ಒವೈಸಿ ಭಾಷಣ ಮಾಡುವ ವೇಳೆ ಚಪ್ಪಲಿ ಎಸೆತ
ಮುಂಬೈ: ಮುಸ್ಲಿಮರ ನಾಯಕ ಎಂದು ಘೋಷಿಸಿಕೊಂಡ ಸದಾ ಬೆಂಕಿ ಉಗುಳುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮೇಲೆ ಸಮಾವೇಶದಲ್ಲಿ ಭಾಷಣ ಮಾಡುವ ವೇಳೆ ಚಪ್ಪಲಿ ಎಸೆದ ಘಟನೆ ಮುಂಬೈನ ನಾಗಪಾಡನಲ್ಲಿ ನಡೆದಿದೆ. ಘಟನೆಯಿಂದ ಒವೈಸಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಭಾರಿ ಮುಜಗರ ಉಂಟಾಗಿದೆ.
ತ್ರಿವಳಿ ತಲಾಖ್ ಮಸೂದೆ ವಿರೋಧಿಸಿ ದೇಶಾದ್ಯಂತ ತೆಹಫುಜ್ ಈ ಷರಿಯತ್ (ಷರಿಯತ್ ನ ರಕ್ಷಣೆ)ನ್ನು ಹೆಸರಲ್ಲಿ ಸಮಾವೇಶಗಳನ್ನು ಹಮ್ಮಿಕೊಂಡಿದ್ದಾರೆ. ಮುಂಬೈನ ನಾಗಪಾಡ್ ನಲ್ಲಿ ನಡೆದ ಷರಿಯತ್ ರಕ್ಷಣೆ ಸಭೆಯಲ್ಲಿ ಒವೈಸಿ ಮಾತನಾಡುವಾಗಲೇ ವೇದಿಕೆಯತ್ತ ಅಪಚರಿತನೊಬ್ಬ ಚಪ್ಪಲಿ ಎಸೆದಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಒವೈಸಿ ನನ್ನನ್ನು ಹಣಿಯಲು ಸಾಧ್ಯವಿಲ್ಲ. ನನ್ನ ಬಾಯಿ ಮುಚ್ಚಿಸಲು ಆಗುವುದಿಲ್ಲ ಎಂದು ಕಿಡಿ ಕಾರಿದ್ದಾರೆ. ರ್ಯಾಲಿ ನಡೆಯುವ ಸಮಾವೇಶದಲ್ಲಿನ ಸಿಸಿ ಟಿವಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಮುಂಬೈ ದಕ್ಷಿಣ ವಿಭಾಗದ ಡೆಪ್ಯೂಟಿ ಪೊಲೀಸ್ ವೀರೇಂದ್ರ ಮಿಶ್ರಾ ತಿಳಿಸಿದ್ದಾರೆ.
ತ್ರಿವಳಿ ತಲಾಖ್ ಕಾಯಿದೆ ವಿರೋಧಿಸಿ ಅಸಾದುದ್ದೀನ್ ಓವೈಸಿ ಮಾತನಾಡುತ್ತಿರುವಾಗಲೇ ಚಪ್ಪಲಿ ಎಸೆದಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.
Leave A Reply