ತದೆ. ಅದರೊಂದಿಗೆ ಆಹಾರ ಪದ್ಧತಿ ಕೂ.ಡ ಬದಲಾಗುತ್ತದೆ. ಇನ್ನೂ ದೊಡ್ಡ ಚಾಲೆಂಜ್ ಎಂದರೆ ಬೈಕ್ ಎಷ್ಟರ ಮಟ್ಟಿಗೆ ನಿಮಗೆ ಬೆಂಬಲ ಕೊಡುತ್ತದೆ ಎನ್ನುವುದು ಕೂಡ ಇದರೊಂದಿಗೆ ನಿರ್ಧಾರವಾಗುತ್ತದೆ.
ಈ ಎಲ್ಲಾ ಸವಾಲುಗಳನ್ನು ದಾಟಿ ಸಚಿನ್ ಶೆಟ್ಟಿ ಬಹಳ ಯಶಸ್ವಿಯಾಗಿ ಈ ಪ್ರಯಾಣವನ್ನು ಪೂರೈಸಿದ್ದಾರೆ. ಕಾಪುವಿನಿಂದ ಹೊರಟು ಲಡಾಕ್ ತನಕ ಹೋಗಿ ಅಲ್ಲಿಂದ ಕನ್ಯಾಕುಮಾರಿಯನ್ನು ತಲುಪಿ ಅಲ್ಲಿಂದ ಮತ್ತೆ ಕಾಪುವಿಗೆ ಹಿಂತಿರುಗಿದ್ದಾರೆ. ಈ ಮೂಲಕ ಉತ್ತರ ಧ್ರುವಕ್ಕೂ, ದಕ್ಷಿಣ ಧ್ರುವಕ್ಕೂ ಒಂದೇ ಪ್ರಯಾಣದಲ್ಲಿ ಹೋಗಿ ಬಂದು ಸೈ ಎನಿಸಿಕೊಂಡಿದ್ದಾರೆ. ಮೇ 28 ಕ್ಕೆ ಹೊರಟು 37 ದಿನಗಳ ನಂತರ ಊರಿಗೆ ತಲುಪಿ ಗೆಳೆಯರ ಬಳಗದಲ್ಲಿ ವಿಶೇಷ ಸಾಧನೆ ಮೆರೆದಿದ್ದಾರೆ. ಇದರೊಂದಿಗೆ ಸಚಿನ್ ಸಾಹಸದ ಇನ್ನೊಂದು ವಿಶೇಷವೆಂದರೆ ಅವರು ಪ್ರಯಾಣ ಮಾಡುವಾಗ ತನ್ನ ಹೆಲ್ಮೆಟಿಗೆ ಕ್ಯಾಮೆರಾವೊಂದನ್ನು ಫಿಕ್ಸ್ ಮಾಡಿದ್ದರು. ಅದರಿಂದ ಅವರು ಹೋಗುವ ಜಾಗದಲ್ಲಿ ಅಪರೂಪವಾಗಿರುವ ದೃಶ್ಯಗಳನ್ನು ಶೂಟ್ ಮಾಡಲು ಸಾಧ್ಯವಾಗಿದೆ. ಅವರ ಬೈಕಿನಲ್ಲಿ ಇನ್ನು ಎರಡು ರೀತಿಯ ಕ್ಯಾಮೆರಾಗಳು ಕೂಡ ಇದ್ದವು. ಆ ಕ್ಯಾಮೆರಾಗಳನ್ನು ಅವರು ಹೋದ ಜಾಗಗಳಲ್ಲಿ ಬೈಕನ್ನು ನಿಲ್ಲಿಸಿ ಅಲ್ಲಿನ ರಮಣೀಯ ಪರಿಸರವನ್ನು ಚಿತ್ರೀಕರಿಸಲು ಬಳಸಿದ್ದಾರೆ.
ಈ ಮೂಲಕ ಅವರ ಪ್ರವಾಸದ ಅನುಭವಗಳು ಕ್ಯಾಮೆರಾದಲ್ಲಿ ಸೆರೆ ಸಿಕ್ಕಿವೆ. ಅದನ್ನೆಲ್ಲಾ ಬಳಸಿ ಅವರು ಸರಣಿಯಲ್ಲಿ ಸಾಕ್ಷ್ಯಾಚಿತ್ರಗಳನ್ನು ತಯಾರಿಸುವ ಐಡಿಯಾ ಹೊಂದಿದ್ದಾರೆ. ಇಷ್ಟು ದಿನ ಒಬ್ಬರೇ ಬೈಕಿನಲ್ಲಿ ಸಂಚರಿಸಿದ ಕಾರಣ ದೈಹಿಕ ನೋವುಗಳು ಕಾಣಿಸಿಲ್ಲವೇ ಎಂದು ಕೇಳಿದರೆ ಒಂದಿಷ್ಟು ಬೆನ್ನು ನೋವು ಪ್ರಯಾಣದ ಸಂದರ್ಭದಲ್ಲಿ ಆದದ್ದು ನಿಜ. ಆದರೆ ಹೊರಡುವ ಮುನ್ನವೇ ವೈದ್ಯರನ್ನು ಸಂಪರ್ಕಿಸಿ ಔಷಧಗಳನ್ನು ಸಂಗ್ರಹಿಸಿ ಬೈಕಿನಲ್ಲಿ ಇಟ್ಟುಕೊಂಡಿದ್ದ ಅಗತ್ಯ ಬಿದ್ದಾಗ ಅದನ್ನು ಬಳಸಿದ್ದೇನೆ ಎನ್ನುತ್ತಾರೆ. ಇನ್ನೂ ಬೈಕಿನಲ್ಲಿ ಪೆಟ್ರೋಲ್ ಅನ್ನು ಕೂಡ ಸದಾಕಾಲ ಸಂಗ್ರಹಿಸಿ ಇಟ್ಟುಕೊಂಡ ಕಾರಣ ಸಮಸ್ಯೆಯಾಗಿಲ್ಲ ಎನ್ನುವ ಸಚಿನ್ ಅವರು ಚಂಢಿಗಡದಲ್ಲಿ ಬೈಕ್ ಹಾಳಾದ ಕಾರಣ ಪ್ರಯಾಣ ಒಂದು ದಿನ ತಡವಾಯಿತು ಎನ್ನುತ್ತಾರೆ. ಇನ್ನೂ ಹೋದ ಕಡೆಯಲ್ಲೆಲ್ಲಾ ಸಂಸ್ಕರಿಸಿದ ನೀರನ್ನೇ ಕುಡಿಯುತ್ತಿದ್ದ ಕಾರಣ ಆರೋಗ್ಯಕ್ಕೆ ಏನೂ ತೊಂದರೆಯಾಗಿಲ್ಲ ಎಂದು ಸಚಿನ್ ಸಂತಸ ವ್ಯಕ್ತಪಡಿಸುತ್ತಾರೆ. ಇವರು ಬಳಸಿದ ಬೈಕ್ ಯೆಜ್ಡಿ ಕಂಪೆನಿಯದ್ದಾಗಿದ್ದು ಇಂತಹ ದೂರ ಪ್ರಯಾಣಕ್ಕೆಂದೆ ಸಿದ್ಧಪಡಿಸಿದಾಗಿರುತ್ತದೆ. ಅದಕ್ಕಾಗಿ ಅವರಿಗೆ ಅನೇಕರು ಸಹಾಯ ಕೂಡ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಬಾರಿ ನಡೆದ ಬೈಕ್ ಕಾರ್ನಿವಲ್ ನಲ್ಲಿ ಭಾಗವಹಿಸಿದ ಸಚಿನ್ ಗೆ ಲಿಮ್ಕಾ ಬುಕ್ ಆಫ್ ರೆಕಾಡರ್್ ನಲ್ಲಿ ಸ್ಥಾನ ಕೂಡ ಸಿಕ್ಕಿದೆ. ಇನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡಗೆ ಎಂಟ್ರಿ ಕೂಡ ಸಿಕ್ಕಿದೆ.
-“ನಾ” ಕಂಡಂತೆ
Leave A Reply