ಲೋಕಸಭೆ ಚುನಾವಣೆ ಪೂರ್ವ ಸಮೀಕ್ಷೆ, ಬಿಜೆಪಿಗೆ ನೇತೃತ್ವದ ಎನ್ ಡಿಎಗೆ 300 ಸೀಟು ಗ್ಯಾರಂಟಿ
ದೆಹಲಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಹೆಚ್ಚಾಗುತ್ತಿದ್ದು, ಇತ್ತೀಚಿನ ಹಲವು ಸಮೀಕ್ಷೆಗಳನ್ನು ನೋಡಿದರೆ ನರೇಂದ್ರ ಮೋದಿ ಅವರೇ ಮುಂದಿನ ಬಾರಿಯೂ ಪ್ರಧಾನಿ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೆ ಪೂರಕವಾಗಿ ಎಬಿಪಿ ನ್ಯೂಸ್ ಹಾಗೂ ಲೋಕನೀತಿ ಸಿಎಸ್ ಡಿಎಸ್ ಎಂಬ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲೂ ಬಿಜೆಪಿ ಪರವೇ ಅಲೆಯಿರುವುದು ಖಚಿತವಾಗಿದ್ದು, ಈಗ ಲೋಕಸಭೆ ಚುನಾವಣೆ ನಡೆದರೂ ಎನ್ ಡಿಎ 293-309 ಸೀಟುಗಳನ್ನು ಗೆಲ್ಲುತ್ತದೆ ಎಂದು ತಿಳಿದುಬಂದಿದೆ.
ಆದಾಗ್ಯೂ, 272 ಮ್ಯಾಜಿಕ್ ನಂಬರ್ ಆಗಿದ್ದು, ಎನ್ ಡಿಎ ಏಕಮೇವವಾಗಿ ಶೇ.34ರಷ್ಟು ಮತಗಳನ್ನು ಪಡೆದು 300ಕ್ಕೂ ಅಧಿಕ ಸೀಟುಗಳಲ್ಲಿ ಗೆಲ್ಲುವ ಮೂಲಕ ದೇಶದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಅದೇ ರೀತಿ ಕಳೆದ ಬಾರಿಯಂತೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಮಕಾಡೆ ಮಲಗಲಿದ್ದು, ಯುಪಿಎ ಒಕ್ಕೂಟ ಕೇವಲ 127 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಇತರ ಪಕ್ಷಗಳು 83 ಸೀಟುಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಸಮೀಕ್ಷೆ ತಿಳಿದಿದೆ.
ಒಟ್ಟಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಹೇಗೆ ರಾಷ್ಟ್ರದ ಹೆಗ್ಗಳಿಕೆ ಹೆಚ್ಚಾಗುತ್ತಿದೆಯೋ, ಅದೇ ರೀತಿ ಮೋದಿ ಅವರ ಪ್ರಭಾವ ಕೂಡ ಹೆಚ್ಚಾಗುತ್ತಿರುವುದಕ್ಕೆ ಇತ್ತೀಚಿನ ಸಮೀಕ್ಷೆಗಳೇ ಸಾಕ್ಷಿಯಾಗಿವೆ.
Leave A Reply