ಸರಸ್ವತಿ ಪೂಜೆ ಮಾಡುತ್ತಿದ್ದ ಬಾಲಕಿ ಮೇಲೆ ನಾಲ್ವರು ಮುಸ್ಲಿಂ ಯುವಕರಿಂದ ಅತ್ಯಾಚಾರ, ಮೂವರ ಬಂಧನ!
ಡಿಸ್ಪುರ: ದೇಶದಲ್ಲಿ ಇಸ್ಲಾಂ ಧರ್ಮಕ್ಕೆ ಬಲವಂತದ ಮತಾಂತರ ಹಾಗೂ ಲವ್ ಜಿಹಾದ್ ಪ್ರಕರಣಗಳು ಸುದ್ದಿಯಾಗುತ್ತಿರುವ ಬೆನ್ನಲ್ಲೇ ಆಸ್ಸಾಂನಲ್ಲಿ ನಾಲ್ವರು ಮುಸ್ಲಿಂ ಯುವಕರು ಅಟ್ಟಹಾಸದ ಮೆರೆದಿದ್ದು, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆಸ್ಸಾಂನ ದೇಖಿಯಾಜುಲಿ ಎಂಬ ಪ್ರದೇಶದಲ್ಲಿ 15 ವರ್ಷದ ಬಾಲಕಿ ತನ್ನ ಮುಸ್ಲಿಂ ಗೆಳೆಯನೊಂದಿಗೆ ಸರಸ್ವತಿ ಪೂಜೆ ನಡೆಯುವ ಸ್ಥಳಕ್ಕೆ ಹೋಗಿದ್ದಾಳೆ. ಆಗ ಬಾಲಕಿ ಪೂಜೆಯಲ್ಲಿ ಭಾಗವಹಿಸಿದ್ದು,ನಂತರ ಗೆಳೆಯನ ಜತೆ ಮತ್ತೆ ಮೂವರು ಸೇರಿ ಆಕೆಯನ್ನು ಯಾರೂ ಇಲ್ಲದ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ ಎಂದು ತಿಳಿದುಬಂದಿದೆ.
ಬಳಿಕ ಬಾಲಕಿಯನ್ನು ಮನೆಗೆ ಕಳುಹಿಸಿದ್ದು, ಬಾಲಕಿ ವರ್ತನೆ ಆಧರಿಸಿ ಪೋಷಕರು ವಿಚಾರಿಸಿದಾಗ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ನಂತರ ಬಾಲಕಿ ಪೋಷಕರು ದೇಖಿಯಾಜುಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಲೇ ತನಿಖೆ ಆರಂಭಿಸಿದ ಪೊಲೀಸರು ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಂತಾಜುಲ್ ಅಮಿನ್, ಸಿರಾಜುಲ್ ಅಮಿನ್ ಹಾಗೂ ಅಮಿನ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಒಟ್ಟಿನಲ್ಲಿ ಗೆಳೆಯ ಎಂಬ ಕಾರಣಕ್ಕಾಗಿ ಪೂಜೆ ಜತೆ ತೆರಳಿದ್ದೇ ಬಾಲಕಿಯ ಭವಿಷ್ಯಕ್ಕೆ ಕಂಟಕವಾಗಿದ್ದು, ಪೋಷಕರು ಹಾಗೂ ಬಾಲಕಿ/ಯುವತಿಯರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
Leave A Reply