• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆಯಲ್ಲಿ ನಡೆಯುತ್ತಿದ್ದ ನಕಲಿ ಮತದಾರರ ಸೇರ್ಪಡೆಯ ಬ್ರಹತ್ ಕರ್ಮಕಾಂಡವನ್ನು ಬಯಲು ಮಾಡಿದ ಮಂಗಳೂರು ಬಿಜೆಪಿ ಕಾರ್ಯಕರ್ತರು!

Ganesh Posted On January 22, 2018


  • Share On Facebook
  • Tweet It

ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಶಾಸಕರ ಕುಮ್ಮಕ್ಕಿನಿಂದ ನಕಲಿ ಮತದಾರರ ಸೇರ್ಪಡೆಯಾಗುತ್ತಿದೆ ಎಂಬ ಸುದ್ದಿ ಪ್ರಕಟವಾಗುತ್ತಲೇ ಇತ್ತು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಇದೇ ರೀತಿಯ ತಂತ್ರ ಉಪಯೋಗಿಸಿ ಕಾಂಗ್ರೆಸ್ ಗೆದ್ದಿತ್ತು ಅಂತ ಬಿಜೆಪಿಗರು ಆರೋಪಿಸುತ್ತಾ ಬರುತ್ತಿದ್ದರು.ಇವೆಲ್ಲ ಆಧಾರ ರಹಿತ ಆರೋಪ ಎಂದು ಶಾಸಕರು ಹೇಳುತ್ತಾ ಬಂದಿದ್ದರು.ಆದರೆ ಈ ಚುನಾವಣೆ ಸಮಯದಲ್ಲಿ ಆಧಾರ ಸಮೇತ ಈ ಹಗರಣವನ್ನು ಬಯಲು ಮಾಡಬೇಕೆಂಬ ಪಣ ತೊಟ್ಟ ಬಿಜೆಪಿ ಕಾರ್ಯಕರ್ತರು ಕಳೆದ ಕೆಲವು ದಿನಗಳಿಂದ ಮಹಾನಗರ ಪಾಲಿಕೆ ಆವರಣದಲ್ಲಿ ತೆರೆಮರೆಯಲ್ಲಿ ಮತದಾರ ಸೇರ್ಪಡೆಗೆ ಬರುವ ಅರ್ಜಿಗಳ ಮೇಲೆ ನಿಗಾ ಇಟ್ಟಿದ್ದರು.ಮಂಗಳೂರು ದಕ್ಷಿಣ ವಿಧಾನಸಭಾ ಕಾಂಗ್ರೆಸ್ ಶಾಸಕರ ಪರಮಾಪ್ತರೊಬ್ಬರ ಮೇಲೆ ವಿಶೇಷ ನಿಗಾ ಇರಿಸಲಾಗಿತ್ತು.

ಅದಕ್ಕೆ ಪುಷ್ಟಿ ನೀಡುವಂತೆ ಆ ವ್ಯಕ್ತಿ ದಿನ ನಿತ್ಯ ನೂರಾರು ಅರ್ಜಿಗಳನ್ನು ಚುನಾವಣಾ ಕಚೇರಿಗೆ ತರುತ್ತಿದ್ದ ಬಗ್ಗೆ ಸಂಶಯಗೊಂಡ ಕಾರ್ಯಕರ್ತರು ಎರಡು ಮೂರು ದಿನದ ಹಿಂದೆಯೇ ಅರ್ಜಿಗಳನ್ನು ಮೇಲಿಂದ ಮೇಲೆ ಗಮನಿಸಿದ್ದರು.ಮೇಲ್ನೋಟಕ್ಕೆ ಹೊರರಾಜ್ಯದ ನರ್ಸಿಂಗ್ ವಿಧ್ಯಾರ್ಥಿಗಳ ಹೆಸರು ಇರುವುದನ್ನು ಮನಗೊಂಡ ಕಾರ್ಯಕರ್ತರು ಇನ್ನೂ ಕೂಡ ಇದರ ಮೂಲವನ್ನು ಕಂಡು ಹಿಡಿದು ಬಲವಾದ ಸಾಕ್ಷಿಯೊಂದಿಗೆ ಮತ್ತು ಸಾಮಾಜಿಕ ತಾಣ ಮತ್ತು ಮಾಧ್ಯಮಗಳ ಸಹಕಾರದೊಂದಿಗೆ ಪ್ರಕರಣ ಬಯಲುಗೊಳಿಸಬೇಕೆಂದು ನಿರ್ಧರಿಸಿದರು.ಆ ಪ್ರಕಾರ ಅಚಾನಕ್ ಆಗಿ ಪಾಲಿಕೆ ಚುನಾವಣಾ ಕಚೇರಿ ನುಗ್ಗಿದ ಬಿಜೆಪಿ ಕಾರ್ಯಕರ್ತರು ಹೊಸ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಅರ್ಜಿಗಳನ್ನು ಅಧಿಕಾರಿಗಳ ಮತ್ತು ಕಚೇರಿ ಸಿಬಂಧಿ ಸಮ್ಮುಖದಲ್ಲಿಯೇ ಪರಿಶೀಲಿಸಿದಾಗ ಕೇರಳ ಹಾಗೂ ಇನ್ನಿತರ ಹೊರ ರಾಜ್ಯಗಳಿಂದ ನರ್ಸಿಂಗ್ ಶಿಕ್ಷಣಕ್ಕಾಗಿ ಆಗಮಿಸಿ ಈಗ ಪ್ರಸ್ತುತ ಶಕ್ತಿನಗರದ ಹಾಸ್ಟೆಲ್ ಒಂದರಲ್ಲಿ ತಾತ್ಕಾಲಿಕ ವಾಸವಾಗಿರುವ ನೂರಾರು ಅರ್ಜಿಗಳನ್ನು ಪತ್ತೆ ಹಚ್ಚಿದ್ದಾರೆ.

ಏನಿದು ಅರ್ಜಿ ವಿವಾದ ?
ಹೊಸ ಮತದಾರರ ಸೇರ್ಪಡೆಗೆ ಫಾರ್ಮ್ ಸಂಖ್ಯೆ 6ನ್ನು ಬಳಸಲಾಗುತ್ತದೆ.ಬೇರೆ ಕಡೆಯಲ್ಲಿ ಮತದಾನದ ಹಕ್ಕು ಇದ್ದು ವಿಳಾಸ ಬದಲಾಯಿಸಿ ಪ್ರಸ್ತುತ ವಾಸವಿರುವ ಸ್ಥಳದಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಫಾರ್ಮ್ ಸಂಖ್ಯೆ 7ನ್ನು ನೀಡಲಾಗುತ್ತದೆ.ಆದರೆ ಇಲ್ಲಿ ಬಿಜೆಪಿ ಕಾರ್ಯಕರ್ತರು ಪತ್ತೆ ಹಚ್ಚಿದ ಹೊರ ರಾಜ್ಯದ ಹಾಸ್ಟೆಲ್ ವಿಧ್ಯಾರ್ಥಿಗಳ ಅರ್ಜಿಗಳಲ್ಲಿ ಫಾರ್ಮ್ 7ನ್ನು ಲಗತ್ತೀಕರಿಸಿರಲಿಲ್ಲ.ಈ ಬಗ್ಗೆ ಕಾರ್ಯಕರ್ತರು ಕೇಳಿದ ಪ್ರಶ್ನೆಗೆ ದಂಗಾದ ಪಾಲಿಕೆ ಚುನಾವಣಾ ಸಿಬಂಧಿಗಳು ಮೇಲಧಿಕಾರಿ ಬಳಿ ಕೇಳಲು ತಿಳಿಸಿದರು.ನೂರಾರು ಅರ್ಜಿಗಳಿಗೆ ಒಂದೇ ವಕೀಲರ ನೋಟರಿ ಸಹಿ ಇರುವುದನ್ನು ಕೂಡ ಗಮನಿಸಿದ ಕಾರ್ಯಕರ್ತರು ನೇರವಾಗಿ ಪಾಲಿಕೆ ಚುನಾವಣಾ ಅಧಿಕಾರಿ ಬಳಿ ತೆರಳಿ ಇದರ ಬಗ್ಗೆ ಉತ್ತರ ನೀಡುವಂತೆ ವತ್ತಾಯಿಸಿದರು.ಮತ್ತು ನಮ್ಮ ಬಳಿ ಈ ಬಾರಿ ಸೂಕ್ತ ದಾಖಲೆಗಳಿವೆ ಒಂದು ವೇಳೆ ಅಕ್ರಮವೆಂದು ಸಾಬೀತಾದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೂ ತೆರಳಿ ಪಾಲಿಕೆ ಚುನಾವಣಾ ಕಾರ್ಯಾಲಯದ ಅಕ್ರಮಗಳನ್ನು ಕೇಂದ್ರ ಮಟ್ಟದಲ್ಲಿ ಪ್ರಚಾರ ಮಾಡುತ್ತೇವೆ ಎಂದು ಹೇಳಿದಾಗ ಎಚ್ಚೆತ್ತ ಮಹಿಳಾ ಅಧಿಕಾರಿಯೊಬ್ಬರು ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ಕ್ರಮ ಜರುಗಿಸುತ್ತೇನೆ ಎಂದು ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಕಳುಹಿಸಿದರು.ಇದೇ ಸಂಧರ್ಭದಲ್ಲಿ ದಕ್ಷಿಣ ವಿಧಾನಸಭಾ ಶಾಸಕರ ಪರಮಾಪ್ತ ಸಿಬಂಧಿ ಕೂಡ ಸಿಕ್ಕಿ ಬಿದ್ದಿದ್ದಾರೆ ಹಾಗೂ ಪರಿಸ್ಥಿತಿಯ ಗಂಭೀರತೆ ಅರಿತು ಸ್ಥಳದಿಂದ ಕಾಲ್ಕಿತ್ತಿದ್ದಾರೆಂದು ಹೇಳಲಾಗುತ್ತಿದೆ.

ಈ ಕಾರ್ಯಾಚರಣೆ ಫೇಸ್ ಬುಕ್ ನಲ್ಲಿ ನೇರ ಪ್ರಸಾರ ಮಾಡಲಾಗಿದ್ದು ಇದೀಗ ವೀಡಿಯೋ ವೈರಲ್ ಆಗಿದೆ.ಮುಂದಿನ ದಿನಗಳಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ಬಿರುಗಾಳಿ ಎಬ್ಬಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

  • Share On Facebook
  • Tweet It


- Advertisement -


Trending Now
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Ganesh February 1, 2023
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Ganesh January 31, 2023
Leave A Reply

  • Recent Posts

    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
  • Popular Posts

    • 1
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 2
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 3
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 4
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 5
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search