ಕಟ್ಟುಪಾಡು ಮೀರಿ ಇಮಾಮ್ ಜವಾಬ್ದಾರಿ ನಿರ್ವಹಿಸುತ್ತಿರುವ ಮುಸ್ಲಿಂ ಮಹಿಳೆ
ತಿರುವನಂತರಪುರ: ಮುಸ್ಲಿಂ ಪುರುಷರ ಹಿಡಿತದಲ್ಲಿದ್ದ, ಮಹಿಳೆಯರನ್ನು ವಿಚಿತ್ರ ಕಾನೂನುಗಳ ಮೂಲಕ ನಿರ್ಬಂಧ ಹೇರಿದ್ದ, ಪುರುಷರೇ ಪ್ರಧಾನವಾಗಿರುವ ಮುಸ್ಲಿಂ ಮಸೀದಿಯ ಇಮಾಮ್ ಜವಾಬ್ದಾರಿಯನ್ನು ಮಹಿಳೆಯೊಬ್ಬರು ನಿರ್ವಹಿಸುವ ಮೂಲಕ ಮಾದರಿಯಾಗಿದ್ದಾರೆ.
ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇರಳದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಇಮಾಮ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಖುರಾನ್ ಸುನ್ನತ್ ಸೊಸೈಟಿಯ ಕಾರ್ಯದರ್ಶಿ ಜಮಿತಾ ಇಮಾಮ್ ಆಗಿ ಕಾರ್ಯನಿರ್ವಹಿಸುತ್ತಿರುವವರು. ಮುಸ್ಲಿಮರೇ ಪ್ರಾಬಲ್ಯವಾಗಿರುವ ಜಿಲ್ಲೆಯಲ್ಲಿ ಜಮಿತಾ ಇಮಾಮ್ ಆಗಿ ಕಾರ್ಯ ಆರಂಭಿಸಿ, ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಸಂಪ್ರದಾಯಿಕವಾಗಿ ಪ್ರತಿ ಶುಕ್ರವಾರ ಕೇವಲ ಪುರುಷ ಇಮಾಮ್ ಗಳೇ ಮಾಡುತ್ತಿದ್ದ ಪ್ರಾರ್ಥನೆ ಬೋಧನೆಯನ್ನು ಜಮಿತಾ ಮಾಡುತ್ತಿದ್ದಾರೆ. ಸುಮಾರು ಮಹಿಳೆಯರು ಸೇರಿ ಸುಮಾರು 80 ಜನರಿಗೆ ತರಬೇತಿ ನೀಡುತ್ತಿದ್ದರು. ಎಲ್ಲದಕ್ಕೂ ಮಹಿಳೆ ಜಮಿತಾ ನೇತೃತ್ವ ವಹಿಸುತ್ತಿದ್ದಾರೆ.
ಜಮಿತಾ ಟೀಚರ್ ಎಂದು ಖ್ಯಾತಿ ಪಡೆದಿರುವ ಜಮಿತಾ ‘ಖುರಾನ್ ಎಂದಿಗೂ ಪುರುಷ, ಮಹಿಳೆಯರ ಮಧ್ಯೆ ಭೇದ ಹುಟ್ಟಿಸಿಲ್ಲ. ಇಸ್ಲಾಂ ಮಹಿಳೆಯರು ಇಮಾಮ್ ಆಗುವುದನ್ನು ತಡೆಯುವುದಿಲ್ಲ ಎಂದು ಹೇಳಿದರು. ಇದು ಭಾರತದ ಇತಿಹಾಸದಲ್ಲೇ ಪ್ರಥಮವಾಗಿದ್ದು, ಜುಮ್ಹಾ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದೇನೆ. ನಮ್ಮ ಸಂಸ್ಥೆಯ ಕೇಂದ್ರೀಯ ಸಮಿತಿ ಸಹಾಯದಿಂದ ಈ ಕಾರ್ಯ ನಡೆದಿದೆ. ನಾನು ಪ್ರತಿ ಶುಕ್ರವಾರ ಪ್ರಾರ್ಥನೆಯಲ್ಲಿ ಇಮಾಮ್ ಆಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
Leave A Reply