ಮಾದರಿಯಾದ ಹಿಂದೂ ಯುವಕ, ಮುಸ್ಲಿಂ ಯುವತಿಯ ಒಲವಿನ ಮದುವೆ
ಮಂಡ್ಯ: ಹಿಂದೂ ಮಹಿಳೆಯರನ್ನು ತಮ್ಮ ಪ್ರೇಮ ಪಾಶಕ್ಕೆ ಬೀಳಿಸಿ, ಭಯೋತ್ಪಾದನೆ ದೂಡುವ ಘಟನೆ ನಡೆಯುತ್ತಿರುವುದು ದೇಶದಲ್ಲಿ ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಯುವ ಜೋಡಿ ಪವಿತ್ರ ಪ್ರೀತಿಯ ಬಾಂಧ್ಯವ್ಯಕ್ಕೆ ಒಳಗಾಗಿದ್ದು ಪರಸ್ಪರ ಒಪ್ಪಿಗೆ ಮೂಲಕ, ಯಾರ, ಯಾವುದೇ ಧರ್ಮ, ಜಾತಿಗಳ, ಷಡ್ಯಂತ್ರದವಿಲ್ಲದೇ ಮದುವೆಯಾಗಿದ್ದಾರೆ. ಈ ಮೂಲಕ ಧರ್ಮದ ಹೆಸರಲ್ಲಿ ಮಹಿಳೆಯರನ್ನು ವಂಚಿಸದೇ ಮದುವೆಯಾಗಿ ಸುಖ ಜೀವನ ನಡೆಸಬಹುದು ಎಂಬ ಸಂದೇಶ ನೀಡಿದ್ದಾರೆ.
ಸಾಮಾಜಿಕ ಚಳುವಳಿಯಲ್ಲಿ ಗುರುತಿಸಿಕೊಂಡಿರುವ ಮಂಡ್ಯ ಜಿಲ್ಲೆಯ ಯುವಕ ಶಿವಕುಮಾರ ಗುಳಘಟ್ಟ ಮತ್ತು ಬಳ್ಳಾರಿ ಮೂಲದ ನಸ್ರೀನ್ ಶುಕ್ರವಾದ ಮಂಡ್ಯ ನಗರದ ಹಿಂದಿ ಭವನದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಒಪ್ಪರಿಗೊಬ್ಬರು ಪರಸ್ಪರ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಒಲವಿನ ಮದುವೆಯೇ ಮುಖ್ಯ ಸೂತ್ರ: ಶಿವಕುಮಾರ ಮತ್ತು ನಸ್ರೀನ್ ಇಬ್ಬರ ಮದುವೆ ನಡೆದ ವೇದಿಕೆಗೆ ಒಲವಿನ ಮದುವೆ ಎಂದು ನಾಮಕರಣ ಮಾಡಲಾಗಿತ್ತು. ಇದು ಇಡೀ ಮದುವೆಗೆ ಶೋಭೆ ತಂದಿದ್ದಲ್ಲದೇ, ಒಂದು ಉದಾತ ಸಂದೇಶವನ್ನು ನೀಡಿತ್ತು. ಪ್ರೀತಿಯಲ್ಲಿ ಒಲವಿರಬೇಕು, ಯಾವುದೇ ದೂರುದ್ದೇಶ, ಧರ್ಮದ ಹುನ್ನಾರ ಇರಬಾರದು ಎಂಬ ಸಂದೇಶವನ್ನು ಈ ಜೋಡಿ ಸಮಾಜಕ್ಕೆ ತಮ್ಮ ಮದುವೆಯ ಮೂಲಕ ನೀಡಿದೆ.
Leave A Reply