ಲಂಡನ್ ನಲ್ಲಿ ಪ್ರತ್ಯೇಕ ಕಾಶ್ಮೀರಕ್ಕೆ ಬೆಂಬಲಿಸಿದವನ ನೀರಿಳಿಸಿದ ಭಾರತೀಯರು
ದೆಹಲಿ: ಲಂಡನ್ ನಲ್ಲಿ ಭಾರತದ ಗಣರಾಜ್ಯೋತ್ಸವಂದು ಬ್ರಿಟಿಷ್ ಹೌಸ್ ಆಫ್ ಲಾರ್ಡ್ ನ ಸದಸ್ಯ ನಾಝೀರ್ ಅಹ್ಮದ್ ಕಾಶ್ಮೀರ ಮತ್ತು ಖಲೀಸ್ತಾನ ಪ್ರತ್ಯೇಕ ರಾಷ್ಟ್ರಕ್ಕೆ ಆಗ್ರಹಿಸಿದ ಕರಾಳ ದಿನ ಘೋಷಿಸಿದಕ್ಕೆ ಭಾರತೀಯರು ಆತನ ನೀರಿಳಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಂಡನ್ ನ ಭಾರತೀಯ ರಾಯಭಾರಿ ಕಚೇರಿ ಬಳಿ ನಾಝೀರ್ ನ ನೂರಾರು ಬೆಂಬಲಿಗರು ಭಾರತದ ವಿರುದ್ಧ ಪ್ರತಿಭಟನೆ ನಡೆಸಲು ಬೀದಿಗಿಳಿದಿದ್ದರು. ಈ ವೇಳೆ ಸುದ್ದಿ ಅರಿತು ಸ್ಥಳಕ್ಕೆ ಬಂದ ಭಾರತದ ಹೆಮ್ಮೆಯ ಭಾರತೀಯರು ನಾಝೀರ್ ಬೆಂಬಲಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಂದೇ ಮಾತರಂ, ಬೋಲೋ ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗಿ ನಾಝೀರ್ ನ ನೀರಿಳಿಸಿದರು.
ಭಾರತ ಗಣರಾಜ್ಯೋತ್ಸವದಂದೇ ನಾಝೀರ್ ಅಹ್ಮದ ಹಮ್ಮಿಕೊಂಡಿರುವ ಪ್ರತಿಭಟನೆ ಭಾರತದ ವಿರುದ್ಧದ ದಬ್ಬಾಳಿಕೆಯನ್ನು ಎತ್ತಿ ತೋರುತ್ತದೆ ಎಂದು ಎಎನ್‌ಐ ವರದಿ ಮಾಡಿದೆ.
ಇನ್ನು ನಾಝೀರ್ ಪಾಕಿಸ್ತಾನದ ಪರ ಬಹಿರಂಗವಾಗಿ ಘೋಷಣೆ ನೀಡಿದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯರು ‘ನಾಝೀರ್ ಅವರೇ ನೀವು ಬ್ರಿಟಿಷ್ ಆಡಳಿತ ವ್ಯವಸ್ಥೆಯನ್ನು ಹಾಸ್ಯಾಸ್ಪದಗೊಳಿಸುತ್ತಿದ್ದೀರಿ. ನಾಝೀರ್ ನೀವು ಜಮ್ಮು ಮತ್ತು ಕಾಶ್ಮೀರ ಭಾರತದಿಂದ ಪ್ರತ್ಯೇಕವಾಗಲು ಬಯುತ್ತೀರಿ. ಆದರೆ ನಾನು ಜಮ್ಮು ಕಾಶ್ಮೀರದಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದನೆ, ಕದನ ವಿರಾಮ ಉಲ್ಲಂಘನೆ ಮತ್ತು ಪರೋಕ್ಷ ಸಮರ ಕೊನೆಗಾಣಬೇಕೆಂದು ಬಯಸುತ್ತೇನೆ,’ ಎಂದು ಭಾರತೀಯರು ನಾಝೀರ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
#WATCH Clashes erupted outside Indian High Commission in London as British Lord Nazir called for Azad Kashmir on India's Republic Day pic.twitter.com/IJQb3XajIu
— ANI (@ANI) January 26, 2018
Leave A Reply