ತುಳು ಭಾಷೆಯನ್ನು ನಿಂಧಿಸಿದ ಮುಖಂಡನ ಉಚ್ಚಾಟಿಸಿದ ಕರವೇ
ಬೆಂಗಳೂರು: ಫೇಸ್‌ಬುಕ್ ‘ ನಲ್ಲಿ ತುಳು ಹಾಗೂ ತುಳು ಭಾಷಿಕರನ್ನು ಅವಾಚ್ಯ, ಅಶಬ್ಧ, ಅಸಂವಿಧಾನಿಕ ಪದಗಳಿಂದ ನಿಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ ಜಾನ್ ನನ್ನು ಕರವೇ ಅಧ್ಯಕ್ಷ ಟಿ.ಎ ನಾರಾಯಣ ಗೌಡ ಉಚ್ಚಾಟಿಸಿ, ಆದೇಶ ಹೊರಡಿಸಿದ್ದಾರೆ.
ಕನ್ನಡದ ಸೋದರ ಭಾಷೆಯಾದ ತುಳು ಭಾಷೆ ಮತ್ತು ತುಳುನಾಡಿನ ಜನರ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಅಪಾರ ಗೌರವ ಹೊಂದಿದೆ. ತುಳು ಮತ್ತು ಕೊಡವ ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ನೀಡಲು 8ನೇ ಪರೀಚ್ಛೇದಕ್ಕೆ ಸೇರಿಸುವಂತೆ ಕರವೇ ಕೇಂದ್ರ ಸರಕಾರವನ್ನು ಹಲವು ಬಾರಿ ಒತ್ತಾಯಿಸಿದೆ ಎಂದು ನಾರಾಯಣ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕನ್ನಡಪರ ಹೋರಾಟಗಳ ಕುರಿತಾಗಿ ಅತ್ಯಂತ ಕೀಳು ಶಬ್ದಗಳಲ್ಲಿ ನಿಂದನೆ ಮಾಡುವ ಕೆಲಸ ಕನ್ನಡಿಗರಿಂದಲೇ ನಡೆಯುತ್ತಿರುವುದು ನೋವಿನ ಸಂಗತಿ. ಕರವೇ ಕಾರ್ಯಕರ್ತ ಜಾನ್ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ತುಳು ಭಾಷೆ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿರುವುದು ತಪ್ಪಾಗಿದೆ. ಇದು ಜಾನ್ ಹೇಳಿಕೆಯೇ ಹೊರತು ಕರ್ನಾಟಕ ರಕ್ಷಣಾ ವೇದಿಕೆ ನಿಲುವಲ್ಲ. ಆದ್ದರಿಂದ ತುಳು ಭಾಷೆ ಬಗ್ಗೆ ಅವಹೇಳನಕಾರಿ ಶಬ್ದ ಬಳಸಿರುವ ಜಾನ್ ಅವರನ್ನು ಕರವೇಯಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರವೇ ಮುಖಂಡರಿಂದಲೇ ಛೀಮಾರಿ
ಜಾನ್ ಕರವೇ ಫೇಸ್ ಬುಕ್ ಹೆಸರಿನ ಈತ ತುಳು ಭಾಷೆ ವಿರುದ್ಧ ಕೆಟ್ಟ ಪದಗಳನ್ನು ಬಳಸಿದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಕರವೇ ಮುಖಂಡರೇ ಜಾನ್ ಗೆ ಛೀಮಾರಿ ಹಾಕಿದ್ದರು. ಅಲ್ಲದೇ ತುಳುನಾಡಿನ ಸಂಘಟನೆಗಳು ಮತ್ತು ಕೊಡವ ಸಂಘಟನೆಗಳು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು.
Leave A Reply