ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧಕ್ಕೆ ಅರ್ಥ ಹಾಗೂ ಅದನ್ನು ವೃದ್ಧಿಸಲು ಮೋದಿ ಶಕ್ತರು ಎಂದಿದ್ದು ಯಾರು ಗೊತ್ತೇ?
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವ ಪರ್ಯಟನೆ ಹಾಗೂ ಅವರ ಶಕ್ತ ನಾಯಕತ್ವ ವಿಶ್ವವನ್ನೇ ಮೂಕವಿಸ್ಮಿತಗೊಳಿಸುತ್ತಿದ್ದು, ಅಂತಾರಾಷ್ಟ್ರೀಯ ತಾಂತ್ರಿಕ ತಜ್ಞ ಫರೀದ್ ಝಕಾರಿಯಾ ಅವರು ಮೋದಿ ಅವರನ್ನು ಹೊಗಳಿದ್ದಾರೆ.
ನರೇಂದ್ರ ಮೋದಿ ಅವರು ಶಕ್ತ ನಾಯಕರಾಗಿದ್ದು, ಅವರು ಮನಸ್ಸು ಮಾಡಿದರೆ ಪಾಕಿಸ್ತಾನದೊಂದಿಗೆ ಭಾರತ ಹೊಂದಿರುವ ಸಂಬಂಧಕ್ಕೆ ಹೊಸ ಭಾಷ್ಯ ಬರೆಯಬಲ್ಲರು, ಆ ರಾಷ್ಟ್ರದ ಮನ ಪರಿವರ್ತನೆ ಮಾಡಿ, ಸ್ನೇಹದ ಸೇತುವೆ ಕಟ್ಟಬಲ್ಲರು ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಬಣ್ಣಿಸಿದ್ದಾರೆ.
ಹಾಗೆ ನೋಡಿದರೆ ಅಭಿವೃದ್ಧಿ ದಿಸೆಯಲ್ಲಿ ಚೀನಾ ಆಟವಾಡುತ್ತದೆ. ರಷ್ಯಾ ಸಹ ಈ ಆಟದಲ್ಲಿ ಪಾಲ್ಗೊಳ್ಳುತ್ತಿದೆ. ಆದರೆ ಭಾರತ ಮಾತ್ರ ಯಾವುದೇ ತಂತ್ರ ಹಾಗೂ ಮೈಂಡ್ ಗೇಮ್ ಆರಂಭಿಸದೆ, ಕೇವಲ ಅಭಿವೃದ್ಧಿಯೆಡೆಗೆ ಗಮನ ಹರಿಸುತ್ತಿದೆ ಎಂದು ಝಕಾರಿಯಾ ಬಣ್ಣಿಸಿದ್ದಾರೆ.
ಅಷ್ಟೇ ಅಲ್ಲ, ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ನರೇಂದ್ರ ಮೋದಿ ಅವರ ಭಾಷಣದ ಕುರಿತು ಸಹ ಝಕಾರಿಯಾ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದಾವೋಸ್ ನಲ್ಲಿ ಉತ್ತಮ ವಿಚಾರಗಳನ್ನು ಮಂಡಿಸಿದರು ಎಂದಿದ್ದಾರೆ.
ಹಾಗೆಯೇ ಭಾರತ ಹಲವು ತಂತ್ರಗಳನ್ನು ಹೆಣೆಯಬೇಕು, ಅಭಿವೃದ್ಧಿಯೆಡೆಗಿನ ಗಮನವನ್ನು ಮತ್ತಷ್ಟು ಕೇಂದ್ರೀಕರಿಸಬೇಕು ಹಾಗೂ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತಷ್ಟು ಪಳಗಬೇಕು ಎಂದು ಝಕಾರಿಯಾ ಸಲಹೆ ನೀಡಿದ್ದಾರೆ.
Leave A Reply