ರೈಲು ಹಳಿ ತಪ್ಪಿಸುತ್ತಿದ್ದ ಮುಸ್ಲಿಂ ಯುವಕನ ಬಂಧನ, ದೇಶದಲ್ಲಿ ರೈಲು ಹಳಿತಪ್ಪಲು ಯಾರು ಕಾರಣ?
ಲಖನೌ: ದೇಶದಲ್ಲಿ ಹಲವು ರೈಲುಗಳು ಹಳಿ ತಪ್ಪಿ ಜನ ಮೃತ್ಯುವಿನ ಕೂಪಕ್ಕೆ ಸಿಲುಕುತ್ತಿದ್ದು, ಭಯೋತ್ಪಾದನೆಯ ಕರಿನೆರಳು ಇದೆ ಎಂಬ ಅನುಮಾನ ಕಾಡುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ರೈಲು ಹಳಿ ತಪ್ಪಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿದ್ದಾರೆ.
ಮುರಾದ್ ನಗರ ರೈಲು ನಿಲ್ದಾಣಕ್ಕೆ ಸಮೀಪದ ಗಾಜಿಯಾಬಾದ್-ಮೀರತ್ ರೈಲು ಮಾರ್ಗದ ಹಳಿಗಳನ್ನು ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ತಪ್ಪಿಸುವಾಗ ಜನ ಹಿಡಿದಿದ್ದಾರೆ. ಬಂಧಿತನನ್ನು ಮೊಹಮ್ಮದ್ ಹಾದ್ ಫರ್ಖಾನ್ (30) ಎಂದು ಗುರುತಿಸಲಾಗಿದೆ.
ಬೆಳಗ್ಗೆ 8.30 ಸುಮಾರಿಗೆ ಕೃತ್ಯ ನಡೆಸುತ್ತಿದ್ದು, ಒಂದು ವೇಳೆ ಹಳಿ ತಪ್ಪಿಸಿದ್ದರೆ 8.55ಕ್ಕೆ ತೆರಳಲಿರುವ ಮುಂಬೈ-ಡೆಹ್ರಾಡೂನ್ ಎಕ್ಸ್ ಪ್ರೆಸ್ ರೈಲು ದುರಂತಕ್ಕೀಡಾಗುತ್ತಿತ್ತು. ಇದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ರೈಲು ಹಳಿ ತಪ್ಪಿಸಲು ಯತ್ನಿಸುತ್ತಿದ್ದ ಮೊಹಮ್ಮದ್ ಫರ್ಖಾನ್ ಸೇರಿ ನಾಲ್ವರನ್ನು ಬಂಧಿಸಿದ್ದು, ಸ್ಥಳೀಯ ಗುಪ್ತಚರ ಸಂಸ್ಥೆಗೆ ಇವರ ಕುರಿತು ಮಾಹಿತಿ ನೀಡಲಾಗಿದೆ. ಅಲ್ಲದೆ ಉತ್ತರ ಭಯೋತ್ಪಾದನೆ ನಿಗ್ರಹ ತಂಡಕ್ಕೂ ತಿಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಸಿ.ದುಬೇ ತಿಳಿಸಿದ್ದಾರೆ.
ಒಟ್ಟಿನಲ್ಲಿ ದೇಶಾದ್ಯಂತ ರೈಲು ದುರಂತಗಳ ಹಿಂದೆ ಭಯೋತ್ಪಾದಕರ ಕೃತ್ಯ ಇದೆ ಎಂಬ ಅನುಮಾನ ವ್ಯಕ್ತವಾಗಿರುವ ಬೆನ್ನಲ್ಲೇ ಮುಸ್ಲಿಂ ವ್ಯಕ್ತಿಯೊಬ್ಬ ಸಿಕ್ಕಿರುವುದು ಕೃತ್ಯದ ಹಿಂದೆ ಹಲವು ದುಷ್ಟಶಕ್ತಿಗಳ ಕೈವಾಡ ಇರುವ ಅನುಮಾನ ದಟ್ಟವಾಗಿದೆ.
Leave A Reply