ಬೀದರ್ ನಲ್ಲೂ ಲವ್ ಜಿಹಾದ್..? ಮದುವೆ ನಿರಾಕರಿಸಿದಕ್ಕೆ ಹಿಂದೂ ಯುವತಿ ಕೊಲೆ
ಬೀದರ್: ಶಾಂತಿ, ಸೌಹಾರ್ದತೆಯ ನಾಡಾದ ಬೀದರ್ ನಲ್ಲೂ ಮೂಲಭೂತವಾದಿಗಳ ಕರಾಳ ಮುಖ ಅನಾವರಣವಾಗುತ್ತಿದ್ದೆಯೇ ಎಂಬ ಅನುಮಾನ ಸೃಷ್ಟಿಯಾಗಿದ್ದು, ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿ ಪ್ರೀತಿಸಿ, ಮದುವೆಗೆ ನಿರಾಕರಿಸಿದಳು ಎಂದು ಹಿಂದೂ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಶಂಕಾಸ್ಪದ ಘಟನೆ ನಡೆದಿದೆ.
ಭಾಲ್ಕಿ ತಾಲೂಕಿನ ಮೈಲಾರ ಸಮೀಪದ ಗಾಯಮುಖ ಅರಣ್ಯ ಪ್ರದೇಶದಲ್ಲಿ ಮದುವೆಗೆ ನಿರಾಕರಿಸಿದ್ದಾಳೆ ಎಂದು ಯುವತಿಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಭಾಲ್ಕಿ ತಾಲೂಕಿನ ಕೋಸಮ್ ಗ್ರಾಮದ 19 ವರ್ಷದ ಯುವತಿ ಪೂಜಾ ಶಿವರಾಜ ಅದೇ ಗ್ರಾಮದ ಶಹಾಬುದ್ದಿನ್ ಎಂಬಾತನ ಮೋಹದ ಜಾಲಕ್ಕೆ ಬಲಿಯಾಗಿದ್ದಾಳೆ. ಯುವತಿಯನ್ನು ಪ್ರೀತಿಸಿ, ಮದುವೆಯಾಗು ಎಂದು ಪೀಡಿಸಿದ್ದಾನೆ. ಯುವತಿ ನಿರಾಕರಿಸಿದ್ದಾಗ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.
ಕೊಲೆ ಮಾಡಿರುವ ದುರುಳ ಶಹಾಬುದ್ದೀನ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಆದರೆ ಇದೊಂದು ಲವ್ ಜಿಹಾದ್ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಧನ್ನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave A Reply