ಪ್ರಧಾನಿ ನರೇಂದ್ರ ಮೋದಿ ವಿಚಾರಗಳಿಗೆ ಶರಣಾದ ಚೀನಾ
ಬೀಜಿಂಗ್: ಸ್ವೀಟ್ಜ್ ರ್ ಲ್ಯಾಂಡ್ ನ ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಗತೀಕರಣದ ಕುರಿತು ಮಾತನಾಡಿದ ವಿಷಯಗಳಿಗೆ ಚೀನಾ ಶರಣಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದೆ.
ಜಾಗತೀಕರಣ ಮಹತ್ವ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಭಾರತ ಅಂತರ್ಮುಖಿಯಾಗದೆ. ವಿಶ್ವ ಮಾರುಕಟ್ಟೆಗೆ ತೆರೆದುಕೊಳ್ಳುವ ದಿಟ್ಟ ನಿಲುವು ತಳಿಯುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದೆ.
ಕೆಲವು ರಾಷ್ಟ್ರಗಳು ಜಾಗತೀಕರಣವನ್ನು ಮರೆಯುತ್ತಿವೆ. ಪರಸ್ಪರ ಸಹಕಾರ ತತ್ತ್ವದಿಂದ ದೂರಾಗುತ್ತಿವೆ. ಅಂತರ್ಮುಖಿಯಾಗಿರುವುದರಿಂದ ಜಾಗತೀಕರಣ ತನ್ನ ಸತ್ವ ಕಳೆದುಕೊಳ್ಳುತ್ತಿದೆ ಇಂತಹ ಮನಸ್ಥಿತಿ ಭಯೋತ್ಪಾದನೆಷ್ಟೇ ಅಪಾಯಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದರು.
ಜಾಗತೀಕರಣದ ಅಗತ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ವಿಚಾರಗಳಿಗೆ ಶರಣಾಗಿರುವ ಚೀನಾ ವಿಶ್ವವನ್ನೇ ಮಾರುಕಟ್ಟೆಯಾಗಿಸುವ ಉದಾರೀಕರಣದ ನೀತಿಗಳ ಬಲವರ್ಧನೆಗೆ ಭಾರತದ ಜತೆ ಕೈ ಜೋಡಿಸುವ ಭರವಸೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹ್ಯೂ ಚುಯಿಂಗ್,
ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳಲ್ಲಿ ಸರ್ವೇ ಜನಾ ಸುಖಿನೋ ಭವಂತು ತತ್ವ ಕಾಣಿಸಿಕೊಳ್ಳುತ್ತಿದೆ. ರಾಷ್ಟ್ರ, ರಾಷ್ಟ್ರಗಳ ಮಧ್ಯೆ ಸ್ವತಂತ್ರವಾಗಿ ವ್ಯಾಪಾರ ವಹಿವಾಟು ನಡೆದರೆ ಸರ್ವ ರೀತಿಯಲ್ಲೂ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ ಮೋದಿ ಅವರ ವಿಚಾರಗಳು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ವಿಶ್ವವೇ ಭಾರತಕ್ಕೆ ಶರಣಾಗುವಂತೆ ಮಾಡಿದ ಮೋದಿ ವಿಚಾರಗಳಿವು
- ವಿಶ್ವದ ಶಾಂತಿಗೆ ವಸುದೈವ ಕುಟುಂಬಕಂ ತತ್ವ ಅಳವಡಿಸಿಕೊಳ್ಳಬೇಕು
- ಸೈಬರ್ ಅಪರಾಧವನ್ನು ತಡೆದು, ವಿಶ್ವಶಾಂತಿಗೆ ಪ್ರೇರಣೆ ನೀಡಬೇಕು
- ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣವಿದೆ
- ಭಯೋತ್ಪಾದನೆ, ಹವಾಮಾನ ವೈಪರಿತ್ಯ ನಿಯಂತ್ರಿಸಬೇಕು
- ಆರೋಗ್ಯ, ನೆಮ್ಮದಿ, ಪರಿಪೂರ್ಣತೆ ಬೇಕಿದ್ದರೇ ಉದ್ಯಮಿಗಳು ಭಾರತಕ್ಕೆ ಬನ್ನಿ
- ಸಮಸ್ಯೆಗಳ ಮಧ್ಯೆ ಚದುರಿರುವ ವಿಶ್ವವನ್ನು ಒಂದುಗೂಡಿಸುವ ಕಾರ್ಯವಾಗಬೇಕಿದೆ.
- ಜಾಗತಿಕ ತಾಪಮಾನ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು
- ವಿಶ್ವವನ್ನೇ ಮಾರುಕಟ್ಟೆಯಾಗಿಸಬೇಕು.
- ಭಯೋತ್ಪಾದನೆಯನ್ನು ಎಲ್ಲರೂ ಒಟ್ಟಾಗಿ ನಿಯಂತ್ರಿಸಬೇಕು
Leave A Reply