• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕೋಮುಗಲಭೆಯಲ್ಲಿ ಭಾಗಿಯಾದ ಅಲ್ಪಸಂಖ್ಯಾತರಿಗೆ ರಿಲೀಸ್ ಭಾಗ್ಯ!

Hanumantha Kamath Posted On January 26, 2018
0


0
Shares
  • Share On Facebook
  • Tweet It

ಸಿದ್ಧರಾಮಯ್ಯನವರು ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮ್ಮ ಜೋಳಿಗೆಯಲ್ಲಿರುವ ಅತ್ಯಂತ ಹಳೆಯ ಮತ್ತು ಇಡೀ ಕಾಂಗ್ರೆಸ್ ಪಕ್ಷದ ಜೀವಾಳವಾಗಿರುವ ದಾಳವೊಂದನ್ನು ಉರುಳಿಸಲು ಸಿದ್ಧರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ನಿಂದ ಸರಿದು ಹೋಗುತ್ತಿರುವ ಪ್ರಬಲ ಮತಬ್ಯಾಂಕೊಂದನ್ನು ಹಗ್ಗ ಕಟ್ಟಿ ತಮ್ಮ ದಡಕ್ಕೆ ಎಳೆಯಲು ಸನ್ನದ್ಧರಾಗಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ಕಡೆಯಿಂದ ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮತ್ತು ಪೊಲೀಸ್ ಕಮೀಷನರ್ ಗಳಿಗೆ ಹೋಗಿರುವ ಸುತ್ತೋಲೆಯೊಂದು ಅಸಹ್ಯ ರಾಜಕೀಯವೊಂದರ ಪರಮಾವಧಿ ಎಂದೇ ಬಿಂಬಿತವಾಗಿದೆ. ಆ ಸುತ್ತೋಲೆ ಹೇಗಿದೆಯೆಂದರೆ ಪೊಲೀಸ್ ಅಧಿಕಾರಿಗಳ ಮೇಲೆ ಪರೋಕ್ಷವಾಗಿ ಮಾಡಿರುವ ದಬ್ಬಾಳಿಕೆ ಎಂದೇ ಪರಿಗಣಿಸಬಹುದು. ಅದರಲ್ಲಿ ಬರೆದ ವಿಷಯವನ್ನು ಓದಿದರೆ ಏನು ಅನಿಸುತ್ತದೆ ಎಂದರೆ “ನೀವು ಒಳ್ಳೆಯ ಮಾತಿನಲ್ಲಿ ನಮ್ಮ ಸರಕಾರ ಹೇಳಿದ್ದನ್ನು ಕೇಳಿದರೆ ಬಚಾವ್, ಇಲ್ಲದಿದ್ದರೆ ಗಣಪತಿ, ಬಂಡೆ, ಡಿಕೆ ರವಿ, ಇಲಾಖೆಯಿಂದ ಹೊರಡೆದ ಅನುಪಮಾ ಶೆಣೈ ಸಹಿತ ಹಲವರಿಗೆ ಆದದ್ದು ಗೊತ್ತೇ ಇದೆಯಲ್ಲ, ಹಾಗೆ ಮಾಡಿ ಬಿಡುತ್ತೇವೆ. ನಾವು ಹಾಗೆ ಮಾಡಿದ ನಂತರ ಯಾವ ಸಿಬಿಐ, ಸಿಐಡಿ ತನಿಖೆಯಿಂದಲೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ನಾವು ಈ ಸುತ್ತೋಲೆಯಲ್ಲಿ ಹೇಳಿದ್ದನ್ನು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಂಡರೆ ನಿಮಗೂ ಒಳ್ಳೆಯದು, ನಮಗೂ ಒಳ್ಳೆಯದು. ಜಾಸ್ತಿ ಹಟ ಮಾಡಿದರೆ ಅಥವಾ ಅಲ್ಪಸಂಖ್ಯಾತರು ತಪ್ಪು ಮಾಡಿದ್ದಾರೆ, ಹಾಗೆ ಬಿಡಲು ಆಗುವುದಿಲ್ಲ ಎಂದು ವರಾತೆ ತೆಗೆದರೆ ನಿಮ್ಮನ್ನು ಮೇಲೆ ಕಳುಹಿಸಬೇಕಾ, ಕೆಳಗೆ ಕಳುಹಿಸಬೇಕಾ ಎಂದು ನಾವು ನಿರ್ಧರಿಸುತ್ತೇವೆ. ನಮ್ಮ ಮಾತು ಕೇಳಿದರೆ ನೀವು ನಿಮ್ಮ ಹೆಂಡತಿ, ಮಕ್ಕಳು ಚೆನ್ನಾಗಿರುತ್ತೀರಿ. ಇಲ್ಲದಿದ್ದರೆ ನಿಮ್ಮ ದಾರಿ ನಿಮಗೆ, ಮುಂದಿನ ಬಾರಿ ಮತ್ತೆ ನಾವೇ ಬರೋದು, ಯೋಚಿಸಿ”

ಹೀಗೆ ಸುತ್ತೋಲೆಯಲ್ಲಿ ಬರೆದಿದ್ದರೆ ಅದು ಯಾವುದೋ ರೌಡಿಗಳು ಬರೆದ ಲೆಟರ್ ಇದ್ದ ಹಾಗೆ ಇದೆಯಲ್ಲ ಎಂದು ಪೊಲೀಸ್ ವರಿಷ್ಟಾಧಿಕಾರಿಗಳು ಮತ್ತು ಕಮೀಷನರ್ ಗಳು ಅಂದುಕೊಳ್ಳುವ ಚಾನ್ಸ್ ಇರುವುದರಿಂದ ಇನ್ನೊಂದು ರೀತಿಯಲ್ಲಿ ಬರೆದಿದ್ದಾರೆ. ಅದನ್ನು ಈ ಜಾಗೃತಿ ಅಂಕಣದೊಂದಿಗೆ ಪೋಸ್ಟ್ ಮಾಡಿದ್ದೇನೆ. ಅದರಲ್ಲಿ ಅವರು ಸ್ಪಷ್ಟವಾಗಿ ಬರೆಯಲಾಗಿದೆ. 2013, 14,15,16,17 ರ ಒಳಗೆ ನಡೆದ ಅಷ್ಟೂ ಕೋಮುಗಲಭೆಗಳಲ್ಲಿ ಆರೋಪಿಗಳೆಂದು ಗುರುತಿಸಲ್ಪಟ್ಟ ಅಲ್ಪಸಂಖ್ಯಾತರ ಮೇಲಿರುವ ಕೇಸನ್ನು ಹಿಂದಕ್ಕೆ ಪಡೆಯಲು ಏನು ಮಾಡಿದ್ದೀರಿ? “ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ” ಎನ್ನುವ ಶಬ್ದಗಳನ್ನು ಬೋಲ್ಡ್ ಲೆಟರ್ ನಲ್ಲಿ ಬರೆದದ್ದು ಹೇಗಿದೆಯೆಂದರೆ ಅದು ಅಭಿಪ್ರಾಯ ಕೇಳುವ ಲೆಟರಾ ಅಥವಾ “ಏನ್ರೀ, ಅಲ್ಪಸಂಖ್ಯಾತರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯಲು ಏನ್ರೀ ದಾಡಿ ನಿಮಗೆ” ಎಂದು ಉತ್ತರ ಕರ್ನಾಟಕದ ಶೈಲಿಯಲ್ಲಿ ದಬಾಯಿಸಿರುವ ಹಾಗಿದೆ. ಒಂದು ಲಿಖಿತ ಸುತ್ತೋಲೆಯನ್ನೇ ಹೀಗೆ ಬರೆಯುತ್ತಾರೆ ಎಂದರೆ ಪೊಲೀಸ್ ಅಧಿಕಾರಿಗಳನ್ನು ಸರಕಾರಿ ಅತಿಥಿ ಗೃಹಕ್ಕೆ ಕರೆಸಿ ಹೇಗೆ ದಬಾಯಿಸುತ್ತಾರೆ ಎನ್ನುವ ಕಲ್ಪನೆ ನಾವು ಮಾಡಬಹುದು. ಈ ಸುತ್ತೋಲೆ ಕೇವಲ ಸಾಂಕೇತಿಕ ಅಷ್ಟೇ. ಇದರ ನಂತರ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಕರೆಸಿ ಪರ್ಸನಲ್ ಆಗಿ ನಿಮ್ಮ ವ್ಯಾಪ್ತಿಯ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಹಾಗೂ ಪೊಲೀಸ್ ಕಮೀಷನರ್ ಗಳನ್ನು ಕರೆಸಿ ದಬಾಯಿಸಿ ಎಂದು ಸೂಚನೆ ಕೂಡ ಹೋಗಬಹುದು. ಆದರೆ ಈ ಬಾರಿ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಒತ್ತಡ ಹಾಕುವಾಗ ನಿಮ್ಮ ಜೊತೆ ಇರುವ ಹಿಂಬಾಲಕರತ್ರ ವಿಡಿಯೋ ಮಾತ್ರ ಮಾಡಿಸಬೇಡಿ ಎಂದು ಕೂಡ ಹೇಳಿರಬಹುದು. ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿ ಜೈಲಿಗೆ ಅಟ್ಟಿ, ಉಳಿದದ್ದು ನಾನು ನೋಡಿಕೊಳ್ಳುತ್ತೇನೆ” ಎಂದು ಹೇಳಿದ ರೀತಿಯಲ್ಲಿ ಹೆಚ್ಚು ಕಡಿಮೆ ಈ ಸುತ್ತೋಲೆಯಲ್ಲಿ ಪ್ರತಿಯೊಬ್ಬ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಕಮೀಷನರ್ ಗಳಿಗೆ ಹೇಳಲಾಗಿದೆ.

ಕೇಸ್ ಹಿಂದಕ್ಕೆ ಪಡೆಯಿರಿ, ಉಳಿದದ್ದು ನಾವು ನೋಡಿಕೊಳ್ಳುತ್ತೇವೆ…..

ಈಗ ಮುಂದಿನ ವಿಷಯಕ್ಕೆ ಬರೋಣ. ಕೋಮುಗಲಭೆಯಲ್ಲಿ ಮತ್ತು ಇತರ ಪ್ರಕರಣಗಳಲ್ಲಿ ಮುಗ್ಧ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯುವ ಬಗ್ಗೆ ಸುತ್ತೋಲೆ : ಈ ಸುತ್ತೋಲೆಯನ್ನು ಕಳುಹಿಸುವಾಗ ಬರೆದಿರುವ ಶಬ್ದಗಳನ್ನು ಗಮನಿಸಿ. ಮುಗ್ಧ ಅಲ್ಪಸಂಖ್ಯಾತರು. ಎರಡನೇಯದ್ದು ಕೋಮುಗಲಭೆ ಮತ್ತು ಇತರೆ ಪ್ರಕರಣಗಳಲ್ಲಿ ಎಂದು ಹೇಳಲಾಗಿದೆ. ರಾಜ್ಯ ಸರಕಾರ “ಇತರೆ” ಎಂದಿರುವ ಪ್ರಕರಣಗಳಲ್ಲಿ ಯಾವುದು ಬರುತ್ತದೆ ಎಂದು ಸ್ಪಷ್ಟವಾಗಿಲ್ಲ. ಅದರ್ಥ ಯಾವುದೂ ಕೂಡ ಬರಬಹುದು. ಇದು ಒಂದು ರೀತಿಯಲ್ಲಿ ಹೇಗಿದೆ ಎಂದರೆ ಅಲ್ಪಸಂಖ್ಯಾತರು ಭೂಮಿಯ ಮೇಲೆ ಜನ್ಮ ತಾಳಿದ ನಂತರ ಯಾವುದೇ ತಪ್ಪನ್ನು ಮಾಡಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಅವರನ್ನು ಬಂಧಿಸುವ ವಿಷಯವೇ ಬರುವುದಿಲ್ಲ. ಹೀಗೆ ಅರ್ಥ ಸಾಗುತ್ತದೆ ಅಥವಾ ಅಲ್ಪಸಂಖ್ಯಾತರು ಮಾಡುವ ಯಾವುದೇ ತಪ್ಪು ತಪ್ಪೇ ಅಲ್ಲ. ಹಾಗಿದ್ದ ಮೇಲೆ ಅವರಂತಹ ಮುಗ್ಧರ ಮೇಲೆ ಆರೋಪ ಹೊರಿಸುವುದು ಎಷ್ಟು ಸರಿ ಎನ್ನುವ ಅರ್ಥ ಕೂಡ ಇದೆ. ಇದೇ ಸುತ್ತೋಲೆಯನ್ನು ಹಿಡಿದು ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಮತಬಿಕ್ಷೆ ಕೇಳಲಿದ್ದಾರೆ. ಇದು ಕಾಂಗ್ರೆಸ್ಸಿಗೆ ಪ್ಲಸ್ ಆಗುತ್ತಾ ಅಥವಾ ಸಜ್ಜನ ಮತದಾರರಿಗೆ ಗೊತ್ತಾದರೆ ಅವರು ಅಸಹ್ಯ ಪಡೆಯುತ್ತಾರೆ ಎನ್ನುವ ಕಲ್ಪನೆ ಕೂಡ ಇಲ್ಲದೆ ಕಾಂಗ್ರೆಸ್ ನಾಯಕರು ವರ್ತಿಸಿರುವ ರೀತಿ ನೋಡಿದಾಗ ಅವರ ಅಲ್ಪಸಂಖ್ಯಾತರ ಒಲೈಕೆ ಅಥವಾ ತುಷ್ಟೀಕರಣಕ್ಕೆ ಬೇರೆ ಉದಾಹರಣೆ ಬೇಕಾ?

ರೈತರ ಮತ್ತು ಹಿಂದೂಗಳ ಮತ ಬೇಡವೇ ಸಿಎಂ…

ಇದೇ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಮೇಲಿನ ಕೇಸ್ ಹಿಂದಕ್ಕೆ ಪಡೆಯಲು ತೆಗೆದುಕೊಳ್ಳುವ ಆಸಕ್ತಿ ಮತ್ತು ಶ್ರಮವನ್ನು ರೈತರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯಲು ತೋರಿಸುವುದಿಲ್ಲ. ಅಷ್ಟಕ್ಕೂ ರೈತರೇನೂ ಕೋಮುಗಲಭೆ ಅಥವಾ ಗಲಾಟೆಯಲ್ಲಿ ಭಾಗಿಯಾಗಿ ಆರೋಪಿಗಳಾದವರಲ್ಲ. ಅವರದ್ದು ಬೆಂಬಲ ಬೆಲೆಗಾಗಿ ಹೋರಾಟ, ಸಾಲಮನ್ನಾಕ್ಕಾಗಿ ಪ್ರತಿಭಟನೆ, ಮಹಾದಾಯಿ-ಕಾವೇರಿ ನೀರಿಗಾಗಿ ನಡೆದ ಪ್ರತಿಭಟನೆ, ಅಂತದ್ದನ್ನು ಮಾಡಿದ್ದು ಬಿಟ್ಟರೆ ಅವರೇನೂ ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಅದಲ್ಲದೆ ರೈತರು ದೇಶದ ಬೆನ್ನೆಲುಬು ಎಂದು ವೇದಿಕೆಗಳಲ್ಲಿ ಭಾಷಣ ಕುಟ್ಟುವ ಸಿದ್ಧರಾಮಯ್ಯ ಮತ್ತು ಅವರ ಮಂತ್ರಿಗಣ ರೈತರ ಮೇಲಿನ ಕೇಸ್ ಹಿಂದಕ್ಕೆ ಪಡೆಯಲು ಮೀನಾಮೇಷ ಎಣಿಸುತ್ತಾ, ಅಲ್ಪಸಂಖ್ಯಾತರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆಯಲು ತೋರಿಸುವ ವೇಗ ನೋಡಿ ಅಲ್ಪಸಂಖ್ಯಾತ ಸಮುದಾಯದ ಪ್ರಜ್ಞಾವಂತರೇ ಛೀ, ಥೂ ಎನ್ನಬಹುದು. ಯಾಕೆಂದರೆ ಕೋಮುಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂದಾದರೆ ಅವರು ಇನ್ನೊಂದು ಧರ್ಮದವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಅಥವಾ ಹತ್ಯೆ, ಹತ್ಯಾ ಯತ್ನ ಮಾಡಿದ್ದರು ಎಂದೇ ಅರ್ಥ. ಅವರು ಸಮಾಜ ವಿರೋಧಿ ನಡೆಯವರು. ಅವರು ಕೇಸಿನಿಂದ ಬಿಡುಗಡೆಯಾದರೆ ಮತ್ತೊಮ್ಮೆ ಅವರಿಗೆ ಅಂತುಹುದನ್ನು ಮಾಡಲು ಧೈರ್ಯ ಬರುತ್ತದೆ, ಇನ್ನು ನಾವು ಏನು ಮಾಡಿದರೂ ಸಿದ್ಧರಾಮಯ್ಯ ಉಳಿಸುತ್ತಾರೆ ಎನ್ನುವ ಹುಂಬತನ ಬರುತ್ತದೆ. ಅವರು ಸಮಾಜಕ್ಕೆ ಕಂಟಕರಾಗುತ್ತಾರೆ. ಇನ್ನು ಕೋಮುಗಲಭೆಯಲ್ಲಿ ಭಾಗಿಯಾದವರು ಮುಗ್ಧರಾಗಲು ಹೇಗೆ ಸಾಧ್ಯ ಎನ್ನುವುದನ್ನು ಸಿದ್ಧರಾಮಯ್ಯನವರೇ ಹೇಳಬೇಕು. ಇದರೊಂದಿಗೆ ಮುಗ್ಧರು ಅಲ್ಪಸಂಖ್ಯಾತ ಸಮುದಾಯದಲ್ಲಿ ಮಾತ್ರ ಇದ್ದಾರೆ ಎನ್ನುವುದು ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ತೋರಿಸುತ್ತದೆ. ಇನ್ನು ಭವಿಷ್ಯದಲ್ಲಿ ಕೋಮುಗಲಭೆ ಅಥವಾ ಯಾವುದೇ ಅಹಿತಕರ ಘಟನೆ ನಡೆದಾಗ ಪೊಲೀಸರು ಅಲ್ಪಸಂಖ್ಯಾತರ ಮೇಲೆ ಕೇಸ್ ಹಾಕದೇ ಇರುವುದೇ ಒಳ್ಳೆಯದು. ಯಾಕೆಂದರೆ ಪುನ: ಕೇಸ್ ಬರೆಯಲು ಕಾಗದ ವೇಸ್ಟು, ಪೆನ್ ವೇಸ್ಟು, ಅದಕ್ಕೆ ಒಂದು ಕಡತ ವೇಸ್ಟು, ಬರೆಯುವ ಪೊಲೀಸ್ ಸಿಬ್ಬಂದಿಯ ಶಕ್ತಿ ವೇಸ್ಟು, ನಂತರ ಸರಕಾರ ಕಳುಹಿಸುವ ಇಂತಹ ಸುತ್ತೋಲೆಗಳಿಗೆ ಪುನ: ಕಾಗದ, ಪೆನ್ನು, ಶ್ರಮ ವೇಸ್ಟು. ಇನ್ನು ಮುಂದೆ ಯಾವುದೇ ಕೇಸ್ ಗಳಾದಾಗ ಪೊಲೀಸರು ಅದರಲ್ಲಿ ಭಾಗಿಯಾದವರು ಅಲ್ಪಸಂಖ್ಯಾತರಾದವರಾದರೆ ಆ ಕಡೆ ಹೋಗುವುದೇ ವೇಸ್ಟು!

0
Shares
  • Share On Facebook
  • Tweet It


- Advertisement -


Trending Now
ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
Hanumantha Kamath May 31, 2025
ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
Hanumantha Kamath May 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
    • ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search