• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸುರತ್ಕಲ್ ಎನ್ಐಟಿಕೆ ಕಡಲ ನಡುವಿನ ದಿಬ್ಬ ಸಾವಿಗೆ ಕರೆದೊಯ್ಯುತ್ತದೆ!

TNN Correspondent Posted On July 13, 2017
0


0
Shares
  • Share On Facebook
  • Tweet It

ಸುರತ್ಕಲ್ ಎನ್ ಐಟಿಕೆ ಕಡಲ ತೀರ ಪ್ರವಾಸಿಗರಿಗೆ ಯಾವತ್ತೂ ತನ್ನ ಸೌಂದರ್ಯದಿಂದ ಸೆಳೆಯುವುದು ನಮಗೆಲ್ಲಾ ಗೊತ್ತೇ ಇದೆ. ಅಲ್ಲಿ ಸಿಗುವ ಏಕಾಂತ ಮತ್ತು ಜನಜಂಗುಳಿ ಕಡಿಮೆ ಇರುವ ವಾತಾವರಣ ಯಾವತ್ತಿಗೂ ಮನಸ್ಸಿಗೆ ಮುದ ನೀಡುತ್ತದೆ. ಅದಕ್ಕಾಗಿ ಹೆಚ್ಚಾಗಿ ಯುವಕ, ಯುವತಿಯರು ಅಲ್ಲಿ ಬರುತ್ತಾರೆ. ಅದರಲ್ಲಿಯೂ ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತು ಹೋದ ಹಳೆ ವಿದ್ಯಾರ್ಥಿಗಳು ಕೂಡ ಅಲ್ಲಿಗೆ ಅಪರೂಪಕ್ಕೊಮ್ಮೆ ಬರುತ್ತಾರೆ. ಹಾಗೆ ಬರುವವರು ಸ್ವಲ್ಪ ಎಚ್ಚರ ತಪ್ಪಿದರೂ ಸಾವಿನೊಂದಿಗೆ ಸಂಬಂಧ ಹೊಂದುವುದು ಗ್ಯಾರಂಟಿ.

ಇತ್ತೀಚೆಗೆ ಬೆಂಗಳೂರಿನ ಕೆಆರ್ ಪುರಂನಿಂದ ಪ್ರವಾಸಕ್ಕೆಂದು ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಯುವಕರ ಗುಂಪು ಸುರತ್ಕಲ್ ಕಡಲ ಕಿನಾರೆಯಲ್ಲಿ ದುರಂತಕ್ಕೆ ಸಿಲುಕಿ ಗೃಹರಕ್ಷಕ ದಳದ ಮುಳುಗುತಜ್ಞರ ಸಹಕಾರದಿಂದ ಬದುಕಿ ಉಳಿದ ಘಟನೆ ವರದಿಯಾಗಿದೆ. ಏಳು ಜನ ಪ್ರವಾಸಿಗರಿದ್ದ ತಂಡದಲ್ಲಿ ಐದು ಜನ ಸೋಮವಾರ ಎನ್ ಐಟಿಕೆ ಕಡಲ ಕಿನಾರೆಯ ದಡದಲ್ಲಿ ನಿಂತಿದ್ದರೆ ಇಬ್ಬರು ನೀರಿಗೆ ಇಳಿದಿದ್ದರು. ಆ ಇಬ್ಬರು ಅಲ್ಲಿಯೇ ನೀರಿನ ನಡುವೆ ಇರುವೆ ದಿಬ್ಬವನ್ನು ಏರಿ ಸೆಲ್ಫಿ ತೆಗೆಯುತ್ತಾ ಎಂಜಾಯ್ ಮಾಡುತ್ತಿದ್ದರು. ಅದೇ ಸಮಯಕ್ಕೆ ಸಮುದ್ರದಲ್ಲಿ ನೀರಿನ ಅಬ್ಬರ ಜಾಸ್ತಿಯಾಗುತ್ತಾ ಬಂತು. ಅದರಿಂದ ದಿಬ್ಬ ನೀರಲ್ಲಿ ಮುಳುಗುವ ಸನ್ನಿವೇಶ ನಿರ್ಮಾಣವಾಗಿತ್ತು. ಒಂದಿಷ್ಟು ನೀರಿನ ಪ್ರಮಾಣ ಹೆಚ್ಚಾದಲ್ಲಿ ಇಬ್ಬರು ಕೂಡ ನೀರಿನ ರಭಸಕ್ಕೆ ಸಮುದ್ರದಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಸೃಷ್ಟಿಯಾಗಿತ್ತು. ಅಂತಹ ಹೊತ್ತಿನಲ್ಲಿ ಇಬ್ಬರಲ್ಲಿ ಒಬ್ಬ ಯುವಕ ನೀರಿನ ರಭಸ ಕಡಿಮೆಯಾದ ತಕ್ಷಣ ಈಜಿ ದಡ ಸೇರಿದರೆ, ಮತ್ತೊಬ್ಬ ಯುವಕ ದಿಣ್ಣೆಯ ಮೇಲೆಯೇ ನಿಂತು ರಕ್ಷಣೆಗಾಗಿ ಮೊರೆಯಿಡುತ್ತಿದ್ದ. ಸಸಿಹಿತ್ಲುವಿನಲ್ಲಿ ನಡೆದ ದುರ್ಘಟನೆಯಲ್ಲಿ ಕಣ್ಮರೆಯಾಗಿರುವ ಮೂರು ಜನರ ಹೆಣಗಳನ್ನು ಹುಡುಕುವ ಕೆಲಸದಲ್ಲಿ ನಿರತರಾಗಿದ್ದ ಮುಲ್ಕಿ ಗೃಹ ರಕ್ಷಕ ದಳದ ಏಳು ಜನರ ತಂಡ ಹಿಂತಿರುಗುವಾಗ ಈ ಯುವಕ ಜೀವರಕ್ಷಣೆಗಾಗಿ ಕೂಗು ಹಾಕುವುದು ಅವರ ಗಮನಕ್ಕೆ ಬಂದಿದೆ. ಇದರಿಂದ ತಕ್ಷಣ ಜಾಗೃತರಾದ ತಂಡದ ಯುವಕರು ಹಗ್ಗದ ಸಹಾಯದಿಂದ ಯುವಕನನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಿಸಲ್ಪಟ್ಟ ಯುವಕನನ್ನು ಭರತ್ ಎಂದು ಗುರುತಿಸಲಾಗಿದೆ.

ಕಾರ್ಯಾಚರಣೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಂಗಳೂರು ತಹಶೀಲ್ದಾರ್ ಮಹದೇವಪ್ಪ ಅವರು ಗೃಹ ರಕ್ಷಕ ದಳದ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಒಂದು ಜೀವ ಉಳಿಯಲು ಸಾಧ್ಯವಾಯಿತು. ಇಲ್ಲದೆ ಹೋದರೆ ಸಸಿಹಿತ್ಲುವಿನಲ್ಲಿ ಆದ ದುರ್ಘಟನೆ ಮರುಕಳಿಸುತ್ತಿತ್ತು ಎಂದರು. ಮಳೆಗಾಲದ ಸಂದರ್ಭದಲ್ಲಿ ಸಮುದ್ರದಲ್ಲಿ ಅಲೆಯ ಅಬ್ಬರ ಜೋರಾಗಿರುತ್ತವೆ ಎಂದು ಹೇಳಿದ ಅವರು, ಯಾವುದೇ ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ. ಒಟ್ಟು ನಲ್ವತ್ತು ತಂಡಗಳು ಇದಕ್ಕಾಗಿ ರಚಿಸಲಾಗಿದೆ. ಮಳೆಯ ವಿಕೋಪದಿಂದ ಯಾವುದಾದರೂ ಶಾಲೆಗೆ ಸಮಸ್ಯೆಯಾದರೆ ಶಾಲಾ ಆಡಳಿತ ಮಂಡಳಿಗೆ ರಜೆ ಕೊಡುವ ಅಧಿಕಾರವನ್ನು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ನೀಡಿದೆ ಎಂದರು.

ಸಮುದ್ರ ತೀರದಲ್ಲಿ ಅಪಾಯಕಾರಿ ಜಾಗ ಎಂದು ಬೋರ್ಡರ್ ಹಾಕಿದ್ದರೂ ಪರವೂರಿನಿಂದ ಬರುವ ಪ್ರವಾಸಿಗರಿಗೆ ಇದರ ಪ್ರಾಮುಖ್ಯತೆ ಗೊತ್ತಿರುವುದಿಲ್ಲ. ಆದ್ದರಿಂದ ಇಂತಹ ಸಂದರ್ಭದಲ್ಲಿ ನೀರಿನ ಆಳಕ್ಕೆ ಇಳಿಯುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ ಎಂದು ಮಹದೇವಪ್ಪ ತಿಳಿಸಿದರು.

 

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Tulunadu News June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search