ಮುಸ್ಲಿಂ ಧರ್ಮದ ನಿಬಂಧನೆಗಳಿಗೆ ಬೇಸತ್ತು ಹಿಂದೂ ಧರ್ಮಕ್ಕೆ ಯುವತಿ ಮತಾಂತರ
ಡೆಹ್ರಾಡೂನ್: ಉತ್ತರಾಖಾಂಡ್ದ ಹಲ್ವಾನಿ ಬಂಬುಲಪುರನಲ್ಲಿ ಯುವತಿಯೊಬ್ಬಳು ಮುಸ್ಲಿಂ ಧರ್ಮದ ಕಟ್ಟು ಪಾಡುಗಳಿಗೆ ಬೇಸತ್ತು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾಳೆ. ಈ ಕುರಿತು ಸ್ಥಳೀಯ ಆಡಳಿತಕ್ಕೆ ಅಫಿಡೆವಿಟ್ ಸಲ್ಲಿಸಿದ್ದು, ನನ್ನು ಹಿಂದೂ ಧರ್ಮದ ಪಟ್ಟಿಯಲ್ಲಿ ಸೇರಿಸಿ. ನನಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾಳೆ.
22 ವರ್ಷದ ಶಹನವಾಜ್ ತನ್ನ ಹೆಸರನ್ನು ಸುನಿತಾ ಎಂದು ಬದಲಾಯಿಸಿಕೊಂಡಿದ್ದಾಳೆ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ದೊರೆಯುತ್ತಿದೆ. ಸ್ವಾತಂತ್ರ್ಯವಿದೆ ಆದ್ದರಿಂದ ನಾನು ಹಿಂದೂ ಧರ್ಮಕ್ಕೆ ಮತಾಂತರವಾಗುತ್ತಿದ್ದೇನೆ ಎಂದು ಮ್ಯಾಜಿಸ್ಟ್ರೇಟರ್ ಗೂ ಅಫಿಡೆವಿಟ್ ಸಲ್ಲಿಸಿದ್ದಾಳೆ.
ಯುವತಿಗೆ ಅವಳ ಕುಟುಂಬಸ್ಥರು ಮಿತಿ ಮೀರಿದ್ದ ಕಟ್ಟುಪಾಡುಗಳನ್ನು ಹೇರಿದಲ್ಲದೇ, ನಿತ್ಯ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಕೆಲ ದಿನಗಳ ಹಿಂದೆ ಯುವರಿಗೆ ವಿಷ ನೀಡಲು ಕುಟುಂಬಸ್ಥರು ಪ್ರಯತ್ನಿಸಿದ್ದರು ಎಂದು ಯುವತಿ ತಿಳಿಸಿದ್ದಾಳೆ. ತ್ರಿವಳಿ ತಲಾಖ್ ಹೋರಾಟದಿಂದ ಪ್ರೇರಣೆ ಪಡೆದ ಯುವತಿ ತಾನು ಹಿಂದೂ ಧರ್ಮಕ್ಕೆ ಮತಾಂತರವಾಗುವ ನಿರ್ಧಾರ ಕೈಗೊಂಡಿದ್ದಾಳೆ.
ಯುವತಿ ಮನವಿ ಸ್ವೀಕರಿಸಿರುವ ಮ್ಯಾಜಿಸ್ಟರೇಟ್ ಪಂಕಜ್ ಉಪಾಧ್ಯಾಯ ಯುವತಿಗೆ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಿಗೆ, ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
Leave A Reply