ಸೇನೆ ವಿರುದ್ಧವೇ ಮಾತನಾಡಿದ್ದ ಅಜಂ ಖಾನ್ ಗೆ ಸೇನೆ ಉಡುಗೊರೆ ನೀಡಿ ಅವರ ಮನಸ್ಸು ಬದಲಿಸಿದ್ದು ಹೇಗೆ ಗೊತ್ತಾ?
ಲಖನೌ: ಭಾರತೀಯ ಸೇನೆ, ಸೈನಿಕರು ಎಂದರೇನೆ ಹಾಗೆ. ಅವರು ಸ್ಫೂರ್ತಿಯ ಚಿಲುಮೆ. ಎಂತಹ ಕಲ್ಲು ಮನಸ್ಸುಗಳನ್ನೂ ದೇಶಭಕ್ತಿಯೆಡೆಗೆ, ಸೈನ್ಯದ ಮೇಲೆ ಹೆಮ್ಮೆ ಮೂಡಿಸುವೆಡೆಗೆ ಕೊಂಡೊಯುತ್ತಾರೆ. ಇದಕ್ಕೆ ಈಗ ಮತ್ತೊಂದು ನಿದರ್ಶನ ಸಿಕ್ಕಿದೆ.
ಉತ್ತರ ಪ್ರದೇಶದ ರಾಂಪುರದಲ್ಲಿರುವ ಮೊಹಮ್ಮದ್ ಅಲಿ ಜೌಹಾರ್ ವಿವಿಯ ಕುಲಪತಿ, ಸಚಿವ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಹಲವು ಬಾರಿ ಸೈನ್ಯದ ವಿರುದ್ಧ ಮಾತನಾಡಿ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡವರು. ಆದರೆ ಅವರಿಗೆ ಭಾರತೀಯ ಸೇನೆ ವತಿಯಿಂದ ಸೋವಿಯತ್ ಇರಾ ಟಿ-55 ಯುದ್ಧ ಟ್ಯಾಂಕರ್ ನೀಡುವ ಮೂಲಕ ಭಾರತೀಯ ಸೇನೆ ಮೇಲೆ ಹೆಮ್ಮ ಮೂಡುವಂತೆ ಮಾಡಲಾಗಿದೆ.
ಅಜಂ ಖಾನ್ ಅವರಿಗೆ ಟ್ಯಾಂಕರ್ ಹಸ್ತಾಂತರಿಸುವ ಮೂಲಕ ನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಯುದ್ಧ ಟ್ಯಾಂಕರ್ ಪ್ರತಿಷ್ಠಾಪಿಸಲಾಗಿದೆ.
ಭಾರತೀಯ ಸೇನೆಯ ಯುದ್ಧ ಟ್ಯಾಂಕರ್ ಒಂದು ಖಾಸಗಿ ವಿವಿಗೆ ನೀಡಬೇಕು ಎಂದು ಮನವಿ ಮಾಡಿದ್ದೆ. ಸೇನೆ ಅದನ್ನು ಒದಗಿಸಿದ್ದು, ನಮ್ಮ ಹಾಗೂ ಸೈನಿಕರ ಜತೆ ಉತ್ತಮ ಸಂಬಂಧವಿದೆ ಎಂದು ಅಜಂ ಖಾನ್ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಟ್ಯಾಂಕರ್ ಬೇಕು ಎಂದು ಅಜಂ ಮನವಿಯಲ್ಲಿ ತಿಳಿಸಿದ್ದರು. ಅದರಂತೆ ಟ್ಯಾಂಕರ್ ನೀಡಲಾಗಿದೆ.
1968ರಲ್ಲಿ ಈ ಯುದ್ಧ ಟ್ಯಾಂಕರ್ ಅನ್ನು ಭಾರತೀಯ ಸೇನೆ ಅವಳಡಿಸಿಕೊಂಡಿದ್ದು, 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಟ್ಯಾಂಕರ್ ಪ್ರಮುಖ ಪಾತ್ರ ನಿರ್ವಹಿಸಿತ್ತು. ಅಲ್ಲದೆ 2011ರವರೆಗೂ ಟ್ಯಾಂಕರ್ ಸೇನೆಯಲ್ಲಿ ಕಾರ್ಯನಿರ್ವಹಿಸಿತ್ತು.
Leave A Reply