ಇಸ್ಲಾಂಗೆ ಮತಾಂತರವಾದ ಕುಟುಂಬ 5 ವರ್ಷದ ನಂತರ ಮರಳಿ ಹಿಂದೂ ಧರ್ಮಕ್ಕೆ
ಲಖನೌ: ಐದು ವರ್ಷದ ಹಿಂದೆ ಮತಾಂಧರ ಆಮಿಷಗಳಿಗೆ ಬಲಿಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ಉತ್ತರ ಪ್ರದೇಶದ ಸಹರಾನಪುರದ ಕುಟುಂಬವೊಂದು ಐದು ವರ್ಷದ ನಂತರ ಮರಳಿ ಹಿಂದೂ ಧರ್ಮಕ್ಕೆ ಬಂದಿದೆ.
ಧರ್ಮವೀರ (ಮಹಮ್ಮದ್) ಪತ್ನಿ ಮಮತಾ, ಪುತ್ರಿ ಶಿವಾನಿ ಮತ್ತು ಇಬ್ಬರು ಪುತ್ರರು ಐದು ವರ್ಷದ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು. 2012ರಲ್ಲಿ ಮತಾಂಧರ ಆಮಿಷಗಳಿಗೆ ಬಲಿಯಾಗಿದ್ದರು. ಇದೀಗ ತಾವು ಮಾಡಿದ ತಪ್ಪಿನ ಅರಿವಾಗಿ ಘರ್ ವಾಪ್ಸಿಯಾಗಿದ್ದಾರೆ. ಮತಾಂತರವಾದಾಗ ಪತ್ನಿಯ ಹೆಸರು ಮಾರಿಯಮ್ಮ ಮತ್ತು ಪುತ್ರಿಯ ಹೆಸರನ್ನು ಜೈನಬ್ ಎಂದು ಬದಲಾಯಿಸಲಾಗಿತ್ತು.
ಸಹರಾನಪುರ ಜಿಲ್ಲೆಯ ಗಾಂಗೋಯಿ ಗ್ರಾಮದಲ್ಲಿ ಅಂಗಡಿಯಿಟ್ಟುಕೊಂಡಿರುವ ಧರ್ಮವೀರ ಸ್ವಯಿಚ್ಛೆಯಿಂದ ಹಿಂದೂ ಧರ್ಮಕ್ಕೆ ಬರಲು ನಿರ್ಧರಿಸಿದ್ದು, ನಮ್ಮ ಕುಟುಂಬ ಹಿಂದೂ ಧರ್ಮಕ್ಕೆ ಮರಳಲು ನಿಶ್ಚಯಿಸಿದೆ ಎಂದು ವಿಶ್ವಹಿಂದೂ ಪರಿಷತ್ ಗೆ ತಿಳಿಸಿದ್ದಾರೆ. ಮಾತೃ ಧರ್ಮಕ್ಕೆ ಮರಳು ಇವರ ಉತ್ಸಾಹಕ್ಕೆ ಬೆಂಬಲಿಸಿದ ವಿಶ್ವ ಹಿಂದೂ ಪರಿಷತ್ ಆರ್ಯ ಸಮಾಜದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅವರನ್ನು ಹಿಂದೂ ಧರ್ಮಕ್ಕೆ ಸ್ವಾಗತಿಸಿದೆ.
Leave A Reply