ಪ್ರಧಾನಿ ನರೇಂದ್ರ ಮೋದಿ ಅವರನ್ನೆ ಸೆಳೆದ ಆ ಪುಟ್ಟ ಬಾಲಕಿ ಕಾರ್ಯ ಎಲ್ಲರಿಗೂ ಮಾದರಿ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಚಾನಲ್ ಗಳಿಗೆ ನೀಡಿದ ಸಂದರ್ಶನದಲ್ಲಿ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರತ್ನಪ್ರಭಾ ಅವರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು, ಅಲ್ಲದೇ ಪ್ರಧಾನ ಮಂತ್ರಿ ಫಲ ಭೀಮಾ ಯೋಜನೆ ಅಚ್ಚುಕಟ್ಟಾಗಿ ಜಾರಿಗೆ ತಂದಿದ್ದಕ್ಕೆ ಬೀದರ ಸಂಸದ ಭಗವಂತ ಖೂಬಾ ಅವರನ್ನು ಶ್ಲಾಘಿಸಿದ್ದರು. ಇದೀಗ ಕಾಶ್ಮೀರದ ಪುಟ್ಟ ಹುಡುಗಿ ತನ್ನ ಕಾರ್ಯದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಶ್ಲಾಘನೆಗೆ ಪಾತ್ರಳಾಗಿದ್ದಾಳೆ.
ಮೋದಿ ಅವರ ಸ್ವಚ್ಛ ಭಾರತ ಕಲ್ಪನೆಗೆ ಪೂರಕವಾಗಿ ಪುಟ್ಟ ಬಾಲಕಿ ತನ್ನ ಕಾರ್ಯ ನಿರ್ವಹಿಸಿದ್ದು, ಕಸದಿಂದ ತುಂಬಿ ಹೋಗಿರುವ ಕಾಶ್ಮೀರದ ದಲಾಯಿ ಕೆರೆಯನ್ನು ಸ್ವಚ್ಛತೆ ಮಾಡುವ ಮೂಲಕ, ಆ ಕೆರೆಯನ್ನು ಉಳಿಸೋಣ, ಇಲ್ಲಿ ಯಾರು ಕಸವನ್ನು ಹಾಕಬೇಡಿ ಎಂಬ ಸಂದೇಶವಿರುವ ವಿಡಿಯೋ ಸಾಮಾಜಿಕ ಜಾಲಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಇದನ್ನು ಗುರುತಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿ, ಬಾಲಕಿ ನೀಡಿರುವ ಸಂದೇಶಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಸ್ವಚ್ಛ ಭಾರತ ಕಲ್ಪನೆಗೆ ಪೂರಕವಾಗಿ ಪುಟ್ಟ ಪೋರಿ ಮತ್ತು ಅವಳ ತಂದೆ ಕೆರೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಿದ್ದು, ಕಸವನ್ನು ಹಡಗಿನಲ್ಲಿ ತುಂಬಿಕೊಂಡು ಕೆರೆ ಸ್ವಚ್ಛ ಮಾಡಿದ್ದಾಳೆ. ನಾನೋಬ್ಬಳೇ ಮಾಡಿದರೇ ಕೆರೆ ಸ್ವಚ್ಛವಾಗುವುದಿಲ್ಲ. ಎಲ್ಲರೂ ಕಾರ್ಯಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾಳೆ. ಸುಂದರವಾದ ದಾಲ್ ಕೆರೆಯನ್ನು ರಕ್ಷಿಸಬೇಕು, ಅದನ್ನು ಕಲುಷಿತಗೊಳಿಸಬೇಡಿ ಎಂದು ಮುಗ್ದ ಮಾತುಗಳ ಮೂಲಕ ವಾಸ್ತವದ ಸಂದೇಶ ನೀಡಿದ್ದಾಳೆ.
The heaven on earth won't remain the same if we continue to pollute its beautiful lakes. This little girl seems to be giving the same message as she herself takes the responsibility of cleaning picturesque Dal Lake in Kashmir
Sunrise in Kashmir pic.twitter.com/qLc5Q51BIT— Aviator Anil Chopra (@Chopsyturvey) January 21, 2018
ಪುಟ್ಟ ಬಾಲಕಿ ನೀಡಿರುವ ಸಂದೇಶಕ್ಕೆ ಮಾರು ಹೋಗಿರುವ ಪ್ರಧಾನಿ ನರೇಂದ್ರ ಮೋದಿ ‘ಇಲ್ಲಿ ನೋಡಿ ಈ ಪುಟ್ಟ ಬಾಲಕಿ ತನ್ನ ಮುಂಜಾನೆಯನ್ನು ಹೇಗೆ ಸಾರ್ಥಕ ಮಾಡಿದ್ದಾಳೆ. ಸ್ವಚ್ಛ ಭಾರತ ಹವ್ಯಾಸ ರೂಡಿಸಿಕೊಂಡಿದ್ದಾಳೆ. ಇವಳ ಕಾರ್ಯ ಶ್ಲಾಘನೀಯ ಎಂದು ವಿಡಿಯೋ ಹಂಚಿದ್ದಾರೆ.
Leave A Reply