ಭಾರತದ ಜಿಡಿಪಿ ಕುಸಿಯಿತು, ಕುಸಿಯಿತು ಎಂದವರು ಈ ಸುದ್ದಿ ಓದಿ!
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಹಾಗೂ ಜಿಎಸ್ಟಿ ಜಾರಿಗೊಳಿಸಿದ ಬಳಿಕ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದ ಪ್ರತಿಪಕ್ಷಗಳು, ಬುದ್ಧಿಜೀವಿಗಳು ಭಾರತದ ಜಿಡಿಪಿ ಕುಸಿಯಿತು, ಕುಸಿಯಿತು, ಇನ್ನು ಭಾರತದ ವಿತ್ತೀಯ ಸ್ಥಿತಿ ಅಧೋಗತಿಗೆ ಇಳಿಯಿತು ಎಂದೇ ಬೊಬ್ಬೆ ಹಾಕಿದ್ದರು.
ಆದರೆ ಅಂತರಾಷ್ಟ್ರೀಯ ಮನಿ ಫಂಡ್ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಭಾರತದ ರಾಷ್ಟ್ರೀಯ ಒಟ್ಟು ಉತ್ಪನ್ನ (ಜಿಡಿಪಿ) ಪ್ರಮಾಣ ಪ್ರಸಕ್ತ ವರ್ಷದಲ್ಲಿ 7.4ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಜಿಡಿಪಿ ಬೆಳವಣಿಗೆ ದರದಲ್ಲಿ ಭಾರತ ಚೀನಾವನ್ನೂ ಮೀರಿಸಲಿದ್ದು, ಚೀನಾದ ಶೇ.6.8ರಷ್ಟಿರುವ ಜಿಡಿಪಿಯನ್ನು ಹಿಂದಿಕ್ಕಲಿದೆ ಎಂದು ತಿಳಿಸಿದೆ.
ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಲ್ಡ್ ಎಕನಾಮಿಕ್ ಫೋರಂಗೆ ಭೇಟಿ ನೀಡಲು ಸ್ವಿಡ್ಜರ್ ಲೆಂಡಿಗೆ ತೆರಳಿದ ಬೆನ್ನಲ್ಲೇ, ವರ್ಲ್ಡ್ ಎಕನಾಮಿಕ್ ಔಟ್ ಲುಕ್ ಸಂಸ್ಥೆಯೂ ಭಾರತದ ಜಿಡಿಪಿ ದರದ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, 2019ರಲ್ಲಿ ಭಾರತದ ಶೇ.7.8ಕ್ಕೆ ತಲುಪಲಿದೆ ಎಂದು ತಿಳಿಸಿದೆ.
ಪ್ರಸ್ತುತ ಚೀನಾದ ಜಿಡಿಪಿ ದರದ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಿದ್ದು, ಇದೇ ಅವಧಿಯಲ್ಲಿ ಚೀನಾ ಜಿಡಿಪಿ ಶೇ.6.6ಕ್ಕೆ ಕುಸಿಯಲಿದೆ. ಅಲ್ಲದೆ ಭಾರತದ ಜಿಡಿಪಿ ದರ ಚೀನಾಕ್ಕಿಂತಲೂ ಜಾಸ್ತಿಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2016ರಲ್ಲಿ ಭಾರತದ ಜಿಡಿಪಿ ದರ ಶೇ.7.1ಕ್ಕೆ ತಲುಪಿದಾಗಲೂ ಸುಮ್ಮನಿದ್ದ, ಮೋದಿಯವರನ್ನು ಹೊಗಳದ ದೇಶದ ಕೆಲವರು ನೋಟು ನಿಷೇಧ ಹಾಗೂ ಜಿಎಸ್ಟಿಯಿಂದ ಜಿಡಿಪಿ ತುಸು ಕುಸಿದಿದ್ದನ್ನೇ ದೇಶದ ಆರ್ಥಿಕ ಬೆಳವಣಿಗೆ ತಳ ಮುಟ್ಟುತ್ತದೆ ಎಂದಿದ್ದರು. ಆದರೆ ದೇಶದಲ್ಲಿ ಜಾರಿಯಾದ ಆರ್ಥಿಕ ಸುಧಾರಣೆಗಳಿಂದಲೇ ಇಂದು ಭಾರತದ ಜಿಡಿಪಿ ಜಾಸ್ತಿಯಾಗುತ್ತಿದ್ದರೂ ಇವರು ಒಂದೇ ಒಂದು ಮಾತು ಆಡುತ್ತಿಲ್ಲ.
Leave A Reply