ಬಂದ್ ನ ನಾಟಕ ಬಂದ್ ಮಾಡಿ ಎಂದ ಮಂಗಳೂರಿಗರು.ಜನವರಿ 25 “ನೋ ಬಂದ್ ಡೇ” ನಡೆಸಲು ನಿರ್ಧಾರ
ಕನ್ನಡ ಪರ ಹೋರಾಟ ಎನಿಸಿಕೊಂಡ ವಾಟಾಳ್ ನಾಗರಾಜ್ ನೇತ್ರತ್ವದ ಸಂಘಟನೆ ನೀರಿನ ವಿಚಾರ ಮುಂದಿಟ್ಟು ನಾಳೆ ಕರೆ ಕೊಟ್ಟ ಬಂದ್ ಗೆ ಮಂಗಳೂರಿನ ಸಾಮಾನ್ಯ ಜನತೆ ನೋ ಎಂದಿದ್ದಾರೆ.ಮಹದಾಯಿ ಮತ್ತು ಮೇಕೆದಾಟು ವಿಚಾರವಾಗಿ ಪದೇ ಪದೇ ಬಂದ್ ನಡೆಸಲಾಗುತ್ತಿದ್ದು ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ದಕ್ಷಿಣ ಕನ್ನಡ ಜನರ ಎತ್ತಿನ ಹೊಳೆ ಯೋಜನೆ ವಿರೋಧಿಸಿ ವಾಟಾಳ್ ಅವರು ಈ ವರೆಗೂ ಬೆಂಬಲ ನೀಡಿಲ್ಲ.ಬದಲಾಗಿ ಹಿಂದೆ ಮಂಗಳೂರು ಜನತೆ ಸ್ವಾರ್ಥಿಗಳು,ಹೃದಯ ಇಲ್ಲದವರು ಎಂದು ವಾಟಾಳ್ ಅವರು ತುಳುನಾಡಿನ ಜನತೆಗೆ ತುಚ್ಛವಾಗಿ ಬೈದಿದರುವುದನ್ನು ಜನತೆ ಇಂದಿಗೂ ಮರೆತಿಲ್ಲ.ಕನ್ನಡ ಪರ ಸಂಘಟನೆ ಹೆಸರಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡುತ್ತಿರುವ ವಿಚಾರ ಕೂಡ ಬುದ್ದಿವಂತರ ಊರು ಎಂದೆನಿಸಿಕೊಂಡ ಮಂಗಳೂರಿಗರಿಗೆ ಚೆನ್ನಾಗಿ ಗೊತ್ತಿರುವ ವಿಚಾರ.
ಬಂದ್ ಗೆ ಕಾಂಗ್ರೆಸ್ ಪರೋಕ್ಷ ಕುಮ್ಮಕ್ಕು
ವಿಧಾನ ಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ.ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ಕೂಡ ನಾಡಿದ್ದು ಬೆಂಗಳೂರಿಗೆ ಬಂದು ಬಿಜೆಪಿ ಪಕ್ಷದ ಪರ ಪ್ರಚಾರ ಆರಂಭಿಸಲಿದ್ದಾರೆ.ಮೋದಿ ಅಲೆಯ ಭಯದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹೇಗಾದರೂ ಮಾಡಿ ರಾಜ್ಯದ ಜನತೆಯ ದಿಕ್ಕು ತಪ್ಪಿಸಿ ತನ್ನ ಭ್ರಷ್ಟ,ಜನ ವಿರೋಧಿ ಆಢಳಿತವನ್ನು ಮರೆಮಾಚಬೇಕು ಮತ್ತು ಜನತೆಯನ್ನು ಭಾವನಾತ್ಮಕವಾಗಿ ಬಿಜೆಪಿ ವಿರುದ್ಧ ಎತ್ತಿಕಟ್ಟಬೇಕೆಂಬ ದುರುದ್ದೇಶದಿಂದ ವಾಟಾಳ್ ಕರೆ ಕೊಟ್ಟಿರುವ ಬಂದ್ ಗೆ ಬೆಂಬಲ ನೀಡುತ್ತಿದೆ.”ಕೈ” ಗೊಂಬೆಯಾಗಿ ವರ್ತಿಸುತ್ತಿರುವ ವಾಟಾಳ್ ಕುಡಿಯುವ ನೀರಿನಿಂತಹ ಸೂಕ್ಷ್ಮ ವಿಚಾರ ಇಟ್ಟುಕೊಂಡು ನರೇಂದ್ರ ಮೋದಿಯರನ್ನು ಟಾರ್ಗೆಟ್ ಮಾಡಲು ಹೊರಟಿದ್ದಾರೆ.ಆದರೆ ಮಹದಾಯಿ ಮತ್ತು ಮೇಕೆದಾಟು ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದದ್ದು ರಾಜ್ಯ ಸರಕಾರ.ಗೋವಾ ಮತ್ತು ಕರ್ನಾಟಕ ರಾಜ್ಯ ಸರಕಾರಗಳು ಪರಸ್ಪರ ಒಪ್ಪಂದ ಮಾಡಿಕೊಂಡ ಬಳಿಕವೇ ಕೇಂದ್ರ ಮದ್ಯ ಪ್ರವೇಶಿಸಬಹುದಾಗಿದೆ.ಈಗಾಗಲೇ ಮೋದಿ ನೇತ್ರತ್ವದ ಕೇಂದ್ರ ಸರಕಾರ ಆದಷ್ಟು ಬೇಗ ವಿವಾದ ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನವೂ ಮಾಡುತ್ತಿದೆ.ಏಕಾ ಏಕಿ ಈಗ ಚುನಾವಣೆ ಸಮಯದಲ್ಲಿ ಬಂದ್ ಮಾಡಿ ವಾಟಾಳ್ ರಾಜ್ಯದ ಸಾಮಾನ್ಯ ಜನತೆ ಪರದಾಡುವಂತೆ ಮಾಡುತ್ತಿದ್ದಾರೆ ಎಂದು ಬಹುತೇಕ ಜನ ಅಭಿಪ್ರಾಯ ಪಟ್ಟಿದ್ದಾರೆ.ಹಾಗೂ ಬಹುತೇಕ ಸಂಘಟನೆಗಳು ಕೂಡ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದು ಘೋಷಿಸಿವೆ.
ಬಡವರ ಹೊಟ್ಟೆಗೆ ಪೆಟ್ಟು
ಮಂಗಳೂರಿಗರು ಮುಖ್ಯವಾಗಿ ದೇಶ ಭಕ್ತರೆಂದು ಗುರುತಿಸಲ್ಪಡುವವರು.ರಾಜ್ಯಕ್ಕಿಂದ ದೇಶಕ್ಕೆ ಸಂಬಂಧ ಪಟ್ಟ ಮತ್ತು ಸಂಸ್ಕ್ರತಿ ವಿಚಾರಗಳಿಗೆ ಇಲ್ಲಿನ ಜನತೆ ಸ್ಪಂದಿಸುವುದು ಜಾಸ್ತಿ.ಉತ್ತರ ಕರ್ನಾಟಕ ಭಾಗದ ಜನತೆಯ ವಿಷಯವಾಗಿ ಇಡೀ ರಾಜ್ಯವನ್ನು ಬಂದ್ ಮಾಡುವುದು ಸರಿಯಲ್ಲ ಹಾಗೂ ಪದೇ ಪದೇ ಬಂದ್ ಮಾಡುವುದರಿಂದ ಪ್ರಮುಖವಾಗಿ ಮಧ್ಯಮವರ್ಗ ಹಾಗೂ ಪಡವರ ಹೊಟ್ಟೆಗೆ ಪೆಟ್ಟು ಬೀಳುತ್ತದೆ ಎಂದು ತುಳುನಾಡಿನ ಜನತೆ ಅಭಿಪ್ರಾಯ ಪಟ್ಟಿದ್ದಾರೆ.ತಮ್ಮ ತಮ್ಮ ಅಂಗಡಿಗಳ ಹೊರಗೆ,ಹೋಟೆಲ್,ಬಸ್ ಸ್ಟ್ಯಾಂಡ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಂದ್ ಗೆ ಬೆಂಬಲ ಇಲ್ಲ ಎಂಬ ಭಿತ್ತಿಪತ್ರಗಳು ಎಲ್ಲೆಂದಲೆಲ್ಲಿ ಕಾಣತೊಡಗಿದೆ.ತಮ್ಮ ಸ್ವಂತ ಸ್ವರ್ಥ ಸಾಧನೆ ಹಾಗೂ ರಾಜಕೀಯ ಪ್ರೇರಿತ ಉದ್ದೇಶಕ್ಕಾಗಿ ಸಾಮಾನ್ಯ ಜನತೆ ಪರದಾಡುವಂತೆ ಮಾಡುವ ಬಂದ್ ಗೆ ತುಳುನಾಡಿನ ಜನತೆ ಒಗ್ಗಟಾಗಿ ಬಹಿಷ್ಕರಿಸಿದ್ದಾರೆ.ಜನವರಿ 25ರಂದು ನಡೆಯುವ ಬಂದ್ ಮಂಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ ಸಂಪೂರ್ಣ ವಿಫಲವಾಗುವುದು ಖಾತ್ರಿಯಾಗಿದೆ.ಬಂದ್ ವಿಫಲವಗಿರುವುದನ್ನು ನೋಡಿ ಮತ್ತೊಮ್ಮೆ ವಾಟಾಳ್ ತುಳುನಾಡಿನ ಜನರಿಗೆ ಯಾವ ಭಾಷೆಯಲ್ಲಿ ನಿಂದಿಸುತ್ತಾರೆ ಕಾದುನೋಡಬೇಕಿದೆ.
Leave A Reply