ಪಾಕಿಸ್ತಾನದಲ್ಲಿ ಮುಸ್ಲಿಮನ ಜತೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದೇ ಆ ಹಿಂದೂ ಕುಟುಂಬದ ತಪ್ಪಾಯಿತಾ?
ಇಸ್ಲಾಮಾಬಾದ್: ಪಾಕಿಸ್ತಾನ ಹೇಳಿಕೇಳಿ ಮುಸ್ಲಿಂ ಮೂಲಭೂತವಾದಿಗಳ ರಾಷ್ಟ್ರ. ಅಲ್ಲಿ ಹಿಂದೂಗಳು ಬಿಡಿ ಇಸ್ಲಾಮಿನ ಶಿಯಾ ಮತ್ತು ಸುನ್ನಿ ಮತೀಯರೇ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ. ಇಂಥಾದ್ದರಲ್ಲಿ ಹಿಂದೂ ಕುಟುಂಬವೊಂದು ಮಗಳನ್ನು ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಮದುವೆ ಮಾಡಿಕೊಟ್ಟು ಈಗ ಮಗಳ ದುಃಖ ನೋಡದೆ ದಿನವೂ ಸಂಕಷ್ಟ ಅನುಭವಿಸುತ್ತಿದ್ದಾರೆ.
ಹೌದು, ಖಿಪ್ರೋದ ಹತುಂಗೋದಲ್ಲಿ ನೆಲೆಸಿದ್ದ ಗೋರ್ಧನ್ ಖಾತ್ರಿ ಒಬ್ಬ ಹಿಂದೂ ಸಂಪ್ರದಾಯಸ್ಥ ಹಾಗೂ ಹೋಮಿಯೋಪಥಿ ಡಾಕ್ಟರ್ ಆಗಿರುವುದರಿಂದ ಉತ್ತಮ ಜೀವನವನ್ನೇ ಸಾಗಿಸುತ್ತಿದ್ದ. ಆತನ ಗೆಳೆಯ ಪಕ್ಕದ ಮನೆಯ ಮೊಹಮ್ಮದ್ ಯೂಸುಫ್ ಜತೆಗೂ ಉತ್ತಮ ಸಂಬಂಧವಿತ್ತು.
ಇದೇ ಕಾರಣಕ್ಕೆ ಮೊಹಮ್ಮದ್ ಯೂಸುಫ್ ಮಗ ಮೊಹಮ್ಮದ್ ಬಿಲಾಲ್ ಜತೆ 2016ರಲ್ಲಿ ಮದುವೆ ಮಾಡಿಕೊಟ್ಟಿದ್ದರು. ಬಿಲಾಲನ ಆಸೆಯಂತೆ ಮಗಳನ್ನು ಮತಾಂತರ ಮಾಡಲು ಒಪ್ಪಿ ಮೌಲ್ವಿ ಅಬ್ದುಲ್ ಗಫಾರ್ ಎಂದು ಬದಲಾಯಿಸಿದ್ದರೂ ಮಗಳು ಸುಖವಾಗಿರಲಿ ಎಂಬ ಕಾರಣಕ್ಕಾಗಿ ಖಾತ್ರಿ ಸುಮ್ಮನಿದ್ದರು.
ಅದಕ್ಕೆ ಪೂರಕವಾಗಿ ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ದಿನ ಕಳೆದಂತೆ ಅಪ್ಪ ಮೊಹಮ್ಮದ್ ಯೂಸುಫ್ ಹಾಗೂ ಮಗ ಮೊಹಮ್ಮದ್ ಬಿಲಾಲನ ಉಪಟಳ ಜಾಸ್ತಿಯಾಗಿ ಹೋಯಿತು.
ಗಫಾರ್ ಳನ್ನು ಬೈಯುವುದು, ಹಿಂಸಿಸುವುದು, ವರದಕ್ಷಿಣೆ ತರುವಂತೆ ಪೀಡುವುದು ಹಾಗೂ ಹಲ್ಲೆ ಮಾಡುವುದು ಸಾಮಾನ್ಯವಾಯಿತು.
ಆದರೆ ಇದು ಯಾವಾಗ ಅತಿಯಾಯಿತೋ, ಅಂದಿನಿಂದ ಇಸ್ಲಾಮಿಗೆ ಮತಾಂತರವಾಗಿದ್ದ ಹಿಂದೂ ಮಹಿಳೆ ಅಪ್ಪನ ಮನೆಯಲ್ಲಿ ಆಶ್ರಯ ಪಡೆದಳು. ಇಂದಿಗೂ ಅಪ್ಪ-ಅಮ್ಮನ ಮನೆಯಲ್ಲೇ ಗಫಾರ್ ವಾಸವಿದ್ದು, ದಿನವಿಡೀ ಕಣ್ಣಿರು ಸುರಿಸುತ್ತಿದ್ದಾಳೆ. ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ ಹಿಂದೂ ಕುಟುಂಬ ಸುಮಾರು 5 ಲಕ್ಷ ಮಿಲಿಯನ್ ಡಾಲರ್ ಹಣವನ್ನು ವರದಕ್ಷಿಣೆಯಾಗಿ ಮೊಹಮ್ಮದ್ ಯೂಸುಫ್ ಕುಟುಂಬಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈಗ ಮಗಳ ನೆಮ್ಮದಿಯೂ ಹೊಯ್ತು, ಹಣವೂ ಹೊಯ್ತು ಎನ್ನುವಂತಾಗಿದೆ ಪರಿಸ್ಥಿತಿ.
Leave A Reply